ಮನೆ ಯೋಗ ಸೂರ್ಯ ನಮಸ್ಕಾರ ಮಾಡಲು ಯಾವ ಸಮಯ ಉತ್ತಮ, ಪಾಲಿಸಬೇಕಾದ ಕ್ರಮಗಳು

ಸೂರ್ಯ ನಮಸ್ಕಾರ ಮಾಡಲು ಯಾವ ಸಮಯ ಉತ್ತಮ, ಪಾಲಿಸಬೇಕಾದ ಕ್ರಮಗಳು

0

ಯೋಗಾಸನಗಳಲ್ಲಿ ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿರುವ ಅಭ್ಯಾಸ ಎಂದರೆ ಅದು ಸೂರ್ಯ ನಮಸ್ಕಾರ. ಆರೋಗ್ಯಕ್ಕೆ ಸಾಕಷ್ಟು ಲಾಭವನ್ನು ನೀಡುವ ಸೂರ್ಯ ನಮಸ್ಕಾರ ಯಾವ ಸಮಯದಲ್ಲಿ ಮಾಡುವುದು ಒಳ್ಳೆಯದು. ಸೂರ್ಯ ನಮಸ್ಕಾರ ಒಂದು ಅನುಕ್ರಮದಲ್ಲಿ 12 ನಿರ್ದಿಷ್ಟ ಆಸನಗಳ ಅಭ್ಯಾಸವಾಗಿದೆ.

ಈ ಸೂರ್ಯ ನಮಸ್ಕಾರ ಮಾಡಲು ಯಾವ ಸಮಯ ಒಳ್ಳೆಯದು, ಪಾಲಿಸಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೂರ್ಯ ನಮಸ್ಕಾರವನ್ನು ಬೆಳಿಗ್ಗೆ ಮತ್ತು ಸಂಜೆ ಮಾಡಬೇಕು. ಮಧ್ಯಾಹ್ನದ ಸಮಯದಲ್ಲಿ ಮಾಡಬಾರದು. ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡುವುದು ಹೆಚ್ಚು ಒಳ್ಳೆಯದು ಆಆರೋಗ್ಯಕ್ಕೂ ಸಾಕಷ್ಟು ಲಾಭಗಳನ್ನು ನೀಡುತ್ತದೆ. ಸಂಜೆ ವೇಳೆ ಸೂರ್ಯ ನಮಸ್ಕಾರ ಮಾಡಿದರೆ ಕಡಿಮೆ ಸುತ್ತುಗಳಲ್ಲಿ ಮಾಡಿ ಮತ್ತು ವೇಗವನ್ನು ನಿರ್ಭಂದಿಸಿ.

ಸೂರ್ಯ ನಮಸ್ಕಾರ ಮಾಡುವಾಗ ಕಣ್ಣುಗಳು ತೆರೆದಿರಬೇಕು. ಜೊತೆಗೆ ಬಾಯಿ ಮುಚ್ಚಿಕೊಂಡು ಮೂಗಿನ ಮೂಲಕ ಉಸಿರಾಡಿ. ಮುಖ್ಯವಾದ ಸಂಗತಿ ಎಂದರೆ ಫ್ಯಾನ್‌ ಅಥವಾ ಎಸಿ ಇಲ್ಲದೆ ನೈಸರ್ಗಿಕ ವಾತಾವರಣದಲ್ಲಿ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ಸೂರ್ಯ ನಮಸ್ಕಾರವನ್ನು ಎಲ್ಲಾ ಸಮಯದಲ್ಲಿ ಮಾಡಬೇಕಾದರೂ ಕೆಲವು ಕ್ರಮಗಳನ್ನು ಅನುಸರಿಸಬೇಕು. ಸೊಂಟದ ಕೀಲುಗಳು, ಮಣಿಕಟ್ಟುಗಳು ಮತ್ತು ಭುಜಗಳನ್ನು ಸಡಿಲಗೊಳಿಸುವುದು ಬಹಳ ಮುಖ್ಯ. ಹೆಚ್ಚು ಪರಿಣಾಮಕಾರಿ ಎಂದರೆ ಸುಪೈನ್ (ಹಿಂಭಾಗದಲ್ಲಿ ಮಲಗಿರುವ) ಹಿಪ್ ಸಡಿಲಗೊಳಿಸುವಿಕೆ ಏಕೆಂದರೆ ಇದು ಯಾವುದೇ ದೇಹದ ಭಾರವಿಲ್ಲದೆ ಸೊಂಟವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.

