ಮನೆ ಉದ್ಯೋಗ 12th ಪಾಸಾದವರಿಗೆ ಬೆಂಗಳೂರಿನಲ್ಲಿ ಯಾವೆಲ್ಲ ಜಾಬ್’ಗಳು ಲಭ್ಯ? ಅರ್ಜಿ ಸಲ್ಲಿಸುವುದು ಹೇಗೆ?

12th ಪಾಸಾದವರಿಗೆ ಬೆಂಗಳೂರಿನಲ್ಲಿ ಯಾವೆಲ್ಲ ಜಾಬ್’ಗಳು ಲಭ್ಯ? ಅರ್ಜಿ ಸಲ್ಲಿಸುವುದು ಹೇಗೆ?

0

ದ್ವಿತೀಯ ಪಿಯುಸಿ ಪಾಸಾದವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ, ಬ್ಯಾಂಕ್ಗಳಲ್ಲಿ, ಮಾಲ್’ಗಳಲ್ಲಿ, ವಿಮಾ ಕಂಪನಿಗಳಲ್ಲಿ, ಮೆಟ್ರೋದಲ್ಲಿ, ಟ್ರಾವೆಲ್ ಏಜೆನ್ಸಿಗಳಲ್ಲಿ, ರಿಯಲ್ ಎಸ್ಟೇಟ್ ಆಫೀಸ್’ಗಳಲ್ಲಿ, ಕಾಲ್ ಸೆಂಟರ್’ಗಳಲ್ಲಿ, ಡಿಟಿಪಿ ಸೆಂಟರ್’ಗಳಲ್ಲಿ, ಶಾಪಿಂಗ್ ಮಾಲ್’ಗಳು / ಸ್ಟೋರ್’ಗಳಲ್ಲಿ, ಹೀಗೆ ಸಣ್ಣ ಮತ್ತು ಮಧ್ಯಮ ಕಂಪನಿಗಳು /ಬ್ಯುಸಿನೆಸ್’ಗಳಿಂದ ದೊಡ್ಡ ಮಟ್ಟದ ಕಂಪನಿಗಳವರೆಗೂ ಉದ್ಯೋಗಕ್ಕೆ ಸೇರಬಹುದು. ಆದರೆ ಸಂಬಳ, ಉತ್ತಮ ಜಾಬ್ ಎಂಬುದು ವಿದ್ಯಾರ್ಹತೆ ಜತೆಗೆ ಸ್ಕಿಲ್ ಸೆಟ್ / ಸಂವಹನ ಕೌಶಲಗಳ ಆಧಾರದಲ್ಲಿ ನಿರ್ಧರಿತವಾಗುತ್ತದೆ.

Join Our Whatsapp Group

ಬೆಂಗಳೂರಿನಲ್ಲಿ ಜಾಬ್ ಎಲ್ಲೆಲ್ಲಿವೆ?

ಅಮೆಜಾನ್ – ವಾಯ್ಸ್ ಸಪೋರ್ಟ್ ಎಕ್ಸಿಕ್ಯೂಟಿವ್ (ಕನ್ನಡ)

