ಮನೆ ರಾಜ್ಯ ಯಾರ ಮೀಸಲಾತಿ ಕಡಿಮೆ ಮಾಡಿ, ಮುಸ್ಲಿಮರಿಗೆ ಕೊಡುತ್ತೀರಿ ?: ಡಿಕೆಶಿಗೆ ಅಮಿತ್ ಶಾ ಪ್ರಶ್ನೆ

ಯಾರ ಮೀಸಲಾತಿ ಕಡಿಮೆ ಮಾಡಿ, ಮುಸ್ಲಿಮರಿಗೆ ಕೊಡುತ್ತೀರಿ ?: ಡಿಕೆಶಿಗೆ ಅಮಿತ್ ಶಾ ಪ್ರಶ್ನೆ

0

ಚಾಮರಾಜನಗರ: ಮುಸ್ಲಿಮರಿಗೆ ಮೀಸಲಾತಿ ವಾಪಸ್​ ಕೊಡುವ ಬಗ್ಗೆ ನೀವು ಮಾತನಾಡಿದ್ದೀರಿ. ಹಾಗಿದ್ದರೆ ಯಾರ ಮೀಸಲಾತಿ ಕಡಿಮೆ ಮಾಡಿ ಅವರಿಗೆ ಕೊಡುತ್ತೀರಿ? ಕರ್ನಾಟಕದ ಜನರಿಗೆ ಉತ್ತರ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ  ಪ್ರಶ್ನಿಸಿದ್ದಾರೆ.

Join Our Whatsapp Group

ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರೋಡ್​ ಶೋ ನಡೆಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಡಿದ ಅವರು, ಕಾಂಗ್ರೆಸ್ ಪಕ್ಷ​ ಈಗಲೂ ತುಷ್ಟೀಕರಣದ ರಾಜನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ​ ಮುಸ್ಲಿಮರಿಗೆ ಶೇ 4ರ ಮೀಸಲಾತಿ ಕೊಟ್ಟಿತ್ತು. ಆದರೆ ಬಿಜೆಪಿ ಅದನ್ನೆಲ್ಲವನ್ನೂ ತೆಗೆದು ಹಾಕಿದೆ. ಅಧಿಕಾರಕ್ಕೆ ಬಂದೇ ಬರುತ್ತೇವೆ, ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಿಗಿರುವ ಮೀಸಲಾತಿಯನ್ನು ಕೊಡುತ್ತೇವೆ ಎಂಬುದಾಗಿ ಕಾಂಗ್ರೆಸ್​ ಅಧ್ಯಕ್ಷರು ಹೇಳಿದ್ದಾರೆ. ನೀವೇ ಹೇಳಿ ಮುಸ್ಲಿಮರಿಗೆ ಮೀಸಲಾತಿ ಕೊಡಬೇಕಾ? ಜೋರಾಗಿ ಹೇಳಿ. ಅವರಿಗೆ ಮೀಸಲಾತಿ ಕೊಡಬೇಕಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಡಿಕೆ ಶಿವಕುಮಾರ್​ ಅವರೇ, ಮುಸ್ಲಿಮರಿಗೆ ಮೀಸಲಾತಿ ವಾಪಸ್​ ಕೊಡುವ ಬಗ್ಗೆ ಮಾತನಾಡುತ್ತಿದ್ದೀರಿ. ಅದಕ್ಕಾಗಿ ಯಾರಿಗೆ ಮೀಸಲಾತಿ ಕಡಿಮೆ ಮಾಡುತ್ತೀರಿ? ಕರ್ನಾಟಕದ ಜನರಿಗೆ ಉತ್ತರ ಕೊಡಿ. ಒಕ್ಕಲಿಗರದ್ದು ಕಡಿಮೆ ಮಾಡುತ್ತೀರಾ? ಲಿಂಗಾಯತರದ್ದು ಕಡಿಮೆ ಮಾಡುತ್ತೀರಾ? ಎಸ್ಟಿ ಮೀಸಲಾತಿ ಕಡಿಮೆ ಮಾಡುತ್ತೀರಾ? ಈ ತುಷ್ಟೀಕರಣ ರಾಜನೀತಿಯನ್ನು ಮೊದಲು ಕಿತ್ತು ಹಾಕಿ. ಮೋದಿಯವರ ಅಭಿವೃದ್ಧಿ ರಾಜನೀತಿಯನ್ನು ತನ್ನಿ ಎಂದು ಅಮಿತ್ ಶಾ ಹೇಳಿದ್ದಾರೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಬಿಜೆಪಿ ಬಹುಮತ ಗಳಿಸಲಿದ್ದು, ಅಧಿಕಾರಕ್ಕೇರಲಿದೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.

ನಂತರ ಹಾಸನ ಜಿಲ್ಲೆಯ ಆಲೂರಿಗೆ ತೆರಳಿರುವ ಅಮಿತ್ ಶಾ ಅಲ್ಲಿ ರೋಡ್​ಶೋದಲ್ಲಿ ಭಾಗಿಯಾಗಿದ್ದಾರೆ. ಸಕಲೇಶಪುರ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ರೋಡ್​ಶೋ ನಡೆಸಿದ್ದಾರೆ.