ಮನೆ ಆರೋಗ್ಯ ಉಬ್ಬಸ

ಉಬ್ಬಸ

0

ನಾವು ಜೀವಿಸಲು ಆಮ್ಲಜನಕ ಆಕ್ಸಿಜನ್ ಬಹಳ ಅಗತ್ಯ. ಶರೀರಕ್ಕೆ ಅಗತ್ಯವಾದ ಆಮ್ಲಜನಕ ಉಸಿರಾಟದ ಮೂಲಕ ಪಡೆದುಕೊಳ್ಳುತ್ತವೆ. ಆಮ್ಲಜನಕ ದೊರಕದಿದ್ದರೆ ನಾವು ಕೆಲವು ನಿಮಿಷಗಳ ಮೇಲೆ ಬದುಕಲಾರೆವು.

Join Our Whatsapp Group

ನಾವು ಗಾಳಿಯನ್ನು ಹೀರಿಕೊಂಡಾಗ, ಶ್ವಾಸರಂದ್ರಗಳ ಮೂಲಕ ಶ್ವಾಸನಾಳಗಳುದ್ದಕ್ಕೂ ಹಾದು ಶ್ವಾಸಕೋಶಗಳನ್ನು ಪ್ರವೇಶಿಸುತ್ತದೆ.

      ಹೃದಯದಿಂದ ಶ್ವಾಸಕೋಶಗಳನ್ನು ಪ್ರವೇಶಿಸಿದ ಮಲ್ಲಿನ ರಕ್ತ, ಅಲ್ಲಿ ನಾವು ಹೀರಿಕೊಂಡ ಗಾಳಿಯಲ್ಲಿನ ಆಮ್ಲಜನಕದಿಂದ ಶುದ್ಧಗೊಳಿಸಲ್ಪಡುತ್ತದೆ ಹಾಗೆ ಶುದಗೊಂಡ ರಕ್ತ ಇಡೀ ಶರೀರದಲ್ಲಿ ಪ್ರವಹಿಸಲು ಪುನಃ ಹೃದಯಕ್ಕೆ ಹೋಗುತ್ತದೆ

     ಶ್ವಾಸಕೋಶದಲ್ಲಿ ಶುದಿಗೊಂಡ ಮಲಿನ ರಕ್ತದಲ್ಲಿ ಉಳಿದ ತ್ಯಾಜ್ಯಗಳು, ಕಾರ್ಬನ್ ಡೈ ಆಕ್ಸೈಡ್ ರೂಪದಲ್ಲಿ ನಿಶ್ವಾಸದ ಮೂಲಕ ಹೊರಗೆ ಬರುತ್ತವೆ.

     ಬಾಯಿಯ ಮೂಲಕ ಗಾಳಿ ಹೀರಿದರೂ ಇದೇ ಪ್ರಕ್ರಿಯೆ ನಡೆಯುತ್ತದೆ ಈ ಪದತಿಯಿಂದ ಶ್ವಾಸಕೋಶಗಳಿಗೆ ಆಕ್ಸಿಜನ್ ಹೆಚ್ಚಾಗಿ ಸಿಗುತ್ತದೆ.ಉಬ್ಬಸ ರೋಗಿಗಳು ಆಯಾಸಪಡುತ್ತಾ ಬಾಯಿಯಿಂದ ಗಾಳಿಯನ್ನು ಹೀರುವುದು, ಹೀಗೆ ಹೆಚ್ಚಿನ ಆಮ್ಲಜನಕ ಪಡೆಯಲೆಂದೇ.

     ★ಇಂಗ್ಲೆಂಡಿನಲ್ಲಿ ಪ್ರತಿ 20 ಮಂದಿಯಲ್ಲಿ ಒಬ್ಬರು  ಅಸ್ತಮಾದಿಂದ ನರಳುತ್ತಿರುವರೆಂದು ಅಂದಾಜುಗಳು ಹೇಳುತ್ತಿವೆ.ನಮ್ಮ ದೇಶದ ಜನಸಂಖ್ಯೆಯಲ್ಲಿ ನೂರಕ್ಕೆ ಎರಡರಿಂದ ಐದರಷ್ಟು ಜನ ಆಸ್ತಮಾ ಬಾಧೆಗೊಳಗಾಗಿದ್ದಾರೆ.

