ಶನಿವಾರದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಆ ವಾರ ಮನೆಯಲ್ಲಿ ನಡೆದ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾರೆ. ಆದರೆ ಬಹಳ ಅಪರೂಪದ ಎಂಬಂತೆ ಕಳೆದ ವಾರ ನಡೆದ ಒಂದು ಘಟನೆಯ ಬಗ್ಗೆ ಮಾತನಾಡಿ ಪ್ರೇಕ್ಷಕರಿಗೆ ಆ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ರಕ್ಷಿತಾ, “ಇದು ಧಾರಾವಾಹಿಯಲ್ಲ. ಇದು ಧಾರಾವಾಹಿ ಹೊರಗೆ ಮಾಡಿ” ಎಂದಾಗ ಅಶ್ವಿನಿ,”ನೀನು ಕಲಾವಿದರಿಗೆ ಅವಮಾನ ಮಾಡಬೇಡ” ಎಂದು ತಿರುಗೇಟು ನೀಡಿದ್ದರು. ಜಗಳ ಮತ್ತಷ್ಟು ಜೋರಾದಾಗ ರಕ್ಷಿತಾ,”ನನಗೆ ನಿಮ್ಮ ವೋಟ್ ಬೇಕಾಗಿಲ್ಲ. ಅರ್ಥ ಆಯ್ತಾ” ಎಂದು ಕಾಲನ್ನು ತಿರುಗಿಸುವ ಮೂಲಕ ಪ್ರತಿಕ್ರಿಯಿಸಿದ್ದರು.
“ರಕ್ಷಿತಾ ನನಗೆ ಮಾತ್ರ ಹೇಳಿಲ್ಲ, ಕಲಾವಿದರಿಗೆ ಅವಮಾನ ಮಾಡಿದ್ದಾಳೆ. 5 ಬಾರಿ ಚಪ್ಪಲಿ ತೋರಿಸಿದ್ದಾಳೆ” ಎಂದು ಅಶ್ವಿನಿ ಕಳೆದ ವಾರದ ಕಥೆಯಲ್ಲಿ ಸುದೀಪ್ ಜೊತೆ ಹೇಳಿದ್ದರು. ಅಷ್ಟೇ ಅಲ್ಲದೇ ಮುಖಕ್ಕೆ ಮಸಿ ಬಳಿಯುವಾಗಲೂ ಹೇಳಿದ್ದರು. ಅಷ್ಟೇ ಅಲ್ಲದೇ ಹಲವು ಕಡೆ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದರು. ಆದರೆ ಗಿಲ್ಲಿ ರಕ್ಷಿತಾ,”ಆ ರೀತಿ ಹೇಳಿಲ್ಲ. ರಕ್ಷಿತಾ ಹೇಳಿದ್ದು ಅಶ್ವಿನಿಯವರಿಗೆ. ಆದರೆ ಅಶ್ವಿನಿ ಅವರು ಕಲಾವಿದರಿಗೆ ಹೇಳಿದ್ದಾರೆ ಎಂದು ರಕ್ಷಿತಾ ಹೇಳಿಕೆಯನ್ನೇ ತಿರುಚಿದ್ದಾರೆ” ಎಂದು ಮನೆ ಮಂದಿಗೆ ತಿಳಿಸಿದ್ದರು.
