ಮನೆ ಮನೆ ಮದ್ದು ಕೂದಲು ಬೆಳ್ಳಗಾದಾಗ

ಕೂದಲು ಬೆಳ್ಳಗಾದಾಗ

0

1. ಬೆಣ್ಣೆಗೆ ಮೆಂತ್ಯದ ಚೂರ್ಣವನ್ನು ಬೆರೆಸಿ, ತಲೆಗೆ ಉಜ್ಜಿಕೊಂಡರೆ ಅಪ್ರಾಪ್ತ  ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. ಹಚ್ಚಿಕೊಳ್ಳುವ ದಿನಗಳಲ್ಲಿ ತಣ್ಣೀರಿನಲ್ಲಿ ಸ್ಥಾನ ಮಾಡುತ್ತಿರಬೇಕು.

Join Our Whatsapp Group

2. ಮೈಂತ್ಯವನ್ನು ತಲೆಗೆ ಹರಳೆಣ್ಣೆಯೊಂದಿಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ಕಪ್ಪು ಬಣ್ಣದಲ್ಲಿ ಕಾಂತಿಯುತವಾಗಿ ಕೂದಲು ನೀಳವಾಗಿ ಬೆಳೆಯಲು ಸಹಾಯ ಆಗುತ್ತದೆ.

3. ಕೂದಲಿಗೆ ಬೆಣ್ಣೆ ಹಚ್ಚುತ್ತಿದ್ದರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ನೆರೆಯುವುದು ಅಸಂಭವ ಎನಿಸುವುದು.

4. ನೆಲ್ಲಿಕಾಯಿಯನ್ನು ಹಲವಾರು ವಿಧದಲ್ಲಿ ಊಟದಲ್ಲಿ ಸೇವಿಸುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು.

5. ನೆಲ್ಲಿಕಾಯಿ ರಸದ ತೈಲವನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ ತಲೆ ತೊಳೆದು ಕೊಳ್ಳುವುದರಿಂದ ಕೂದಲು ಉದುರದೆ, ಕಪ್ಪು ಬಣ್ಣದಲ್ಲಿ ಕಾಂತಿ ಹೆಚ್ಚುವುದು. ಹೊಟ್ಟು ಉದುರುವುದು  ಕಡಿಮೆ ಆಗುವುದು.

6. ಅರಿಶಿನ ಪುಡಿಯನ್ನು ತಿಕ್ಕಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ,ಚೆನ್ನಾಗಿ ಬೆಳೆಯುತ್ತದೆ.

7. ಹಸಿ ದಂಟಿನ ಸರ ತೆಗೆದು ತಲೆ  ಗೂದಲಿಗೆ ಹಚ್ಚುತ್ತಿದ್ದರೆ ಕೂದಲು ಸಮೃದ್ಧಿಯಾಗಿ ಬೆಳೆಯುವುದು,ನೆರೆ ಕಾಣಿಸದೆ ರೇಷ್ಮೆಯಷ್ಟು ನೂರಪಾಗಿ, ಕಪ್ಪು ಬಣ್ಣಕ್ಕೆ ತಿರುಗುವುದು.

8. ವಿಳೆದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಸಿ, ತಲೆಗೆ ಹಚ್ಚಿ ಸ್ನಾನ ಮಾಡುತ್ತಿದ್ದರೆ ಕೂದಲು ಉದುರುವುದು ನಿಂತು ಹೋಗುವುದು.

9. ಹರಳಣ್ಣೆಯನು ದಿನವು ತಲೆಗೆ ಹಚ್ಚುವುದರಿಂದ, ವಾರಕ್ಕೊಂದು ಬಾರಿ ಹರಳೆಣ್ಣೆಯನ್ನು ತಲೆಗೆ ಹಚ್ಚಿಕೊಂಡು ಅಭ್ಯಂಜನ ಸ್ಥಾನ ಮಾಡುವುದರಿಂದ ದೇಹವು ತಂಪಾಗುವುದಲ್ಲದೆ, ಕೂದಲು ನೀಳವಾಗಿ ಬೆಳೆಯುವುದು. ಜೊತೆಗೆ ತಲೆಯಲ್ಲಿ ಹೊಟ್ಟು ಉದುರುವ ಸಂಭವವು ಕಡಿಮೆ ಆಗುವುದು.

10. ಗರಿಕೆ ಹುಲ್ಲಿನ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಉದುರುವುದು ನಿಂತು ಹೋಗುವುದು. ಕೂದಲು ಬೆಳ್ಳಗಾಗಿ ಉದುರುವುದು ಕಡಿಮೆ ಆಗುವುದು.

11. ಬೇವಿನ ಸೊಪ್ಪಿನ ಕಷಾಯದಿಂದ ತಲೆ ತೊಳೆದುಕೊಳ್ಳುತ್ತಿದ್ದರೆ ಕೂದಲು ಉದುರುವುದು. ನಿಲ್ಲುವುದರ ಜೊತೆಗೆ ಅಕಾಲದಲ್ಲಿ ನೆರೆತು ಹೋಗುವುದೂ ಕಡಿಮೆ ಆಗುವುದು.

12. ಬೇವಿನ ಬೀಜವನ್ನು ನುಣ್ಣಗೆ ಅರೆದು,ಕೂದಲಿಗೆ ಹಚ್ಚಿ ಹಲವಾರು ಗಂಟೆಗಳ ನಂತರ ಬೇವಿನಸೊಪ್ಪಿನ ಕಸಾಯದಿಂದ ತಲೆ ತೊಳೆದುಕೊಂಡರೆ ಹೇನು ಗಳು ಹೋಗುವುವು.

13. ಗೋರಂಟಿ ಸೊಪ್ಪಿನ ಪುಡಿಯನ್ನು ಕೋಳಿ ಮೊಟ್ಟೆಯ ಹಳದಿಯ ಭಾಗ ದೊಂದಿಗೆ ಸೇರಿಸಿ, ಚೆನ್ನಾಗಿ ಕಲೆಸಿ ಮಲಗುವಾಗ ತಲೆಗೆ ಹಚ್ಚಿಕೊಂಡು ಬೆಳ್ಳಗೆ ಬಿಸಿನೀರಿನ ಸ್ನಾನ ಮಾಡಿದರೆ ತಲೆಯಲ್ಲಿ ಹೊಟ್ಟು ಏಳುವುದು ಉದುರುವುದು ಕಡಿಮೆ ಆಗುವುದು.

14. ನಿಂಬೆ ಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ, ಮಲಗುವಾಗ ತಲೆಗೆ ಹಚ್ಚಿಕೊಳ್ಳುತ್ತಿದ್ದರೆ, ದಿನ ಕ್ರಮೇಣ ನರೆತ ಕೂದಲು ಕಪ್ಪಾಗಾಗಿ, ಸಮೃದ್ಧವಾಗಿ ಬೆಳೆಯುವುದು, ಹೊಳಪು ಹೆಚ್ಚುವುದು.

15. ಸೀಬೆ ಮರದ ಎಲೆಗಳನ್ನು ಅರಿಶಿನ ಪುಡಿಯೊಂದಿದಿಗೆ ನುಣ್ಣಗೆ ಅರೆದು, ಮಲಗುವ ಮುನ್ನ ತಲೆಗೆ ಹಚ್ಚಿಕೊಂಡು, ಬೆಳಗಾಗೆದ್ದು ಡೆಟಾಲ್ ಬೆರೆಸಿದ ನೀರಿನಿಂದ ತೊಳೆದರೆ ಹೇನುಗಳು ಸತ್ತು ಹೋಗುವುದು.