ನವದೆಹಲಿ : ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ರುವಾರಿ ಡಾ.ಉಮರ್ ಕಾಶ್ಮೀರದ ಅನಂತನಾಗ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳಾ ರೋಗಿಗಳೊಂದಿಗೆ ಹಿಜಾಬ್ ಹಾಗೂ ನಮಾಜ್ ಬಗ್ಗೆ ಮಾತನಾಡುತ್ತಿದ್ದ, ಎಂದು ತಿಳಿದು ಬಂದಿದೆ.
ಮಹಿಳಾ ರೋಗಿಗಳೊಂದಿಗೆ ಮಾತನಾಡುತ್ತಾ ‘ನೀವು ಹಿಜಾಬ್ ಏಕೆ ಧರಿಸುತ್ತಿಲ್ಲ? ನಿಮ್ಮ ತಲೆಯನ್ನು ಏಕೆ ಸರಿಯಾಗಿ ಮುಚ್ಚಿಲ್ಲ? ನೀವು ಎಷ್ಟು ಬಾರಿ ನಮಾಜ್ ಮಾಡುತ್ತೀರಿ? ಎಂದು ಪ್ರಶ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.
ಕೆಲವು ರೋಗಿಗಳು ಉಮರ್‌ನ ಪ್ರಶ್ನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅನೇಕರು ರೋಗಿಗಳು ಜಿಎಂಸಿ ಅನಂತ್‌ನಾಗ್‌ಗೆ ದೂರು ಸಲ್ಲಿಸಿದ್ದರು. ನಂತರ ಆಡಳಿತ ಮಂಡಳಿಯು ಆತನನ್ನು ಕೆಲಸದಿಂದ ವಜಾಗೊಳಿಸಿತ್ತು. ಅಲ್ಲಿಂದ ಆತ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರನಾಗಿ ಸೇರಿಕೊಂಡಿದ್ದ.
ಉಮರ್ ಅತ್ಯಂತ ಮೂಲಭೂತವಾದಿ ವ್ಯಕ್ತಿಯಾಗಿದ್ದ. ಯಾವುದೇ ಬೆಲೆ ತೆತ್ತಾದರೂ ಇತರ ಧರ್ಮಗಳ ಮೇಲೆ ಇಸ್ಲಾಮಿಕ್ ಪ್ರಾಬಲ್ಯ ಹೇರಲು ಬಯಸಿದ್ದ. ತರಗತಿಯಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಬೇಕು ಎಂದು ವಾದಿಸುತ್ತಿದ್ದ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನ.10 ರಂದು ನಡೆದ ದಾಳಿಯ ನಂತರ, ನಬಿಯ ವೀಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ ಆತ ಭಯೋತ್ಪಾದನೆ ಬಗ್ಗೆ ಮಾತಾಡಿದ್ದ. ಆ ವಿಡಿಯೋವನ್ನು ಮೆಟಾ ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ. ತಮ್ಮ ನಿಯಮಗಳಿಗೆ ವಿರುದ್ಧವಾಗಿ ವೀಡಿಯೊ ಇದೆ ಎಂದು ಮೆಟಾ ಹೇಳಿದೆ.














