ನಾವು ನಮ್ಮ ರಾಶಿಯ ಅನುಸಾರ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನ ಊಹಿಸಲು ಸಾಧ್ಯವಾಗುತ್ತದೆ. ಹಾಗೆಯೇ, ಒಂದೊಂದು ರಾಶಿಯವರು ಒಂದೊಂದು ದೇವರನ್ನು ಆರಾಧನೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಹಾಗಾದ್ರೆ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು ಎಂಬುದು ಇಲ್ಲಿದೆ.
ಮೇಷ ರಾಶಿ: ಮೇಷರಾಶಿಯವರು ಸೂರ್ಯ ದೇವನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಪ್ರತಿದಿನ ಸೂರ್ಯನಿಗೆ ಅರ್ಘ್ಯ ಕೊಡುವುದು ಉತ್ತಮ. ಹಾಗೆಯೇ ಗಾಯತ್ರಿ ಮಂತ್ರವನ್ನು 108 ಬಾರಿ ಪಠಣೆ ಮಾಡಿ.
ವೃಷಭ ರಾಶಿ: ವೃಷಭ ರಾಶಿಯವರು ಚಂದ್ರನ ಪೂಜೆ ಮಾಡಬೇಕು. ಚಂದ್ರ ಬೀಜ ಮಂತ್ರವನ್ನು ಪ್ರತಿದಿನ ತಪ್ಪದೇ ಪಠಿಸಿ. ಹಾಗೆಯೇ ಬಿಳಿ ಬಟ್ಟೆಯನ್ನು ಬಡವರಿಗೆ ದಾನ ಮಾಡಿ.
ಮಿಥುನ ರಾಶಿ: ಮಿಥುನ ರಾಶಿಯವರು ಸಂಪತ್ತಿನ ದೇವತೆ ಲಕ್ಷ್ಮೀಯ ಆರಾಧನೆ ಮಾಡಬೇಕು. ಮುಖ್ಯವಾಗಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೆಯೇ, ಬೆಳಗ್ಗೆ ಹಾಗೂ ಸಂಜೆ ತಪ್ಪದೇ ಮನೆಯಲ್ಲಿ ದೀಪ ಹಚ್ಚಿ.
ಕಟಕ ರಾಶಿ: ಈ ರಾಶಿಯವರು ಹನುಮಂತನ ಪೂಜಿಸುವುದು ಬಹಳ ಮುಖ್ಯ. ಹನುಮಂತ ಕೃಪೆಗೆ ಪಾತ್ರರಾಗಬೇಕು ಎಂದರೆ ಶ್ರೀರಾಮನನ್ನ ಸಹ ನೀವು ಭಕ್ತಿಯಿಂದ ಆರಾಧನೆ ಮಾಡಬೇಕು. ಹಾಗೆಯೇ, ಶನಿವಾರ ಹನುಮಂತನಿಗೆ ವೀಳ್ಯದೆಲೆ ಹಾರ ಅರ್ಪಿಸಿ.
ಸಿಂಹ ರಾಶಿ: ಸಿಂಹ ರಾಶಿಯವರು ಶಿವನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ರಾಶಿಯವರು ಪ್ರತಿ ಸೋಮವಾರ ಬಿಲ್ವ, ಹಾಲು ಹಾಗೂ ನೀರನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಬೇಕು.
ಕನ್ಯಾ ರಾಶಿ: ಕನ್ಯಾ ರಾಶಿಯವರು ಕಾಳಿ ಮಾತೆಯನ್ನು ಪೂಜಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ. ಕಾಳಿಯನ್ನು ಮೆಚ್ಚಿಸಲು ಮೊದಲು ಮಹಿಳೆಯರನ್ನು ಅಗೌರವದಿಂದ ನೋಡುವುದನ್ನ ಬಿಡಬೇಕು. ಹಾಗೆಯೇ ಪ್ರತಿದಿನ ಧ್ಯಾನ ಮಾಡಬೇಕು.
ತುಲಾ ರಾಶಿ: ತುಲಾ ರಾಶಿಯವರು ದೇವಿ ಪಾರ್ವತಿಯನ್ನು ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ನೀವು ಶಿವ ಹಾಗೂ ಪಾರ್ವತಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಾಗೂ ಬಳೆಯನ್ನು ಅರ್ಪಣೆ ಮಾಡಬೇಕು.
ವೃಶ್ಚಿಕ ರಾಶಿ: ಯಾವುದೇ ಕೆಲಸವನ್ನು ಆರಂಭ ಮಾಡುವ ಮುನ್ನ ಗಣೇಶನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಗಣೇಶನಿಗೆ ಮೋದಕವನ್ನು ಪ್ರತಿ ಬುಧವಾರ ನೈವೇದ್ಯ ಮಾಡಿ.
ಧನಸ್ಸು ರಾಶಿ: ಧನಸ್ಸು ರಾಶಿಯವರು ವಿಷ್ಣುವಿನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸುಖ ಹಾಗೂ ಶಾಂತಿ ನೆಲೆಸಿರುತ್ತದೆ. ಪ್ರತಿದಿನ ವಿಷ್ಣು ಮಂತ್ರ ಪಠಣೆ ಮಾಡಲು ಮರೆಯದಿರಿ. ಏಕಾದಶಿ ದಿನ ವಿಷ್ಣು ಪೂಜೆ ಮಾಡಿ.
ಮಕರ ರಾಶಿ: ಮಕರ ರಾಶಿಯವರು ದೇವಿ ಸರಸ್ವತಿಯನ್ನು ಪೂಜಿಸಬೇಕು. ನಿಮ್ಮ ಪುಸ್ತಕದ ಪುಟಗಳ ಮಧ್ಯೆದಲ್ಲಿ ನವಿಲು ಗರಿಯನ್ನು ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
ಕುಂಭ ರಾಶಿ: ಕುಂಭ ರಾಶಿಯವರು ಶನಿ ದೇವನ ಪೂಜೆ ಮಾಡಬೇಕು. ತಪ್ಪದೇ ಶನಿವಾರ ಎಳ್ಳಿನ ದೀಪವನ್ನು ಹಚ್ಚಬೇಕು ಹಾಗೂ ಕಪ್ಪು ಎಳ್ಳನ್ನು ದಾನ ಮಾಡಬೇಕು. ಹಾಗೆಯೇ ನಾಯಿಗಳಿಗೆ ಸಹ ಆಹಾರವನ್ನು ಕೊಡಬೇಕು.
ಮೀನ ರಾಶಿ: ಮೀನ ರಾಶಿಯವರು ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ನವರಾತ್ರಿ ಹಬ್ಬದ ದಿನ ತಪ್ಪದೇ 9 ದಿನವೂ ಉಪವಾಸ ಮಾಡಿ. ದೇವಿಯ ದೇವಸ್ಥಾನಕ್ಕೆ ಆಗಾಗ ನೈವೇದ್ಯ ಕೊಡಿ.