ನಿನ್ನನ್ನು ನೀನಾಗಿಯೇ ಪ್ರೇಮಿಸುವುದಕ್ಕೆ, ನಿನಗಾಗಿಯೇ ಕಣ್ಣೀರು ತುಂಬಲಿಕ್ಕೆ ನಾನಿದ್ದೇನೆ.. ಎಂಬ ಹಾಡಿನ ಸಾಲು ಒಂದಿದೆ. ಆಫ್ ಕೋರ್ಸ್ ಈ ರೀತಿಯಾಗಿ ಒಬ್ಬರಿರಬೇಕು. ಆದರೆ, ಈ ರೀತಿಯಾಗಿ ಪ್ರೀತಿಸುವವರಿಗಾಗಿ ನಿರ್ಲಕ್ಷಿಸುತ್ತಾ ಕೂರದೆ, ನಿನ್ನನ್ನು ನೀನಾಗಿಯೇ ನೀನೆ ಪ್ರೀತಿಸಿಕೊಳ್ಳಬೇಕು. ನಿನ್ನಲ್ಲಿ ನಿನ್ನ ದೌರ್ಬಲ್ಯಗಳನ್ನು ನೈಜ್ಯ ಬಲವನ್ನಾಗಿ ಬದಲಾಯಿಸಿಕೊಳ್ಳಬೇಕು. ನಿನ್ನನ್ನು ನೀನಾಗಿಯೇ ನಿನ್ನೆ ಅಂಗೀಕರಿಸಿಕೊಳ್ಳಲ್ಲ ಬೇಕು.
ಬದಲಾವಣೆ ಮಾಡಲಾಗದುವುಗಳ ಕುರಿತು ಆಲೋಚಿಸದೆ ಮಾಡಬಹುದಾದ ಬದಲಾವಣೆಯನ್ನು ಮಾಡಿಕೊಳ್ಳುವ ಹಾಗೆ ಮಕ್ಕಳನ್ನು ಸಿದ್ಧಪಡಿಸಬೇಕು. ಅವರ ಮೇಲೆ ಅವರಿಗೇ ಪ್ರೀತಿಯುಂಟಾಗುವ ಹಾಗೆ ಮಾಡಬೇಕು. ನೆಗೆಟಿವ್ ಭಾವನೆಗಳನ್ನು ಪಾಸಿಟಿವ್ ಆಗಿ ಬದಲಾಯಿಸಬೇಕು.ಅದಕ್ಕೆ ಪೂರಕವಾಗಿ, ಅಗತ್ಯವಿರುವ ಕಥೆಗಳನ್ನು ಹೇಳಬೇಕು. ಮಹನೀಯರ ಜೀವನ ಕಥೆ ವ್ಯಕ್ತಿತ್ವ ಚಿತ್ರಗಳನ್ನು ಹೇಳಿ ಪಾಸಿಟೀವ್ ಆಗಿ ಬದಲಾಯಿಸಬೇಕು. ವ್ಯಕ್ತಿತ್ವದ ವಿಕಾಸಕ್ಕೆ ಸಂಬಂಧಪಟ್ಟಂತಹ ಪುಸ್ತಕಗಳನ್ನು ಹೆತ್ತವರು ಚೆನ್ನಾಗಿ ಓದಿಕೊಂಡು. ಸಾಧ್ಯವಾದಾಗಲೆಲ್ಲಾ ಮಕ್ಕಳಿಗೆ ಸಂದರ್ಭಾನುಸಾರವಾಗಿ ಹೇಳುತ್ತಿರಬೇಕು.
ಸ್ವಯಂ ಪ್ರತಿಷ್ಠೆ, ಗೌರವಗಳುಳ್ಳ ಮಕ್ಕಳಲ್ಲಿ ಆತ್ಮವಿಶ್ವಾಸ ಇರುತ್ತದೆ. ತಮ್ಮ ದೌರ್ಬಲ್ಯಗಳನ್ನು ಗುರುತಿಸಿಕೊಂಡು ಅವುಗಳಿಂದ ಹೊರಬಲ್ಲರನ್ನು ಸಮಸ್ಯೆಯೆಂಬ ಮಾತು ಹೊರಗಡೆ ಚಾಲೆಂಜ್ ಎಂದಂದುಕೊಳ್ಳುತ್ತಾರೆ. ವಿರಕ್ತಿ, ವೈರಾಗ್ಯ, ಆತ್ಮಹತ್ಯೆ. ಮುಂತಾದ ಹುಚ್ಚು ಆಲೋಚನೆಗಳು ಅವರ ಹತ್ತಿರ ಸುಳಿಯದು.