ಫ್ಲಿಪ್’ಕಾರ್ಟ್ – ಪ್ಯಾಕಿಂಗ್ ಮತ್ತು ಆಪರೇಷನ್ಸ್ ಎಕ್ಸಿಕ್ಯೂಟಿವ್

ರಿಲಾಯನ್ಸ್ ಜಿಯೋ – ಟೆಲಿಸೇಲ್ಸ್ ಎಕ್ಸಿಕ್ಯೂಟಿವ್

Pnrstatusirctc – ಬ್ಯಾಕ್ ಆಫೀಸ್ ಎಕ್ಸಿಕ್ಯೂಟಿವ್

Wakefit Innovations – ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್

ಏರ್ ಸ್ಕೈ ಸರ್ವೀಸೆಸ್ – ಸಿಬ್ಬಂದಿ ನಿರ್ವಹಣೆ

ಪೇಟಿಎಂ – ಪೇಟಿಎಂ ಕೆವೈಸಿ ಜಾಬ್

ಫಸ್ಟ್ ರಿಯಾಲಿಟಿ ಸ್ಕ್ವೇರ್ ಪ್ರೈವೇಟ್ ಲಿಮಿಟೆಡ್ – ಪ್ರಾಜೆಕ್ಟ್ ಸೇಲ್ಸ್ ಎಕ್ಸಿಕ್ಯೂಟಿವ್

CashKaro – ರೀಟೇಲ್ ಸೇಲ್ಸ್ ಎಕ್ಸಿಕ್ಯೂಟಿವ್

ಫ್ಲಿಪ್’ಕಾರ್ಟ್ – ಡೆಲಿವರಿ ಸಿಬ್ಬಂದಿ

ಹೆಲ್ದಿಫೋರ್ಟ್ ಸರ್ವೀಸೆಸ್ – ಇಂಟರ್ನ್ಯಾಷನಲ್ ಬಿಪಿಒ ಎಕ್ಸಿಕ್ಯೂಟಿವ್

ಕೆಹೆಚ್’ಐ ಸರ್ವೀಸ್ – ಫ್ರಂಟ್ ಆಫೀಸ್ ಕೋಆರ್ಡಿನೇಟರ್

ರಿಲಾಯನ್ಸ್ ರೀಟೇಲ್ ಲಿಮಿಟೆಡ್ – ರೀಟೇಲ್ಸ್ ಸೇಲ್ಸ್ ಎಕ್ಸಿಕ್ಯೂಟಿವ್

ಈ ಮೇಲಿನಂತೆ ನೂರಾರು ಕಂಪನಿಗಳಲ್ಲಿ ಬೆಂಗಳೂರಿನಾದ್ಯಂತ ದ್ವಿತೀಯ ಪಿಯುಸಿ ಪಾಸಾದ ಹುಡುಗ / ಹುಡುಗಿಯರಿಗೆ ಉದ್ಯೋಗ ಅವಕಾಶಗಳು ಇವೆ.

ಜಾಬ್ ಹುಡುವುದು ಹೇಗೆ?

– ಆನ್ ಲೈನ್ ಮೂಲಕ ಜಾಬ್ ಹುಡುಕಬಹುದು. ಜಾಬ್ ವೆಬ್ಸೈಟ್ಗಳಿಗೆ ಭೇಟಿ ನೀಡುವ ಮೂಲಕ ಅರ್ಹತೆ, ಸ್ಥಳ, ವೇತನ, ಉದ್ಯೋಗ ವಿಧಗಳನ್ನು ಆಯ್ಕೆ ಮಾಡಿ ಜಾಬ್ ಸರ್ಚ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

– ನಿಮ್ಮ ಗೆಳೆಯ / ಗೆಳತಿಯರೊಂದಿಗೆ ಸಂವಹಿಸಿ , ನಿಮ್ಮ ಸಂಪರ್ಕದ ಹಿರಿಯರಲ್ಲೂ ಜಾಬ್ ಸರ್ಚ್ ಮಾಡಲು ಸಹಾಯ ಕೇಳಿ ಜಾಬ್ ಪಡೆಯಬಹುದು.

– ದಿನ ಪತ್ರಿಕೆಗಳಲ್ಲಿ ಕ್ಲಾಸಿಫೈಡ್ ಜಾಹಿರಾತುಗಳನ್ನು ನೋಡಿ. ಇಲ್ಲಿ ಉದ್ಯೋಗದ ವಿವರ, ಕರೆ ಮಾಡಲು ನಂಬರ್ ಇರುತ್ತದೆ. ಆಸಕ್ತರು ಕರೆ ಮಾಡಿ ಉದ್ಯೋಗ ಕೇಳಬಹುದು.

