ಮನೆ ವ್ಯಾಯಾಮ ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?

ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?

0

ಬೆಂಗಳೂರು: ದೈನಂದಿನ ಜೀವನದಲ್ಲಿ ವ್ಯಾಯಾಮದ ಪಾತ್ರ ಬಹುದೊಡ್ಡದು. ಆರೋಗ್ಯಕರ ಜೀವನಕ್ಕೆ ಸರಿಯಾದ ಆಹಾರ, ಸೂಕ್ತ ವ್ಯಾಯಾಮ ಅತಿಮುಖ್ಯ. ಹೀಗಾಗಿ ಬಹುತೇಕ ಎಲ್ಲರೂ ಬೆಳಗ್ಗೆ ಇಲ್ಲವೇ ಸಂಜೆ ಒಂದಷ್ಟು ವ್ಯಾಯಾಮ ಮಾಡುವುದು ಸರ್ವೇಸಾಮಾನ್ಯ.

Join Our Whatsapp Group

ಕೆಲವರಿಗೆ ಬೆಳಗ್ಗೆ ವ್ಯಾಯಾಮ ಮಾಡುವುದು ಹಿತ ಎನಿಸಿದರೆ, ಇನ್ನು ಕೆಲವರಿಗೆ ಸಂಜೆ ವ್ಯಾಯಾಮ ಮಾಡುವುದು ಒಳ್ಳೆಯದು ಅನಿಸಬಹುದು. ಅದಾಗ್ಯೂ ಅವರವರ ಅನುಕೂಲಕ್ಕೆ ತಕ್ಕಂತೆ ಎಲ್ಲರೂ ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ವ್ಯಾಯಾಮ ಮಾಡಲು ಸರಿಯಾದ ಸಮಯ ಯಾವುದು ಎನ್ನುವ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.

ಆರೋಗ್ಯ ಪರಿಣತ ಕೆಲವರ ಪ್ರಕಾರ ವ್ಯಾಯಾಮಕ್ಕೆ ಸರಿಯಾದ ಸಮಯ ಎಂದರೆ ಮಧ್ಯಾಹ್ನ 2ರಿಂದ ಸಂಜೆಯ 6ರ ಒಳಗಿನ ಅವಧಿ. ಕೇಳಲಿಕ್ಕೆ ಇದು ಸ್ವಲ್ಪ ವಿಚಿತ್ರ ಅನಿಸಿದರೂ ಈ ಸಮಯದಲ್ಲಿ ವ್ಯಾಯಾಮ ಮಾಡುವುದು ಸೂಕ್ತ ಹಾಗೂ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ.

ಈ ಸಮಯದಲ್ಲಿ ಜಿಮ್ ​ಗೆ ವರ್ಕೌಟ್​ ಮಾಡಲು ಹೋದರೆ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ. ಈ ಅವಧಿಯಲ್ಲಿ ದೇಹದ ಕ್ಷಮತೆ ಹೆಚ್ಚಾಗಿರುತ್ತದೆ. ಅಲ್ಲದೆ ದೇಹದ ತಾಪಮಾನ ಈ ವೇಳೆ ಗರಿಷ್ಠ ಇರುವುದರಿಂದ ಸ್ನಾಯುವಿನ ಶಕ್ತಿ ಹಾಗೂ ಕಿಣ್ವದ ಚಟುವಟಿಕೆಗಳೂ ಅಧಿಕವಾಗಿರುತ್ತವೆ. ದೇಹದ ಪ್ರತಿಸ್ಪಂದನೆ ಕೂಡ ಇದೇ ಸಮಯದಲ್ಲಿ ಹೆಚ್ಚಿರುತ್ತದೆ.

ಮಾತ್ರವಲ್ಲ ಹೃದಯಬಡಿತ ಮತ್ತು ರಕ್ತದೊತ್ತಡ ಈ ಸಮಯದಲ್ಲಿ ಕಡಿಮೆ ಇರುವುದರಿಂದ ಅಪಾಯದ ಸಾಧ್ಯತೆ ಕಡಿಮೆ. ಜತೆಗೆ 2-6ರ ವೇಳೆಯ ವ್ಯಾಯಾಮ ನಿದ್ರೆಯ ಗುಣಮಟ್ಟವನ್ನೂ ಹೆಚ್ಚಿಸುತ್ತದೆ ಎನ್ನಲಾಗಿದೆ.

ಹಿಂದಿನ ಲೇಖನಮಧ್ಯಾಹ್ನದ ಹೊತ್ತು ಊಟಕ್ಕೆ ಈ ಆಹಾರಗಳನ್ನು ಸೇವಿಸಬೇಡಿ
ಮುಂದಿನ ಲೇಖನಹಾಸ್ಯ