    ★ ಡಾಕ್ಟರ್ ಗಳು ಉಬ್ಬಸವನ್ನು ‘ಬರುವ ಹೋಗುವ ವ್ಯಾಧಿ’ ಎಂದು ಹೇಳುತ್ತಾರೆ.ಇದಕ್ಕೆ ಕಾರಣವೇನೆಂದರೆ ಯಾವಾಗಲೂ ಬಿಟ್ಟು ಬಿಟ್ಟು ಬರುವುದು, ಕೆಲವು ದಿನ ಇದ್ದು ಕಡಿಮೆಯಾಗುವುದು, ಮತ್ತೆ ಯಾವಾಗಲೋ ಕಾಣಿಸಿಕೊಳ್ಳುತ್ತದೆ.

ಕಾರಣಗಳು    

     ★ಶ್ವಾಸಕೋಶಗಳಲ್ಲಿ ಉಸಿರಿನ  ನಾಳಗಳು ಸಂಕುಚಿತಗೊಳ್ಳುವ ಒಂದು ಬಗೆಯ ಸ್ವಭಾವಕ್ಕೆ ಸೇರಿದು ದಾದರಿಂದ ಆ ವ್ಯಕ್ತಿಯಲ್ಲಿ ಒಬ್ಬ ಉಬ್ಬಸದ  ಲಕ್ಷಣಗಳು ಸಂಕುಚಿತ ಕಾಣಿಸಿಕೊಳ್ಳುತ್ತವೆ.

     ★ಶ್ವಾಸಕೋಶಗಳಲ್ಲಿನ ವಾಯು ನಾಳಗಳು ಮುದುರಲು ಸಂಕುಚಿತಗೊಳ್ಳಲು ಮೂರು ಬಗೆಯ ಕಾರಣಗಳು ಕಂಡುಬರುತ್ತವೆ ಅವೇಂದರೆ:

1. ಶ್ವಾಸಕೋಶಗಳು ಸೋಂಕಿಗೆ ಗುರಿಯಾದಾಗ. ಅವುಗಳಲ್ಲಿನ ಉಸಿರಿನಾಳದ ಗೋಡೆಗಳು ಉತಕ್ಕೆ ಒಳಗಾಗುವುದು.

2. ವಾಯುನಾಳಗಳಲ್ಲಿನ ಗೋಡೆಗಳ ಸ್ನಾಯುಗಳು ಬಿಗಿತಗೊಳ್ಳಲಾಗುವುದು.

3. ವಾಯು ನಾಳಗಳಲ್ಲಿ ಜಿಗಿಟ ಪದಾರ್ಥ ಸಂಗ್ರಹವಾಗುವುದು.

    ★ ಈ ಮೂರು ಸಂದರ್ಭಗಳಲ್ಲಿ  ಗಾಳಿ ನಿರಾಂಕತವಾಗಿ ಪ್ರವೇಶಿಸಲಾಗುವುದು. ಅದರ ಪ್ರತಿಫಲವಾಗಿ ಆ ವ್ಯಕ್ತಿ ಉಬ್ಬಸಕ್ಕೆ ಗುರಿಯಾಗುತ್ತಾನೆ.ಬಹಳ ಜನರಲ್ಲಿ ಈ ಮೂರು ಸಮಸ್ಯೆಗಳು ಕೂಡಿರುತ್ತವೆ..

     ★ಉಬ್ಬಸ ಶಾರೀರಿಕ ಸಮಸ್ಯೆ ಮಾತ್ರ. ಭಾವನಾತ್ಮಕ ಸಮಸ್ಯೆ ಯಲ್ಲ. ಆದರೆ ಮಾನಸಿಕ ಒತ್ತಡ. ಆಂದೋಳನ,ನಿರಾಶೆ ಮೊದಲಾದವು ಉಬ್ಬಸವನ್ನು  ಹೆಚ್ಚು ತೀವ್ರವಾಗಿ ಮಾಡಲು ಸಹಕರಿಸುತ್ತವೆ.