ಹೊಗಳಬೇಡಿ ಪ್ರೋತ್ಸಾಹಿಸಿ :
ಮಕ್ಕಳಲ್ಲಿರುವ ಸೃಜನಾತ್ಮಕತೆಯನ್ನು ಗುರುತಿಸಬೇಕೆಂದರೆ ಅವರಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿ. ಮನೆಯ ಕೆಲಸಗಳ ಬಗ್ಗೆ ತರಬೇತಿ ಕೊಡಿ. ಪೇಂಟಿಂಗ್, ಜೇಡಿಮಣ್ಣು ಅಥವಾ ಕ್ಲೇನಿಂದ ಬೊಂಬೆಗಳನ್ನು ಮಾಡಿಸಿ. ಅವರು ಚಿತ್ರಿಸುವ ಮಾಡುವ ಬೊಂಬೆಗಳಿಗನುಸಾರವಾಗಿ ಅವರ ಆಲೋಚನೆಗಳನ್ನು ಕೂಡಾ ತಿಳಿದುಕೊಳ್ಳಬಹುದು. ರೋರ್ಷಾ ಎಂಬ ಸೈಕಾಲಜಿಸ್ಟಿಕ್ಸ್ ಇಂಕ್ ಬ್ಲಾಟ್ ಟೆಸ್ಟ್ ಪರೀಕ್ಷೆ ಮೂಲಕ ಇಂತಹ ಎಷ್ಟೋ ವಿಷಯಗಳನ್ನು ಹೊರತುಪಡುವುದೆಂದು ರುಜುವಾತುಪಡಿಸಿದ ಇಂಕ್ ಬ್ಲಾಟ್ ಟೆಸ್ಟ್ ಎಂದರೆ ಒಂದು ಕಾಗದದ ಮೇಲೆ ಎರಡು ಹನಿಗಳ ಹಾಕಿ, ಆ ಕಾಗದವನ್ನು ಮಧ್ಯಕ್ಕೆ ಮಡಚಿ, ಆ ಇಂಕು ಹರಡುವ ಹಾಗೆ ಮಾಡಿ ಕಾಗದವನ್ನು ಬಿಚ್ಚಬೇಕು. ಅಲ್ಲಿ ಇಂಕು ಹರಡಿ ಒಂದು ಚಿತ್ರದಂತೆ ಗೋಚರಿಸುತ್ತದೆ.
ಅದನ್ನು ಮಕ್ಕಳಿಗೆ ತೋರಿಸಿ ಹೇಗೆ ಕಾಣಿಸುತ್ತಿದೆಯೋ ಕೇಳಬೇಕು. ಒಬ್ಬರಿಗೆ ಆಗೋಂಬೆ ಗಿಣಿಯಾಗಿ ಕಾಣಿಸಬಹುದು. ಮತ್ತೊಬ್ಬರಿಗೆ ಇಬ್ಬರು ವ್ಯಕ್ತಿಗಳು ಪರಸ್ಪರ ಗುದ್ದಾಡುತ್ತಿರುವ ಹಾಗೆ ಕಾಣಿಸಬಹುದು. ಇನ್ನೊಬ್ಬರಿಗೆ ಅದು ಚಲಿಸುತ್ತಿರುವ ಮೋಡದ ಹಾಗೆ ಕಾಣಿಸಬಹುದು. ಅದರ ಪ್ರಕಾರ ಅವರ ವೈಖರಿಯನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೇರಣೆಯನ್ನುಂಟು ಮಾಡಬೇಕು.
ಮಕ್ಕಳು ಮಾಡುವ ಒಳ್ಳೆಯ ಕೆಲಸಗಳನ್ನು ನೋಡಿ ಪ್ರೋತ್ಸಾಹಿಸಬೇಕೇ ಹೊರತು ಅತಿಯಾಗಿ ಅವುಗಳ ಹೊಗಳಬೇಡಿ. ಅತಿಯಾಗಿ ಹೊಗಳಿದರೆ,ಅವರಲ್ಲಿ ಅಹಂ ಹೆಚ್ಚಾಗಿಬಹುದು. ಸಾಧ್ಯವಾದಾಗಲೆಲ್ಲಾ “ನೀನು ಚೆನ್ನಾಗಿ ಮಾಡಬಲ್ಲೆ” “ನೀನು ಮಾತ್ರವೇ ಅಂತಹ ಕೆಲಸವನ್ನು ಚೆನ್ನಾಗಿ ಮಾಡಬಲ್ಲೆ”.. “ ಅರೇ…. ನನಗಿಂತ ನಿನಗೆ ಬಹಳ ಒಳ್ಳೆಯ ಐಡಿಯಾಗಳು ಬರುತ್ತವೆಯಲ್ಲಾ….ವೆರಿ ಗುಡ್…” ಎಂದು ಶ್ಲಾಘಿಸಿ ಹೇಳುತ್ತಲೇ ಇರಿ ಖಂಡಿತವಾಗಿಯೂ ಹಾಗೆ ಆಗುತ್ತಾರೆ.
