ಮನೆಯಲ್ಲಿಯೋ ಅಥವಾ ಇನ್ನಾವದೋ ಸ್ಥಳದಲ್ಲಿ ಒಬ್ಬಂಟಿಯಾಗಿದ್ದಾಗ ಹೃದಯಾಘಾತ ಬಂದರೆ ಏನು ಮಾಡುವುದು..? ನಮ್ಮ ಪ್ರಾಣ ಉಳಿಸಿಕೊಳ್ಳೊದು ಹೇಗೆ..? ತಕ್ಷಣ ಏನು ಮಾಡಬೇಕು ಗೊತ್ತಾ..,
ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರಷ್ಟೇ ಅಲ್ಲದೆ ಮಕ್ಕಳಿಗೂ ಹೃದಯಾಘಾತದ ಅಪಾಯ ಎದುರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಈ ಪರಿಸ್ಥಿತಿಯನ್ನು ತಪ್ಪಿಸಲು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಸರಿಯಾದ ಬದಲಾವಣೆಗಳನ್ನು ಮಾಡುವುದು ಅತ್ಯಂತ ಅಗತ್ಯವಾಗಿದೆ. ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಪ್ರಥಮ ಚಿಕಿತ್ಸೆಯ ಜ್ಞಾನವೂ ಬಹಳ ಮುಖ್ಯವಾಗಿದೆ.
ಹೃದಯಾಘಾತವು ಸಂಭವಿಸುವ ಮುನ್ನ ದೇಹವು ಕೆಲವು ಸೂಚನೆಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಎದೆಯಲ್ಲಿ ತೀವ್ರ ನೋವು ಅಥವಾ ಒತ್ತಡ ಕಾಣಿಸಿಕೊಳ್ಳುತ್ತದೆ. ಈ ನೋವು ಎದೆ ಭಾಗದಿಂದ ಭುಜ, ದವಡೆ ಮತ್ತು ಬೆನ್ನಿನವರೆಗೂ ಹರಡಬಹುದು. ಉಸಿರಾಟದಲ್ಲಿ ತೊಂದರೆ, ಅತಿಯಾದ ಬೆವರು, ಅಸ್ವಸ್ಥತೆ ಮತ್ತು ದೌರ್ಬಲ್ಯವು ಸಹ ಕಾಣುವ ಸಾಮಾನ್ಯ ಲಕ್ಷಣಗಳಾಗಿವೆ.
ಆರೋಗ್ಯ ತಜ್ಞರ ಸಲಹೆಯಂತೆ ಪ್ರತಿಯೊಬ್ಬರ ಮನೆಯಲ್ಲಿ ಆಸ್ಪಿರಿನ್ ಮಾತ್ರೆ ಇರಿಸುವುದು ಉತ್ತಮವಾಗಿದೆ. ಹೃದಯಾಘಾತದ ಅನುಮಾನ ಕಂಡುಬಂದರೆ, ತಕ್ಷಣ ಆಸ್ಪಿರಿನ್ ಸೇವಿಸುವುದು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಧಾನಗೊಳಿಸಿ ಹೃದಯಕ್ಕೆ ರಕ್ತಪ್ರವಾಹ ತಲುಪಲು ಸಹಾಯಕವಾಗುತ್ತದೆ.
ಒಬ್ಬ ವ್ಯಕ್ತಿ ಒಬ್ಬರೇ ಇದ್ದಾಗ ಹೃದಯಾಘಾತ ಉಂಟಾದರೆ, ತಕ್ಷಣ ಕಫ್ ಸಿಪಿಆರ್ ಪ್ರಯತ್ನಿಸಬಹುದು. ಇದರಲ್ಲಿ ಬಲವಾಗಿ ಉಸಿರೆಳೆದು ನಿರಂತರವಾಗಿ ಕೆಮ್ಮುವುದರಿಂದ ಹೃದಯಕ್ಕೆ ಒತ್ತಡ ಬೀಳುತ್ತದೆ ಮತ್ತು ರಕ್ತ ಪೂರೈಕೆ ಮುಂದುವರಿಯುತ್ತದೆ. ತುರ್ತು ಚಿಕಿತ್ಸೆಯ ನೆರವು ಸಿಗುವವರೆಗೂ ಈ ವಿಧಾನವನ್ನು ಅನುಸರಿಸುವುದು ಬದುಕುಳಿಯಲು ಸಹಾಯಕಯಾಗಿದೆ.














