ಅಲ್ಪಿನಿಸಂ (Albinism)
ಇದನ್ನು ಬಿಳಿಕುಪ್ಪ ಅಥವಾ ತೊನ್ನು ವ್ಯಾಧಿ ಎನ್ನುತ್ತಾರೆ. ಇದು ವಂಶಪಾರಂಪರೆ ಅಥವ ಅನುವಂಶಿಕತೆಯಿಂದ ಬರುತ್ತದೆಂದು ಹೇಳುತ್ತಾರೆ. ಇದು ಚರ್ಮಕ್ಕೆ ಬಣ್ಣ ನೀಡುವ ರಸಾಯ ಮೆಲನಿನ್ (Melanin) ದ್ರವ್ಯ ಉತ್ಪತ್ತಿಯಲ್ಲಿ ದೋಷ ಉಂಟಾಗುವಿಕೆಯಿಂದ ಬರುತ್ತದೆ. ಎಲ್ಲಿ ಈ ರಸಾಯನಿಕ ದ್ರವ್ಯ ಚರ್ಮದಲ್ಲಿ ಉತ್ಪತ್ತಿಯಾಗುವುದಿಲ್ಲವೋ ಅಲ್ಲಿ ಚರ್ಮದ ಬಣ್ಣವು ಬಿಳಿಬಣ್ಣದಲ್ಲಿ ಇರುತ್ತದೆ ನೈಸರ್ಗಿಕವಾದ ಚರ್ಮದ ಬಣ್ಣವಿರುವುದಿಲ್ಲ ಇದು ಒಂದು ರೀತಿಯ ಸೂಕ್ಷ್ಮವಾದ ಚರ್ಮದ ಕ್ಯಾನ್ಸರ್. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ.
ಇದು ಈಜಿಪ್ಟ್ ಮತ್ತು ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಭಾರತದಲ್ಲಿ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಇದನ್ನು ‘ಲ್ಯೂಕೊಡರ್ಮ’ ಅಥವಾ ವಿಟಲಿಗೊ’ ಎಂದೂ ಸಹ ಕರೆಯ ತ್ತಾರೆ. ಶೇಕಡ 1-2 ರಷ್ಟು ಮಂದಿಗೆ ಇರುತ್ತದೆ. ಸಾಮಾನ್ಯವಾಗಿ 20ರಿಂದ 40 ವರ್ಷದವರೆಗೆ ಹೆಚ್ಚ ಬರುತ್ತದೆ, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಇದರ ಪ್ರಮಾಣ ಕಡಿಮೆ. ಈ ಕಾಯಿಲೆ ಅನುವಂಶಿಯತೆಯ ಪ್ರಭಾವ ಶೇಕಡ 20ರಷ್ಟು. ನಮ್ಮ ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಅಂಶದ ಕೊರತೆಯಿಂದ ಈ ವ್ಯಾಧಿ ಬರುತ್ತದೆ. ತಜ್ಞರ ಪ್ರಕಾರ – ಕೆಲವು ರಸಾಯನಿಕ ದ್ರವ್ಯಗಳೂ ಸಹ ಈ ವ್ಯಾಧಿಗೆ ಪರಿಣಾಮ ಬೀರುತ್ತದೆ ಇದು ಅಂಟು ರೋಗವಲ್ಲ ಯಾವುದೇ ರೋಗಾಣುಗಳಿಂದ ಬರುವುದಿಲ್ಲ. ಆರೋಗ್ಯವಂತ ರಾಗಿರುತ್ತಾರೆ. ಆದರೆ ಮಾನಸಿಕ ಸಂಕಟ ಪಡುತ್ತಾರೆ. ಇದಕ್ಕೂ ಚಿಕಿತ್ಸೆ ಇದೆ. ಆದರೆ ಅಲ್ಪ ಪ್ರಮಾಣದಲ್ಲಿ ಇದ್ದರೆ ಮಾತ್ರ, ಮೆಲನಿನ್ ವರ್ಣ ಜೀವಕೋಶಗಳ ಕೃಷಿ ಮತ್ತು ಸ್ವ-ಕಸಿ ವಿಧಾನಕ್ಕೂ ಹೋಗಬಹುದು.
ಮೊದಮೊದಲು ಚರ್ಮದಲ್ಲಿ ಸಣ್ಣ ಬಿಳಿ ಮಚ್ಚೆಗಳು ಕಾಣಿಸುತ್ತವೆ. ಕಾಲಕ್ರಮೇಣ ಇದು ಬಲು ಬೇಗನೆ ದೇಹದ ಎಲ್ಲಾ ಭಾಗಕ್ಕೂ ವ್ಯಾಪಿಸುತ್ತದೆ ಕೂದಲು ಬೆಳೆಯುವ ಭಾಗ ಸಹ ವರ್ಣತೀತವಾಗಿರುತ್ತವೆ. ಕೆಲವರು ಇದನ್ನು ತಪ್ಪಾಗಿ ಕುಷ್ಟ ರೋಗವೆಂದು ಭಾವಿಸುತ್ತಾರೆ.
ಪರಿಹಾರ
ವೈದ್ಯರ ಸಲಹೆಯಂತೆ ಪ್ರತಿದಿನ ಬೆಳಿಗ್ಗೆ 10-20 ವನ್ನು ಬಿಸಿಲಿಗೆ ಒಡ್ಡಬೇಕು. ಸೇವಿಸುವ ಆಹಾರದಲ್ಲಿ ಹೆಚ್ಚಾಗಿ ಕಬ್ಬಿಣಾಂಶವಿರಬೇಕು. ಸೊಪ್ಪ ತರಕಾರಿಗಳನ್ನು ಉಪಯೋಗಿಸಬೇಕು. ಮಾನಸಿಕ ಒತ್ತಡಕ್ಕೆ ಒಳಗಾಗಬಾರದು ಇದು ಗುಣವಾಗಲು ನಂಬಿಕೆ ಮತ್ತು ಆಸೆಯೇ ಮೂಲಾಧಾರ.
ಗರಿಕೆ ಹುಲ್ಲು – ವಿಸರ್ಪ , ಗಜಕರ್ಣ, ಇಸುಬು, ಕಜ್ಜಿ, ತುರಿ, ಸರ್ಪಸುತ್ತು, ಹರ್ಪಿಸ್ ಮುಂತಾದ ಚರ್ಮರೋಗಗಳಿಗೆ ಗರಿಕೆಯಲ್ಲಿ ತಯಾರಿಸಿದ ದೂರ್ವ ತೈಲ ಮತ್ತು ದೂರ್ವ್ಯಾಧಿ ಘೃತ ಎಂಬ ಆಯುರ್ವೇಧ ಔಷಧಗಳು ದಿವ್ಯೌಷಧ.
ಅಶ್ವಗಂಧ : ಇದರ ಪುಡಿಯನ್ನು ನಿಯಮಿತವಾಗಿ ತೆಗೆದುಕೊಂಡರೆ ಶ್ವೇತ ಕುಷ್ಟ ನಿವಾರಣೆಯಾಗುತ್ತದೆ.
ಲಜ್ಜವತಿ (ಮುಟ್ಟಿದರೆ ಮುನಿ): – ಈ ಗಿಡದ ಬೇರು ಅಥವಾ ಎಲೆಯನ್ನು ನೀರಿನಲ್ಲಿ ಕುದಿಸಿ, ಆರಿಸಿದ ನೀರನ್ನು ಕುಡಿಯುವುದರಿಂದ ರಕ್ತಶುದ್ಧಿಯಾಗುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತದೆ.