ತೆಗೆದುಕೊಳ್ಳಬೇಕಾದ ಕ್ರಮಗಳು
★ಉಡುಪುಗಳನ್ನು ಬದಲಾಯಿಸಿ ಮಂಚದ ಮೇಲೆ ವಿಶ್ರಾಂತಿ ತೆಗೆದುಕೊಳ್ಳಬೇಕು.
★ತಲೆಯಕೆಳಗೆ ದಿಂಬನ್ನು ಎತ್ತರವಾಗಿಟ್ಟುಕೊಂಡು ಮಲಗಿಕೊಂಡರೆ.ಶ್ವಾಸಕೋಶಗಳಿಗೆ ಹೆಚ್ಚು ಆಮ್ಲಜನಕ ದೊರೆಯುತ್ತದೆ.
★ಒಳ್ಳೆಯ ಗಾಳಿ ಬರುವಂತೆ ಕಿಟಕಿಗಳನ್ನು ತೆರೆದಿಟ್ಟು ಕಿಟಕಿಗಾಗಲಿ ಬಾಲ್ಕನಿಗಾಗಲಿ ಎದುರಿಗೆ ನೆಟ್ಟಿಗೆ ಕುಳಿತುಕೊಳ್ಳಬೇಕು.
★ ಬಿಸಿಕಾಫಿ,ಬಿಸಿಹಾಲು ಇಲ್ಲವೇ ಬಿಸಿನೀರು ಕುಡಿಯಬೇಕು.
★ಬ್ರಾಂಕೋ ಡೈಲೇಟರ್ ಉಸಿರಾನಾಳ ಹಿಗ್ಗಿಸುವ ಔಷಧಗಳನ್ನು ಡಾಕ್ಟರ್ ಸೂಚನೆಯ ಮೇರೆಗೆ ತೆಗೆದುಕೊಳ್ಳಬೇಕು.
★ಬಾಯಲ್ಲಿ ಲವಂಗವನ್ನಾಗಲಿ,ತುಳಸಿ ಎಲೆಯನ್ನಾಗಿಲಿ ಇಟ್ಟುಕೊಂಡರೆ ಅವುಗಳ ರಸದಿಂದ ಉಸಿರುಳೆದುಕೊಳ್ಳುವುದು ಸ್ವಲ್ಪ ಸುಲಭವಾಗುತ್ತದೆ. ಘ
★ನೀರನ್ನು ಕುದಿಸಿ ಅದರಲ್ಲಿ ಅರಿಶಿನ, ಅಮೃತಾಂಜನ ಹಾಕಿ, ಆ ನೀರಿನ ಆವಿಯ ಮೇಲೆ ತಲೆ ಬಗ್ಗಿಕೊಂಡು ದುಪಟಿ ಮುಚ್ಚಿಕೊಂಡು ಆ ಆವಿಯನ್ನು ಬಾಯಿಯಿಂದ, ಮೂಗಿನಿಂದ ಗಾಢವಾಗಿ ಒಳಕ್ಕೆಳೆದುಕೊಂಡರೆ ಉಸಿರಾಟ ಸುಲಭವಾಗಿರುತ್ತದೆ,ಕಫ ನೀರಾಗಿ ಹೊರಗೆ ಉಗುಳಲು ಸಾಧ್ಯವಾಗುತ್ತದೆ.
★ಕಂಠದ ಮೇಲೆ, ಎದೆಯ ಮೇಲೆ,ಪಕ್ಕೆಲುಪುಗಳ ಮೇಲೆ ಅಮೃತಂಜನ ಲೇಪಿಸಿ, ಬಿಸಿ ನೀರಿನ ಕಾವು ಕೊಡಬೇಕು. ಬಿಸಿನೀರಿನಲ್ಲಿ ಉಪ್ಪು ಬೆರೆಸಿ ಮುಕ್ಕಳಿಸಿಕೊಳ್ಳಬೇಕು.
ಪ್ರಯಾಣ ಮಾಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು
ಮಳೆಯಲ್ಲಿ ಚಳಿಗಾಲದಲ್ಲಿ ರಾತ್ರಿಯ ವೇಳೆ ಪ್ರಯಾಣ ಮಾಡಬಾರದು.
ಪ್ರಯಾಣದ ನಡುವೆ ಆಯಾಸವಾದರೆ,ಹತ್ತಿರದ ಸ್ಟೇಷನ್ ನಲ್ಲಿ ಇಳಿದು,ಯಾವುದಾದರೂ ಹೋಟೆಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಮಾರನೆಯ ದಿನ ಡಾಕ್ಟರ್ ಸಲಹೆ ಪಡೆದು ಪ್ರಯಾಣ ಮುಂದುವರಿಸಬಹುದು.
