ಮನೆ ಮನೆ ಮದ್ದು ಬಾಯಾರಿಕೆ ಆದಾಗ

ಬಾಯಾರಿಕೆ ಆದಾಗ

0

1. ಉಪ್ಪಿನೊಡನೆ ಮಾವಿನಕಾಯಿ ನಂಜಿಕೊಂಡು ತಿಂದರೆ ಬಾಯಾರಿಕೆಯ ಬಳಲಾಟ ದೂರ ಆಗುತ್ತದೆ.

Join Our Whatsapp Group

2. ಒಳ್ಳೆಯ ಕಸಿ ಮಾವಿನ ಹಣ್ಣುಗಳನ್ನು ಊಟ ಆದ ನಂತರ ಸೇವಿಸುವುದರಿಂದ ಬಾಯಾರಿಕೆ ಇಂಗುತ್ತದೆ.

3. ಎಳನೀರನ್ನು ಕುಡಿಯುವುದರಿಂದ ಬಾಯಾರಿಕೆ ನಿವಾರಣೆ ಆಗುವುದು.

4. ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು, ರಸದೊಂದಿಗೆ ನುಂಗುವುದರಿಂದ ಬಾಯಾರಿಕೆ ನಿವಾರಣೆ ಆಗುವುದು.

5. ಮೋಸಂಬಿ ಹಣ್ಣಿನ ರಸವನ್ನು ಸೇವಿಸುವುದರಿಂದಲೂ ಬಾಯಾರಿಕೆ ದೂರ ಆಗುವುದು.

6. ಕಿತ್ತಲೆಹಣ್ಣಿನ ರಸವನ್ನು ಸೇವಿಸುವುದರಿಂದಲೂ ಬಾಯಾರಿಕೆ ದೂರ ಆಗುವುದು.

7. ಬೆಲ್ಲದ ಹಣ್ಣು ಬೆಲ್ಲದ ಪಾನಕವನ್ನು ಸೇವಿಸುವುದರಿಂದ ಬಾಯಾರಿಕೆಯ ನಿವಾರಣೆ ಆಗುವುದರೊಂದಿಗೆ ದೇಹಕ್ಕೆ ತಂಬು ದೊರೆಯುವುದು.

8. ಅತಿದಾಹದಿಂದ ಬಳಲುವ ರೋಗಿಗಳು ಒಂದು ಬಟ್ಟಲು  ಕಾಯಿಸಿದ ಹಾಲಿಗೆ ಅರಿಶಿನ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿದರೆ ದಾಹ ಕಡಿಮೆ ಆಗುವುದು.

9. ನೀರು ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಬೆರೆಸಿ ಕುಡಿಯುವುದರಿಂದ ಬಾಯಾರಿಕೆ ನಿವಾರಣೆ ಆಗುವುದು.

10. ಕಲ್ಲಂಗಡಿ ಹಣ್ಣಿನ ಕರ್ಬುಜದ ಹಣ್ಣಿನ ಪಾನಕ ಬಾಯಾರಿಕೆಯ ನಿವಾರಣೆಗೆ ಸುಲಭೋಪಾಯ.

11. ನಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಹಿಂಡಿ,ಏಲಕ್ಕಿ ಪುಡಿ ಹಾಗೂ ಸಕ್ಕರೆ ಸೇರಿಸಿ ಮಾಡಿದ ಪಾನಕವನ್ನು ಸೇವಿಸುವುದರಿಂದ ಬಾಯಾರಿಕೆ ಹಾಗೂ ದಾಹ ದೂರ ಆಗುವುದಲ್ಲದೆ ಶರೀರವನ್ನು ತನುವಾಗಿರುವುದು.

12. ಕಲ್ಲಂಗಡಿ ಹಣ್ಣಿಕಗೆ ಜೀರಿಗೆ ಪುಡಿ,ಕಲ್ಲು ಸಕ್ಕರೆಯ ಪುಡಿ ಸೇರಿಸಿ ತಿಂದರೆ ಅತಿ ಬಾಯಾರಿಕೆ ಕಡಿಮೆ ಆಗುವುದು.