ಮನೆ ಮನೆ ಮದ್ದು ಆಹಾರದಲ್ಲಿ ರುಚಿ ಇಲ್ಲದಿದ್ದಾಗ

ಆಹಾರದಲ್ಲಿ ರುಚಿ ಇಲ್ಲದಿದ್ದಾಗ

0

1. ಓಮಿನ ಕಾಳನ್ನು ಚೆನ್ನಾಗಿ ಅಗಿದು ರಸವನ್ನು ಕುಡಿಯುತ್ತಿದ್ರೆ ರುಚಿ ಹೆಚ್ಚುವುದು.

Join Our Whatsapp Group

2. ಪುಳ್ಳ ಪುರುಚಿ ಸೊಪ್ಪನ್ನು  ಚೆನ್ನಾಗಿ ಅಗಿದು ನುಂಗಿದರೆ  ರುಚಿ ಹತ್ತುವುದು.

3. ಕರಿ ಮೆಣಸಿನ ಶುಂಠಿಯ ಚೂರನ್ನು ಅಗಿದು ತಿಂದರೆ ರುಚಿ ಹೆಚ್ಚಾಗುವುದು.

ಅರ್ದಿತವಾಯು ಮುಖವಾತ

1. ಅರ್ಧಾಂಗ ವಾಯು ಎಂದರೆ ಹೇಳುತ್ತಾರೆ ಅಫೀಮಿನ ಗುಳಿಗೆಯನ್ನು ನೀರಿನಲ್ಲಿ ಮರಳಿಸಿ ಆ ನೀರಿನಿಂದ ಶಾಖ ಕೊಡುತ್ತಾ ಇರಬೇಕು. ಮಲಬದ್ಧತೆಯೇ ಕಾರಣವಾಗಿದ್ದರೆ ತ್ರಿವೃತಾದಿ ಚೂರ್ಣ, ಸೋನಾಮುಖಿ ಚೂರ್ಣವನ್ನು ಕೊಡಬೇಕು.

2. ರೋಗವಿರುವ ಭಾಗಕ್ಕೆ ವಿಷ ಗರ್ಭ ತೈಲವನ್ನು ಹಚ್ಚಬೇಕು. ಹಾಲು, ಹೆಸರು, ಮುಂತಾದ ಆಹಾರ ಸೇವಿಸಬೇಕು.

3. ಆಯುರ್ವೇದ ಅಂಗಡಿಗಳಲ್ಲಿ ಸಿಕ್ಕುವ ರಾಸ್ನಾದಿ  ಕಷಾಯ,ಮಹಾಯೋಗ ರಾಜ ಗುಗುಲಗಳನ್ನು ದಿನಕ್ಕೆ ಮೂರು ಬಾರಿ ಕೊಡುತ್ತಿರಬೇಕು .

4. ಬೆಳ್ಳುಳ್ಳಿಯ ಹಿಲಕು  ಬೇಯಿಸಿ ಪಾಯಸ ಮಾಡಿ ಕುಡಿಸಬೇಕು.