ಟೈಮ್ ಮ್ಯಾನೇಜ್ ಮೆಂಟ್ ಕಲಿಯಿರಿ, ಮಕ್ಕಳಿಗೂ ಕಳಿಸಿರಿ :
ಒಬ್ಬ ಶಾಲಾ ವಿದ್ಯಾರ್ಥಿ ಅಂಚೆ ಕಚೇರಿಗೆ ಹೋಗಿ “150 ಪೋಸ್ಟ್ ಕಾರ್ಡುಗಳು, 90 ಇನ್, ಲ್ಯಾಂಡ್ ಕವರ್ ಗಳು 56 ರೂಪಾಯಿಗಳ ಮೌಲ್ಯವುಳ್ಳ ಸ್ಟಾಂಪುಗಳು 13 ಕವರ್ ಗಳು” ಇವಕ್ಕೆಲ್ಲಕ್ಕೂ ಎಷ್ಟಾಗುತ್ತದೆಯೆಂದು ಕೇಳಿದ ಅಲ್ಲಿನ ಗುಮಾಸ್ತ ಲೆಕ್ಕ ಮಾಡಿ ಎಷ್ಟಾಗುತ್ತದೆಯೋ ಹೇಳಿ ಹಣ ಕೊಡು ಎಂದರು.
“ಅದೆಲ್ಲಾ ನನಗ್ಯಾಕೆ ಬೇಕು? ” ಎಂದು ಕೇಳಿ ವಿದ್ಯಾರ್ಥಿ.
“ಮತ್ತೆ ಇವುಗಳ ಬೆಲೆ ಇಷ್ಟಾಗುತ್ತದೆ ಯೆಂದು ಏಕೆ ಕೇಳಿದೆ? ”ಎಂದು ಕೇಳಿದ ಪೋಸ್ಟಲ್ ಕ್ಲರ್ಕ್,
“ಓಹ್ ಅದಾ…! ಏನಿಲ್ಲಾ ನಮ್ ಟೀಚರ್ ಇದನ್ನು ಹೋಮ್ ವರ್ಕ್ ಆಗಿ ಕೊಟ್ಟಿದ್ದಾರೆ. ಇದಕ್ಕಾಗಿ ಮನೆಯಲ್ಲೇಕೆ ಟೈಮ್ ವೇಸ್ಟ್ ಮಾಡಬೇಕೆಂದುಕೊಂಡು ನಿಮ್ಮನ್ನು ಕೇಳಿದೆ ಅಷ್ಟೇ.ಈಗ ಲಿಂದಲೇ ಟೈಮ್ ಮ್ಯಾನೇಜ್ಮೆಂಟ್ ತಿಳಿದುಕೊಳ್ಳುವುದು ಒಳ್ಳೆಯದಲ್ವೇ!” ಎಂದ್ಹೇಳಿ ಮೆಲ್ಲಗೆ ಜಾರಿಕೊಂಡ.
ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮ್ಯಾನೇಜ್ಮೆಂಟ್ ಗುರುಗಳು ಟೈಮ್ ಮ್ಯಾನೇಜ್ಮೆಂಟ್ ಎನ್ನುತ್ತಾರೆ. ಸಮಯದ ಸದುಪಯೋಗ ಎಂದರೆ ಮೇಲೆ ಉದಾಹರಿಸಿದ ಪೋಸ್ಟಾಫಿಸ್ ನಲ್ಲಿನ ವಿದ್ಯಾರ್ಥಿಯಂತತಲ್ಲ ನಮಗಿರುವ ಸಮಯವನ್ನು ಅಗತ್ಯವಾದ ಕೆಲಸಗಳಿಗೆ ಉಪಯೋಗಿಸಿ, ಅನಗತ್ಯವಾದ ಕೆಲಸಗಳನ್ನು ನಿಲ್ಲಿಸುವುದೋ, ಒಪ್ಪಿಸುವುದೋ, ಅಲ್ಲದೆ ಮಾಡಿಕೊಳ್ಳುವುದೋ, ಮಾಡಿದರೆ,ಪ್ರತಿದಿನ ನನಗೆ ಬಹಳ ಸಮಯ ಉಳಿತಾಯವಾಗುತ್ತದೆ.ಆಗ ನಾವು “ನಾನು ಬಹಳ ಬಿಜಿಯಾಗಿದ್ದೇನೆ”…ನೀನು ನಂಬಿಯೋ ಬಿಡ್ತಿಯೋ… ನನಗೆ ಊಟ, ತಿಂಡಿ ಮಾಡಲು ಕೂಡಾ ಟೈಮ್ ಇಲ್ಲ ಇಂತಹ ನಗು ತರಿಸುವಂತಹ ಡೈಲಾಗ್ ಗಳು ಅಪ್ಪಿ ತಪ್ಪಿಯೂ ಕೂಡಾ ಹೇಳಲಾರೆವು.