ಮನೆ ಜ್ಯೋತಿಷ್ಯ ಬಿಳಿ ಕುಷ್ಟ ತೊನ್ನು

ಬಿಳಿ ಕುಷ್ಟ ತೊನ್ನು

0

 ಕಿರಾತಕ ಕಡ್ಲಿ : ಇದರ ಎಲೆಗಳಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಸಾಮಾನ್ಯ ಕಾದ ಎಲ್ಲಾ ಚರ್ಮರೋಗಗಳೂ ವಾಸಿಯಾಗುತ್ತಾಯ

Join Our Whatsapp Group

 ಸೂರ್ಯನ ಬಿಸಿಲು – ಭಾರತೀಯರ ಮೈ ಚರ್ಮದಲ್ಲಿ ಮಿಲಾನಿನ್ ಎಂಬ ಬಣ್ಣ ಕಾರಕ ವಸ್ತು ಇದು ಸೂರ್ಯನಿಂದ ಹೊರಬರುವ ಆಲ್ಫಾವಯೋಲೆಟ್ ಎಂಬ ಕಿರಣಗಳಿಂದ ಚರ್ಮವನ್ನು  ಕ್ಷಿಸುತ್ತದೆ.

 ಪ್ರಾಣಾಯಾಮ – ನಿತ್ಯ ಪ್ರಾಣಾಯಾಮದ ಜೊತೆ, ಸೂರ್ಯಭೇದನ ಪಾಕಾಯಾಮ ಮಾಡಿ

 ಮುದ್ರೆಗಳು – ವರುಣ ಮುದ್ರೆ + ಪೃಥ್ವಿಮುದ್ರೆ. ಪ್ರತಿಯೊಂದು 15 ನಿಮಿಷಗಳ ಕಾಲ ಮಾಡಿ.

 ಜ್ಯೋತಿಷ್ಯಶಾಸ್ತ್ರದ ಪ್ರಕಾರ :

 ಚರ್ಮ ವ್ಯಾದಿಗೆ – ಬುದ್ಧ ಕಾರಕ

ಕಾರಕ ಭಾವಗಳು – ಲಗ್ನ ಭಾವ ಅನಂತರ ಅಷ್ಟಮ.

ರಾಶಿಗಳಲ್ಲಿ – ಬುಧನ ಮಿಥುನ ಮತ್ತು ಕನ್ಯಾರಾಶಿಗಳು, ಆನಂತರ ವೃಶ್ಚಿಕರಾಶಿ.

ಅನಂತರ – ರಾಹು, ಕೇತು, ಕುಜ ಕಾರಕರು.

ರಸಾಯನಿಕ ಮತ್ತು ದೀರ್ಘಕಾಲದ ವ್ಯಾಧಿಗಳಿಗೆ – ಶನಿ ಕಾರಕ.

      ಯಾವುದೇ ಜಾತಕದಲ್ಲಿ ಇವರು ಪೀಡಿತರಾಗಿ ಲಗ್ನ ಲಗ್ನಾಧಿಪತಿಯ ಮೇಲೆ ಹಭಾವ ಬೀರಿದರೆ ನರ, ಚರ್ಮಕ್ಕೆ ಬುಧ, ರಕ್ತಕ್ಕೆ – ಕುಜ, ಪ್ರಧಾನದಾತು, ಜೀವಾಣುಗಳಿಗೆ ರಾಹು/ಕೇತುಗಳು ಕಾರಕರು ಸಾಮಾನ್ಯವಾಗಿ ಈ ವ್ಯಾಧಿಯು ರಕ್ತನ್ಯೂನತೆಯಾಗಿ ಅಲ್ಲಿ ಜೀವಾಣುಗಳು ಆಕ್ರಮಿಸಿ, ಸ್ವಾಭಾವಿಕವಾಗಿ ಹೊಂದಿದ ಚರ್ಮದ ಬಣ್ಣ ಬದಲಾಯಿಸುತ್ತದೆ. ಆದ್ದರಿಂದ ಸೃಷ್ಟಿ ಕಾರಕ ರವಿಯು ಪೀಡಿತ ಈ ರೀತಿಯ ಜಾತಕಗಳಲ್ಲಿ ಶುಭ ಗ್ರಹಗಳಾದ ಗುರು ಶುಕ್ರರು ಸಂಬಂಧವಿದ್ದರೆ ಮಾತ್ರ ಈ ವ್ಯಾಧಿ ನಿವಾರಣೆಯಾಗುತ್ತದೆ. ಆದರೆ ಅವರೇ ಪೀಡಿತ ಗ್ರಹಗಳಾಗಬಾರದು. ಮೇಲೆ ತಿಳಿಸಿದ 6 ಗ್ರಹಗಳು ಸಾಮಾನ್ಯವಾಗಿ ಅಪರೂಪವಾಗಿ ಜಾತಕಗಳಲ್ಲಿ ತೊಂದರೆಯಾಗಿ ಪೀಡಿಸುತ್ತವೆ. ಆದ್ದರಿಂದ ಈ ವ್ಯಾಧಿಗಳ ಬರುವುದು ಕೆಲವೇ ಜನಗಳಿಗೆ ಮಾತ್ರ ಲಗ್ನ- ಅಷ್ಟುಮ ಕಾರಕ ಭಾವವಾಗಿರುತ್ತದೆ.