ಆರಂಭಿಕ ಹಂತ: ಸೂರ್ಯ ನಮಸ್ಕಾರದ ಎಲ್ಲಾ ಹಂತಗಳನ್ನು ಆರಂಭದಲ್ಲಿ ಅಭ್ಯಾಸ ಮಾಡುವುದಕ್ಕಿಂತ ಎಲ್ಲಾ ಹಂತಗಳನ್ನು ಮೂರು ಬಾರಿ ಅಭ್ಯಾಸ ಮಾಡುತ್ತಾ ಪ್ರಾರಂಭಿಸಿ. ನೈಸರ್ಗಿಕ ಉಸಿರಾಟದೊಂದಿಗೆ ದೈಹಿಕ ಚಲನೆಯನ್ನು ಮಾತ್ರ ಅಭ್ಯಾಸ ಮಾಡಿ, ನಂತರ ನೀವು ಉಸಿರಾಟದ ಸಮನ್ವಯವನ್ನು ತೆಗೆದುಕೊಳ್ಳಬಹುದು.

ಪ್ರತಿದಿನ ಅಭ್ಯಾಸ ಮಾಡುವವರು: ಸರಿಯಾದ ಉಸಿರಾಟದ ಸಮನ್ವಯ, ಸ್ಥಿರವಾದ ವೇಗ ಮತ್ತು 10-12 ಸುತ್ತುಗಳ ನಡುವೆ ಒಂದು ಅಥವಾ ಎರಡು ವಿರಾಮಗಳೊಂದಿಗೆ ಪ್ರತಿದಿನ ಅಭ್ಯಾಸ ಮಾಡಿ.

ಸತತ ಅಭ್ಯಾಸ ಮಾಡುವವರು: ಉಸಿರಾಟದ ಸಮನ್ವಯದೊಂದಿಗೆ ಅಭ್ಯಾಸ ಮಾಡಿ, ಪ್ರತಿ ಉಸಿರಾಟವನ್ನು ನಿಧಾನಗೊಳಿಸುವ ಮತ್ತು ದೀರ್ಘಗೊಳಿಸಿಕೊಳ್ಳಿ, ಪ್ರತಿ ಆಸನಕ್ಕೆ ದೃಷ್ಟಿ ನೇರವಾಗಿರಿಸುವುದನ್ನು ಅಭ್ಯಸಿಸಿಕೊಳ್ಳಿ. ಪ್ರತಿ ದಿನವೂ ವಿರಾಮವಿಲ್ಲದೆ 10-12 ಸುತ್ತುಗಳನ್ನು ಅಭ್ಯಾಸ ಮಾಡಿ.

ಸೂರ್ಯ ನಮಸ್ಕಾರವು ತೂಕವನ್ನು ಕಳೆದುಕೊಳ್ಳಲು, ಚಯಾಪಚಯ ಮತ್ತು ಸ್ನಾಯುವಿನ ಬಲವನ್ನು ಹೆಚ್ಚಿಸಲು ಅತ್ಯುತ್ತಮ ಅಭ್ಯಾಸವಾಗಿದೆ. ಸರಿಯಾದ ವೇಳಾಪಟ್ಟಿಯನ್ನು ಅನುಸರಿಸಿ ನಿಧಾನವಾಗಿ ಪ್ರಾರಂಭಿಸಿ. ನಂತರದ ದಿನಗಳಲ್ಲಿ ಅಭ್ಯಾಸದ ವೇಗವನ್ನು ಹೆಚ್ಚಿಸಿ. ಈ ಅನುಕ್ರಮದ ಪ್ರತಿಯೊಂದು ಆಸನಗಳು ದೇಹದಲ್ಲಿನ ವಿವಿಧ ಅಂಗಗಳು, ಸ್ನಾಯುಗಳು ಮತ್ತು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಸೂರ್ಯ ನಮಸ್ಕಾರ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಿಂದಿನ ಲೇಖನರಾಜ್ಯದಲ್ಲಿ 1127 ಮಂದಿಗೆ ಕೋವಿಡ್‌ ಪಾಸಿಟಿವ್‌
ಮುಂದಿನ ಲೇಖನಡಾ.ವೀರೇಂದ್ರ ಹೆಗ್ಗಡೆ, ಪಿಟಿ ಉಷಾ, ಇಳಯರಾಜ, ವಿಜಯೇಂದ್ರ ಪ್ರಸಾದ್‌ ರಾಜ್ಯಸಭೆಗೆ ನಾಮನಿರ್ದೇಶನ