– ಬ್ಯಾಂಕ್’ಗಳಿಗೆ ನೇರವಾಗಿ ಭೇಟಿ ನೀಡಿ ರೆಸ್ಯೂಮ್ ನೀಡುವ ಮೂಲಕ ಜಾಬ್ ಅವಕಾಶ ಕೇಳಬಹುದು.

ಗೂಗಲ್ ಮೂಲಕ ಜಾಬ್ ಸರ್ಚ್ ಮಾಡುವ ವಿಧಾನ

– ಗೂಗಲ್ ಸರ್ಚ್ ಬಾರ್ನಲ್ಲಿ ’12th pass jobs in bangalore’ ಎಂದು ಟೈಪಿಸಿ ಸರ್ಚ್ ಮಾಡಿ.

– ನಂತರ Jobs ಎನ್ನುವ ಟ್ಯಾಬ್ನೊಂದಿಗೆ ಬೆಂಗಳೂರಿನಲ್ಲಿರುವ ಜಾಬ್ಗಳ ಲಿಸ್ಟ್ ವಿವರದೊಂದಿಗೆ ಪ್ರದರ್ಶಿತವಾಗುತ್ತದೆ.

– ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಚೆಕ್ ಮಾಡಲು ‘Jobs’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

– ನಂತರ ಗೂಗಲ್’ನ ಜಾಬ್ ಸರ್ಚ್ ವೆಬ್’ಪುಟ ಓಪನ್ ಆಗುತ್ತದೆ.

– ಇಲ್ಲಿ ಅಭ್ಯರ್ಥಿಗಳು ಸ್ಥಳ / ಜಾಬ್ ವಿಧ / ಕಂಪನಿ ವಿಧ / ಜಾಬ್ ಕ್ಷೇತ್ರ / ಹೀಗೆ ಹಲವು ಆಯ್ಕೆಗಳನ್ನು ನೀಡಿ ಉದ್ಯೋಗ ಸರ್ಚ್ ಮಾಡಲು ಅವಕಾಶ ಇರುತ್ತದೆ.

ಬೆಂಗಳೂರಿನ ಖಾಸಗಿ ಕ್ಷೇತ್ರದ ಹುದ್ದೆಗಳಲ್ಲಿ ವೇತನ ಎಷ್ಟು ಸಿಗಬಹುದು?

ಕನಿಷ್ಠ 12,000 ದಿಂದ 16,000 ವರೆಗೆ ವೇತನವನ್ನು ಪಡೆಯಬಹುದಾದ ಅವಕಾಶ ಇರುತ್ತದೆ. ವೇತನ ಎಂಬುದು ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಜತೆಗೆ ಕೌಶಲಗಳ ಆಧಾರದಲ್ಲಿ ಹಾಗೂ ಸೇರುವ ಹುದ್ದೆಯ ಆಧಾರದಲ್ಲಿ ನಿರ್ಧರಿತವಾಗಿರುತ್ತದೆ.

ಜಾಬ್ ಹುಡುಕಲು ಹಾಗೂ ಅರ್ಜಿ ಹಾಕಲು ಹಲವು ಜಾಬ್ ವೆಬ್ಸೈಟ್ಗಳು ಹಾಗೂ ಅಪ್ಲಿಕೇಶನ್ಗಳು ಇವೆ. ಅವುಗಳಲ್ಲಿ ಕೆಲವುಗಳನ್ನು ಉದಾಹರಣೆಗೆ ಈ ಕೆಳಗಿನಂತೆ ತಿಳಿಸಲಾಗಿದೆ.

ಜಾಬ್ ಹುಡುಕಲು ಹಾಗೂ ಅರ್ಜಿ ಹಾಕಲು ವೆಬ್’ಸೈಟ್’ಗಳ ಪಟ್ಟಿ

Timesjobs.com

naukri.com

in.indeed.com

apna.co

glassdoor.co.in

quikr

glassdoor.co.in