ವಿಟ್ಲ(Vitla) ಇಲ್ಲಿನ ಅಂಗಡಿಯೊಂದರ ಶಟರ್’ ಮೇಲೆ ಕಿಡಿಗೇಡಿಗಳು ‘Name jihad’ ಎಂದು ಬರೆದಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್’ನ ಶಟರ್’ನಲ್ಲಿ ಈ ಪದವನ್ನು ಬರೆಯಲಾಗಿದೆ.
ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಅ.12 ರಂದು ಮುಂಜಾನೆ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ ವಿಟ್ಲ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.