ಮನೆ ರಾಜಕೀಯ ಕುವೆಂಪು, ಬಸವಣ್ಣ ಆಶೀರ್ವಾದವಿರುವಾಗ, ಮೋದಿ ಆಶೀರ್ವಾದ ಬೇಕಿಲ್ಲ: ಪ್ರಿಯಾಂಕಾ ಗಾಂಧಿ

ಕುವೆಂಪು, ಬಸವಣ್ಣ ಆಶೀರ್ವಾದವಿರುವಾಗ, ಮೋದಿ ಆಶೀರ್ವಾದ ಬೇಕಿಲ್ಲ: ಪ್ರಿಯಾಂಕಾ ಗಾಂಧಿ

0

ಮೈಸೂರು: ಮತ ಹಾಕದಿದ್ದರೆ ನರೇಂದ್ರ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಹಂಕಾರದ ಮಾತುಗಳನ್ನು ಆಡಿದ್ದಾರೆ. ಬಸವಣ್ಣ, ಕುವೆಂಪು ಅವರ ನಾಡಿದು. ಅವರ ಆಶೀರ್ವಾದವಿರುವಾಗ ಮೋದಿ ಅವರ ಆಶೀರ್ವಾದ ಬೇಕಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುಡುಗಿದರು.

Join Our Whatsapp Group

ಜಿಲ್ಲೆಗೆ ಇದೇ ಮೊದಲ ಬಾರಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಚುನಾವಣಾ ರಣಕಹಳೆ ಮೊಳಗಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ತಿರುಗೇಟು ನೀಡಿದರು.

ತಿ.ನರಸೀಪುರ ತಾಲ್ಲೂಕಿನ ಹೆಳವರಹುಂಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಹೆಲಿಕಾಪ್ಟರ್ ಬರುವಾಗ ಎಷ್ಟು ಸುಂದರ ಜಾಗಕ್ಕೆ ಬಂದಿದ್ದೇನೆ. ಕಪಿಲಾ, ಕಾವೇರಿ ನದಿಗಳ ಸಂಗಮ ಸ್ಥಳ. ದೇಗುಲಗಳ ಪವಿತ್ರವಾದ ಭೂಮಿಯಿದು. ಹಸಿರುಕ್ಕುವ ಸಮೃದ್ಧ ಕೃಷಿಭೂಮಿ ನಿರ್ಮಾಣ ಮಾಡಿದವರ ಮುಂದೆ ಮಾತನಾಡುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.

ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಜನರ ದನಿಯಾಗುವ ಸರ್ಕಾರವಿರಬೇಕು. ದೇಶದ ವಿಕಾಸ ಮಾಡುವುದು ಹಾಗೂ ಜನ ಸಂಸ್ಕೃತಿ ಕಾಪಾಡುವುದು ಸರ್ಕಾರದ ಧರ್ಮ. ಆದರೆ, ಅಪ್ರಾಮಾಣಿಕವಾದ ಸರ್ಕಾರ ಅಳುತ್ತಿದೆ. ಅದಕ್ಕೆ ಜನರ ಕಷ್ಟಗಳು ಬೇಕಿಲ್ಲ. ಲೂಟಿ ಹೊಡೆಯುವುದೇ ಅದರ ಗುರಿಯಾಗಿದೆ ಎಂದರು.

ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಜನಾದೇಶದ ವಿರುದ್ಧವಾಗಿ, ಜನರನ್ನು ವಂಚಿಸಿ, ಶಾಸಕರಿಗೆ ಆಮಿಷವೊಡ್ಡಿ ಹಣ ಬಲದಿಂದ ರಚಿಸಿತು. ಪರಿಣಾಮ ಯಾವುದೇ ಕೆಲಸ ಮಾಡಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಅನುದಾನವೂ ಕಡಿಮೆಯಾಯಿತು. ರಾಜ್ಯ ಸರ್ಕಾರವು ನಿರ್ಲಜ್ಜೆಯಿಂದ ಜನರ ಲೂಟಿ ಮಾಡಿತು. ಗುತ್ತಿಗೆದಾರರು, ಶಾಲಾ ಆಡಳಿತ ಮಂಡಳಿಯವರು ಮೋದಿ ಅವರಿಗೆ ಪತ್ರ ಬರೆದರೂ, ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಕ್ರಮವಹಿಸಲಿಲ್ಲ ಎಂದು ಕಿಡಿಕಾರಿದರು.

ಪಿಎಸ್ ಐ ನೇಮಕಾತಿಯಲ್ಲಿ ಹಗರಣ ನಡೆಯಿತು. ಬಿಜೆಪಿ ಶಾಸಕನ ಬಳಿ 7 5 ಕೋಟಿ ಹಣ ಸಿಕ್ಕಿತ್ತು. ಅವರು ತಲೆ ಮರೆಸಿಕೊಂಡರು. ಈ ಸರ್ಕಾರ ಕೋವಿಡ್ ಹೆಸರಿನಲ್ಲೂ ಲೂಟಿ ಮಾಡಿತು. ಶಾಲಾ ಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರವು 1 1.5 ಕೋಟಿ ಹಣ ಲೂಟಿ ಮಾಡಿದೆ. ಆ ಹಣದಲ್ಲಿ ಎರಡೂವರೆ ಸಾವಿರ ಕಿ.ಮೀ ರಸ್ತೆ ನಿರ್ಮಿಸಬಹುದಿತ್ತು. 750 ಕಿ.ಮೀ ಮೆಟ್ರೊ ಮಾರ್ಗ ನಿರ್ಮಿಸಬಹುದಿತ್ತು. ಬಡವರಿಗೆ 30 ಲಕ್ಷ ಮನೆಗಳನ್ನು ಕಟ್ಟಬಹುದಿತ್ತು ಎಂದರು.