ಈ ವಿಚಾರ ಮನೆಯ ಹೊರಗಡೆಯೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಕೆಲವರು ಅಶ್ವಿನಿ ಪರ ವಹಿಸಿ ಮಾತನಾಡುತ್ತಿದ್ದರೆ ಕೆಲವರು ರಕ್ಷಿತಾ ಪರ ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೇ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿಲ್ಲ. ಅಶ್ವಿನಿ ಅವರು ಆ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಅವರು ಈ ವಿಚಾರದ ಬಗ್ಗೆ ಈ ವಾರ ಮಾತನಾಡಲೇಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವಿಚಾರ ಚರ್ಚೆ ಆಗುತ್ತಿದ್ದಂತೆ ಸುದೀಪ್ ಅವರು ಶನಿವಾರದ ಕಾರ್ಯಕ್ರಮದಲ್ಲಿ ಇಬ್ಬರು ಮಾತನಾಡಿದ ವಾಕ್ಯಗಳು ಏನು ಎನ್ನುವುದಕ್ಕೆ ಪದಗಳ ಜೊತೆ ವಿಡಿಯೋವನ್ನು ಪ್ಲೇ ಮಾಡಿ ಮನೆ ಮಂದಿಗೆ ಮತ್ತು ಪ್ರೇಕ್ಷಕರಿಗೆ ಈ ಬಗ್ಗೆ ಕ್ಲಾರಿಟಿ ನೀಡಿದರು. ಸಾಧಾರಣವಾಗಿ ವಾರಂತ್ಯದ ಕಾರ್ಯಕ್ರಮದಲ್ಲಿ ವಿಡಿಯೋ ಮಾತ್ರ ಪ್ಲೇ ಮಾಡಲಾಗುತ್ತದೆ. ಆದರೆ ಈ ಬಾರಿ ಅಶ್ವಿನಿ ಮತ್ತು ರಕ್ಷಿತಾ ಮಾತನಾಡಿದ್ದು ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುವ ಉದ್ದೇಶದಿಂದ ಪದಗಳನ್ನು ಸಹ ಹಾಕಿ ಆ ವಿಚಾರ ಹೊರಗಡೆ ಎಷ್ಟು ಗಂಭೀರ ಪಡೆದಿದೆ ಎನ್ನುವುದನ್ನು ಸುದೀಪ್ ಮನೆ ಮಂದಿಗೆ ತಿಳಿಸಿದರು.
ರಕ್ಷಿತಾ ಹೇಳಿದ್ದು ನಿಮಗೆ, ಆದರೆ ಅದನ್ನು ಕಲಾವಿದರಿಗೆ ಹೇಳಿದ್ದು ಅಂತ ಯಾಕೆ ಪ್ರಶ್ನಿಸಿ ಅಶ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡರು. ಬಿಗ್ ಬಾಸ್ ಮನೆಯಲ್ಲಿ ಕಲಾವಿದರಿದ್ದಾರೆ ಅಷ್ಟೇ ಅಲ್ಲದೇ ನಾನು ಒಬ್ಬ ಕಲಾವಿದನೇ ಎಂದು ಖಡಕ್ ಆಗಿ ಹೇಳಿದರು. ಇದರ ಜೊತೆ ಅಶ್ವಿನಿ ಅವರು ಮನೆಯ ಹಿರಿಯ ವ್ಯಕ್ತಿ. ಅವರಿಗೆ ಕಾಲಿನ ಮೂಲಕ ಆ ರೀತಿ ಸಂಜ್ಞೆ ಮಾಡುವುದು ಸರಿಯೇ ಎಂದು ರಕ್ಷಿತಾಗೆ ಕೇಳಿದರು. ಇದಕ್ಕೆ ರಕ್ಷಿತಾ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು.
ಎಪಿಸೋಡ್ ಮುಗಿಸುವಾಗ ಧನುಷ್, ಗಿಲ್ಲಿ, ರಕ್ಷಿತಾ, ಅಶ್ವಿನಿ ಅವರನ್ನು ಎಲಿಮಿನೇಶನ್ ಪ್ರಕ್ರಿಯೆಯಿಂದ ಸೇವ್ ಮಾಡಿದ ಕಿಚ್ಚ ಸುದೀಪ್ ನಾಲ್ವರಿಗೆ ಮುಂದೆ ಬನ್ನಿ ಎಂದು ಹೇಳಿ ಕೈಯನ್ನು ಹಿಡಿದುಕೊಳ್ಳಿ ಎಂದು ಸೂಚಿಸಿದರು. ನಂತರ ಒಂದು ಕುಟುಂಬದ ಸದಸ್ಯರಂತೆ ಮನೆಯಲ್ಲಿರಿ ಎಂದು ಸಲಹೆ ನೀಡಿ ʼಕಲಾವಿದರರಿಗೆ ಅವಮಾನʼ ಎಪಿಸೋಡಿಗೆ ಪೂರ್ಣ ವಿರಾಮ ಹಾಕಿದರು ಎನ್ನಲಾಗಿದೆ.