     ★ಉಬ್ಬಸ ಬಂದಾಗ ಹೋಗಿ ಉಸಿರೆಳೆದುಕೊಳ್ಳಲು ಬಹಳ ಕಷ್ಟ ಪಡುತ್ತಾನೆ.ಕೆಮ್ಮುವಿಕೆ,ಸದ್ದಿನಿಂದ ಕೂಡಿದ ಉಸಿರಾಟ ಹೃದಯದ ಬಿಗಿತ, ಶ್ವಾಸಕುಗ್ಗಿಹೋಗುವುದು ಮೊದಲಾದವು ಒಟ್ಟಿಗೆ ಸಂಭವಿಸುತ್ತವೆ. ಈ ಲಕ್ಷಣಗಳು ಆಗಾಗ ಮಾತ್ರ ಇರಬಹುದು. ಇಲ್ಲವೇ ಹಲವು ದಿನಗಳು ಮುಂದುವರಿಯಬಹುದು. ಬಹುಮಟ್ಟಿಗೆ ಈ ಲಕ್ಷಣಗಳು ರಾತ್ರಿಯ ವೇಳೆ ಇಲ್ಲವೇ ಬೆಳಗಿನ ಜಾವದಲ್ಲಿ ಸಂಭವಿಸುತ್ತವೆ.

     ★ಉಬ್ಬಸ ಬರಲು ಮತ್ತೊಂದು ಮುಖ್ಯ ಕಾರಣ ಅಲರ್ಜಿ, ಶ್ವಾಸಕೋಶಗಳ ವಾಯುನಾಳಗಳು ಸಹಜರೀತಿಯಲ್ಲಿಲ್ಲದೆ, ಅತಿ ವೇಗವಾಗಿ ಪ್ರಕೋಪಿಸುವುದು. ಇಲ್ಲವೇ ಹಠಾತ್ತಾಗಿ ಮುಂದುವರೆದುಕೊಳ್ಳುವುದು ಅಲರ್ಜಿ ಕಾರಣದಿಂದಾಗುತ್ತದೆ.

 ಈ ಕೆಳಗಿನ ಕಾರಣದಿಂದ ಅಲರ್ಜಿಯಾಗುತ್ತದೆ :

    ★ ನಾವು ಸೇವಿಸುವ ಗಾಳಿಯಲ್ಲಿ ಕೂಡಿರುವ ಧೂಳು, ಹೂಗಳ, ಪರಾಗ, ಘಾಟು, ವಾಸನೆಗಳು, ಹತ್ತಿಯ , ಧೂಳು ಹೊಗೆ ಕೊಳೆತ ಆೄಸಿಡ್  ವಾಸನೆಗಳು, ಸಮುದ್ರದ ಗಾಳಿ,ಪೇಪರ್ ಟೆಸ್ಟ್ ಮುಂತಾದವುಗಳಿಂದ.

      ★ ನಾವು ತೆಗೆದುಕೊಳ್ಳುವ ಕೂಲ್ ಡ್ರಿಂಕ್,ಐಸ್ ಕ್ರೀಮ್ ತರಹದ ಅತಿ ತಾಪದ ಪದಾರ್ಥಗಳಿಂದ.

 ★ಮಾನಸಿಕ ಒತ್ತಡ ಕಳವಳಗಳಿಂದ.

    ★ಅಧಿಕ ವ್ಯಾಯಾಮದಿಂದ.

 ★ಕೆಲವು ಬಗೆಯಾಗಿ ಇನ್ಫೆಕ್ಷನ್ ಗಳಿಂದ.

★ ಕೆಲವು ಬಗಯ ಆಹಾರ ಪದಾರ್ಥಗಳು ಮೊಟ್ಟೆ, ಹಾಲು, ಬಾಳೆಹಣ್ಣು, ಮುಂತಾದವುಗಳಿಂದ

 ★ವಾಹನಗಳು ಬಿಡುವ ಒಗೆಯಿಂದ.

★ ಕೆಲವು ಬಗೆಯ ಪಂಗಸ್ ಗಳಿಂದ.

★ ಕೆಲವು ಬಗೆ ಔಷಧಿಗಳು ಮುಖ್ಯವಾಗಿ ಬಿಪಿ ತಗ್ಗಿಸುವ ಬಳಸುವ ಔಷಧಿಗಳಿಂದ.