ಅಮೃತಾಂಜನ ಇಲ್ಲವೇ ವಿಕ್ಸ್ ಸ್ಟ್ರಪ್ಸಿಲ್ಸ್ ಅಥವಾ ವಿಕ್ಸ್ ಮಾತ್ರೆಗಳು ಇನ್ ಹೇಲರ್, ಲವಂಗ ಇಂತಹವುವುಗಳನ್ನು ಹತ್ತಿರ ವಿಟ್ಟುಕೊಳ್ಳಬೇಕು.
ಸ್ವೇಟರ್, ಮಫ್ಲರ್, ಶಾಲು ಬಳಸಬೇಕು.ಕತ್ತಿನ ಸುತ್ತ ಮಫ್ಲರ್ ಸುತ್ತಿಕೊಂಡು ಚಳಿಗಾಲಕ್ಕೆ ಮೈ ಒಡ್ಡದಂತೆ,ಮೂಗಿಗೆ ಧೂಳು ಹೋಗದಂತೆ ಬಟ್ಟೆಯನ್ನು ಅಡ್ಡವಾಗಿಟ್ಟುಕೊಳ್ಳಬೇಕು .
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಗೊರಗುಟ್ಟುವಿಕೆಯೊಡನೆ ಉಸಿರಾಟ ಹೆಚ್ಚು ಕಷ್ಟಕರವಾಗಿದ್ದು ಕೆಮ್ಮು, ಆಯಾಸ ಮೇಲುಸಿರು ಹೆಚ್ಚಾಗಿದ್ದರೆ.
ಕೆಮ್ಮು ಎದುಸಿರಿಗಳಿಂದ ಉಸಿರಾಡಲಾಗದೆ ರಾತ್ರಿಯೆಲ್ಲ ಎಚ್ಚರವಾಗಿರುತ್ತಿದ್ದರೆ.
ಸ್ವಲ್ಪ ದೂರ ನಡೆದ ಕೂಡಲೇ ಉಸಿರಾಡಲಾಗದೆ ನಿಲ್ಲಬೇಕಾಗಿ ಬಂದರೆ.
ಪರಿಸ್ಥಿತಿ ಹೀಗೆ ತೀವ್ರವಾಗಿರುವಾಗ ಅತಿ ಶೀಘ್ರ ವೈದ್ಯರನ್ನು ನೋಡಬೇಕು.
ವೈದ್ಯರೇನು ಮಾಡುತ್ತಾರೆ?
ಲಕ್ಷಣಗಳನ್ನು ತೆಗೆಸುವ ಉಪಶಮನಕಾರಿ ಔಷಧಗಳನ್ನು ಬರೆದುಕೊಡುತ್ತಾರೆ.
ಶ್ವಾಕೋಶಗಳಿಗೆ ಸೋಂಕು ಉಂಟಾಗಿರುವ ಸೂಚನೆಗಳು ಕಾಣಿಸಿದ್ದರೆ.ಅದಕ್ಕೆ ಕಾರಣ ಬ್ಯಾಕ್ಟೀರಿಯಾಗಳಾದರೆ ಆಂಟಿಬಯಾಟಿಕ್ಸ್ ಮೂಲಕ ಗುಣಪಡಿಸಲು ಪ್ರಯತ್ನಿಸುತ್ತಾರೆ.
ಉಬ್ಬಸ ಅಲರ್ಜಿಯ ಕಾರಣದಿಂದ ಬರುತ್ತದೆಯೆಂದು ತಿಳಿದುಬಂದರೆ ಆ ಅಲರ್ಜಿ ಯಾವುದರಿಂದ ಬರುತ್ತದೆ, ಎಂದು ಕಂಡುಕೊಳ್ಳಲು ಪ್ರಯತ್ನಿಸಿ ಅವುಗಳಿಂದ ದೂರವಿರುವಂತೆ ಸೂಚಿಸುತ್ತಾರೆ. ಕೆಲವು ಅಲರ್ಜಿಗಳ ವಿಷಯದಲ್ಲಿ ರೋಗಿಗೆ ಅವುಗಳ ಬೆಗಿಗಿನ ಸೂಕ್ಷ್ಮ ಗ್ರಹಿಕೆ ತಗ್ಗಿಸಲು, ಇಂಜೆಕ್ಷನ್ ಗಳ ಕೋರ್ಸ್ ಗಳನ್ನು ಪ್ರಾರಂಭಿಸಬಹುದು.