ಬೆಳಕಿನ ಹಬ್ಬ ದೀಪಾವಳಿಗೆ ಸ್ಯಾಂಡಲ್’ವುಡ್’ನಿಂದ ಹೊಸ ಸಿನಿಮಾ ಥಿಯೇಟರ್’ಗೆ ಲಗ್ಗೆ ಇಟ್ಟಿದೆ. ಅದುವೇ ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ ‘ಹೆಡ್ ಬುಷ್’. ಬಹುತಾರಾ ಗಣದ ಈ ಸಿನಿಮಾ ಮೇಲೆ ಮೊದಲಿನಿಂದಲೂ ನಿರೀಕ್ಷೆ ಇತ್ತು.
‘ಹೆಡ್ ಬುಷ್’ ಮೇಲೆ ನಿರೀಕ್ಷೆ ಹೆಚ್ಚಿದಂತೆ ಡಾಲಿ ಧನಂಜಯ್, ಯೋಗಿ ಸೇರಿದಂತೆ ಸಿನಿಮಾದ ಪ್ರಮುಖ ಪಾತ್ರಧಾರಿಗಳು ಪ್ರಚಾರಕ್ಕೆಂದು ಅಖಾಡಕ್ಕೆ ಇಳಿದಿದ್ದರು.
ಹೀಗಾಗಿ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಹೈಪ್ ಪಡೆದುಕೊಂಡಿತ್ತು. ನಿನ್ನೆ (ಅಕ್ಟೋಬರ್ 21) ಈ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ.
ಮೊದಲ ದಿನದ ಶೋ ಎಷ್ಟು?
‘ಹೆಡ್ ಬುಷ್’ ಡಾಲಿ ಧನಂಜಯ್ ನಿರ್ಮಾಣದ ಎರಡನೇ ಸಿನಿಮಾ. ಈಗಾಗಲೇ ‘ಬಡವ ರಾಸ್ಕಲ್’ ಸಿನಮಾ ನಿರ್ಮಾಣ ಮಾಡಿ ಅನುಭವವಿರೋ ಧನಂಜಯ್ ಸಿನಿಮಾವನ್ನು ಜನರ ಬಳಿ ತಲುಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ‘ಹೆಡ್ ಬುಷ್’ ಸಿನಿಮಾವನ್ನು ಸುಮಾರು 494 ಸ್ಕ್ರೀನ್ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಮೊದಲು ಅಂದಾಜಿನ ಪ್ರಕಾರ ಸುಮಾರು 1127 ಶೋಗಳಲ್ಲಿ ‘ಹೆಡ್ ಬುಷ್’ ಸಿನಿಮಾ ಪ್ರದರ್ಶನ ಕಂಡಿದೆ. ಜೊತೆಗೆ ರಿಲೀಸ್’ಗೂ ಒಂದು ದಿನ ಮುನ್ನವೇ ಪೇಯ್ಡ್ ಪ್ರೀಮಿಯರ್ ಶೋವನ್ನೂ ಏರ್ಪಡಿಸಲಾಗಿತ್ತು. ಇವೆಲ್ಲವುಗಳಿಂದ ಉತ್ತಮ ಕಲೆಕ್ಷನ್ ಮಾಡಿದೆ ಅನ್ನೋದು ಸ್ಯಾಂಡಲ್ವುಡ್ ಪಂಡಿತರ ಲೆಕ್ಕಾಚಾರ.
ಮೊದಲ ದಿನ ‘ಹೆಡ್ ಬುಷ್’ ಕಲೆಕ್ಷನ್ ಎಷ್ಟು?
‘ಹೆಡ್ ಬುಷ್’ ಸಿನಿಮಾ ಮೊದಲ ದಿನ ಕಲೆಕ್ಷನ್ ಜೋರಾಗಿದೆ ಎನ್ನುತ್ತಿವೆ ಸ್ಯಾಂಡಲ್ವುಡ್ ಮೂಲಗಳು. ಈ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ ಅನ್ನೋದು ವಿತರಕರು ನೀಡುತ್ತಿರುವ ಮಾಹಿತಿ. ಅಂದ್ಹಾಗೆ ಮೊದಲ ದಿನ ‘ಹೆಡ್ ಬುಷ್’ ಸಿನಿಮಾ 3.50 ಕೋಟಿ ರೂಪಾಯಿಂದ 4 ಕೋಟಿ ರೂಪಾಯಿ ವರೆಗೂ ಕಲೆಕ್ಷನ್ ಆಗಿರಬಹುದು ಎಂದು ಅಂದಾಜಿಸಿದ್ದಾರೆ. ಅದೇ ಇನ್ನೊಂದು ಮೂಲ, 4.23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳುತ್ತಿದೆ. ಈ ಕಾರಣಕ್ಕೆ ಡಾಲಿಗೆ ಮೊದಲ ದಿನ ಬಾಕ್ಸಾಫೀಸ್ನಲ್ಲಿ ಬಂಪರ್ ಕಲೆಕ್ಷನ್ ಆಗಿದೆ ಅಂತಲೇ ಹೇಳಬಹುದು.
ಡಾಲಿ ಕರಿಯರ್ ನಲ್ಲೇ ಬೆಸ್ಟ್ ಕಲೆಕ್ಷನ್
‘ಹೆಡ್ ಬುಷ್’ ಫಸ್ಟ್ ಡೇ ಕಲೆಕ್ಷನ್ 4 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಸಿನಿಮಾದ ಕಲೆಕ್ಷನ್ ಸದ್ದು ಮಾಡುತ್ತಿದೆ. ಸಿನಿಮಾ ಮಂದಿ ಪ್ರಕಾರ, ‘ಹೆಡ್ ಬುಷ್’ ಮೊದಲ ದಿನದ ಕಲೆಕ್ಷನ್ ಡಾಲಿ ಧನಂಜಯ್ ಕರಿಯರ್ನಲ್ಲೇ ದಾಖಲೆ ಎನ್ನುತ್ತಿದ್ದಾರೆ. ಧನಂಜಯ್ ಹೀರೊ ಆಗಿ ನಟಿಸಿ ತೆರೆಕಂಡ ಸಿನಿಮಾಗಳ ಪೈಕಿ ‘ಹೆಡ್ ಬುಷ್’ ದಾಖಲೆ ಎನ್ನಲಾಗಿದೆ.
ರಜೆಯಲ್ಲಿ ‘ಹೆಡ್ ಬುಷ್’ ಲಕ್ ಹೇಗಿರುತ್ತೆ?
‘ಹೆಡ್ ಬುಷ್’ ದೀಪಾವಳಿ ಹಬ್ಬಕ್ಕೆ ತೆರೆಕಂಡಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ ‘ಹೆಡ್ ಬುಷ್’ಗೆ ವರವಾಗುತ್ತಾ? ಇಲ್ಲಾ ಶಾಪ ಆಗುತ್ತಾ? ಅನ್ನೋ ಪ್ರಶ್ನೆಯಂತೂ ಕಾಡುತ್ತಿದೆ. ಹಬ್ಬದ ಸಂಭ್ರಮದಲ್ಲಿರೋ ಜನರು ಕುಟುಂಬ ಸಮೇತಾ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದರೆ, ಬಾಕ್ಸಾಫೀಸ್ ‘ಹೆಡ್ ಬುಷ್’ ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಜನರು ಸಂಭ್ರಮದಲ್ಲಿ ಮುಳುಗಿದರೆ, ವೀಕ್ಡೆಸ್ ಕಲೆಕ್ಷನ್ ಮಹತ್ವ ಎನಿಸಿಕೊಳ್ಳುತ್ತವೆ.