 ರಾಹುವಿಗೆ ಪರಿಹಾರ

ಪ್ರತಿ ಶನಿವಾರ ಬೆಳಗ್ಗೆ ಸ್ನಾನದ ನಂತರ ಕಪ್ಪು ವಸ್ತ್ರದರಿಸಿ ಒಂದು ಚೆಂಬುವಿನಲ್ಲಿ ದರ್ಭೆ, ಗರಿಕೆ ಮತ್ತು ನೀರು ಹಾಕಿಕೊಂಡು ಅರಳಿದುರವನ್ನು (ಅಶ್ವಥ ಕಟ್ಟೆ) 9 ಪ್ರದಕ್ಷಿಣೆ ಮಾಡಿ. ಆನಂತರ ಎಲ್ಲಾ ನೀರು ಮರದ ಬುಡಕ್ಕೆ ಹಾಕಿ ನವಗ್ರಹಗಳಿಗೆ 9 ಪ್ರದಕ್ಷಣೆಯನ್ನು ಹಾಕಿ 100 ಗ್ರಾಂ ಉದ್ದಿನ ಬೇಳೆಯನ್ನು ದಕ್ಷಿಣೆ ಸಹಿತ ದಾನ ಮಾಡಿ. ರಾಹು ಗ್ರಹದ ಅಭಿಮಾನ ದೇವತೆ ದುರ್ಗೆಯ ಮಂತ್ರ – ‘ಓಂ ಶ್ರೀಂ ದುಂ ದುರ್ಗೈ ನಮಃ ಸ್ತೋತ್ರವನ್ನು ಪ್ರತಿದಿನ 108 ಸಲ ಪಠಿಸಿ. ಆ ರಾತ್ರಿ ಅಥವಾ ಬೆಳಗಿನ ಸಮಯ ದಲ್ಲಿ ಒಂದು ದೀಪವನ್ನು ಆ ಅರಳಿಮರದ ಬುಡದಲ್ಲಿ ಹಚ್ಚಿಡಿ ಇದು ಪ್ರಬಲವಾದ ರಾಜು ಪರಿಹಾರ ಇದು ನಿಧಾನವಾಗಿ ಚರ್ಮವ್ಯಾಧಿಯಾದ ಬಿಳಿತೊನ್ನು ನಿವಾರಣೆಮಾಡುತ್ತದೆ.

 ನಿಯಮಾವಳಿಗಳು

1 ಚಂದ್ರ ಅಥವಾ ಬುಧರು ಜನ್ಮ ಲಗ್ನಾಧಿಪತಿಗಳಾಗಿದ್ದು ರಾಹು, ಕೇತು, ಶನಿ, ಕುಜರ ಸಂಬಂಧ ಪಡೆದಿದ್ದರೆ ಮತ್ತು ಜಾತಕರ ಲಗ್ನ ಮತ್ತು ಅಷ್ಟನು ಪೀಡಿತರಾಗಿ, ರವಿಯು ಬಲಹೀನನಾದರೆ ಬಿಳಿಕುಷ್ಟ.

2. ಲಗ್ನಾಧಿಪತಿಯು 4 ಅಥವಾ 12ನೇ ಭಾಗದಲ್ಲಿ ಕುಜ ಅಥವಾ ಬುಧನ ಯುತಿ ಪಡೆದು ಪೀಡಿತ ರಾದರೆ ಚರ್ಮವ್ಯಾಧಿ ಶನಿ, ರಾಹು ಕೇತುಗಳ ಸಂಬಂಧ ಪೀಡಿತವಾಗಿದ್ದರೆ ಬಿಳಿಯ ಕುಷ್ಟ ವ್ಯಾಧಿ

3.ಗುರು 6 ರಲ್ಲಿದ್ದು, ಶನಿ ಮತ್ತು ಚಂದ್ರನ ಸಂಬಂಧ ಪಡೆದರೆ – ಕುಷ್ಟರೋಗ,

4. ಕುಜ ಮತ್ತು ಶನಿಯು 2 ಮತ್ತು 12 ರಲ್ಲಿದ್ದು ರಾಹುವಿನಿಂದ ಪೀಡಿತರಾದರೆ.