ಈ ಪ್ರಪಂಚದಲ್ಲಿ ಮಕ್ಕಳಿಗೆ ದೇವರು ನೀಡಿದ ವರವನ್ನು ಅರ್ಥ ಮಾಡಿಕೊಳ್ಳುವ ಒಬ್ಬ ವ್ಯಾಪಾರಿ ತನ್ನ ಮಗನಿಗೆ ವ್ಯಾಪಾರ ರಹಸ್ಯಗಳು, ಉಪಾಯಗಳು ಹಾಗೂ ಮೌಲ್ಯಗಳನ್ನು ಹೇಳಿ ಕೊಡುತ್ತಾ ಈ ರೀತಿಯಾಗಿ ಕೇಳಿದನಂತೆ. ‘”ಒಬ್ಬ ಕಸ್ಟಮರ್ ಬಂದು ನಿನ್ನ ಬಳಿ ಸಾವಿರ ರೂಪಾಯಿಗಳ ಸರಕನ್ನು ಖರೀದಿಸಿ, ನಿನಗೆ ಅಪ್ಪಿತಪ್ಪಿ ಎರಡು ಸಾವಿರ ಕೊಟ್ಟು ಹೋದನೆಂದಿಟ್ಟುಕೊ, ಆ ವಿಷಯವನ್ನು ನಿನ್ನ ಪಾರ್ಟನರ್ ಹೇಳುತ್ತೀಯಾ? ಇಲ್ಲವಾ?” ”ಹೇಳುತ್ತೇನೆ” ಎಂದ ಮಗ ವಿನಯವಾಗಿ.
”ತಪ್ಪು, ಆ ರೀತಿ ಹೇಳಬಾರದು. ಅದು ನಿನಗೆ ಸಿಕ್ಕ ಹಣ. ಒಂದು ವೇಳೆ ಕಸ್ಟಮರ್ ಉಡುಗೊರೆಯಾಗಿಯೋ, ಟಿಪ್ ಆಗಿಯೋ ಕೊಟ್ಟರೆ ಹೇಳಬೇಕು” ಎಂದು ಪಾಠ ಹೇಳಿದ. ಇಲ್ಲಿ ಮುಖ್ಯವಾದ ವಿಷಯವನ್ನು ಆ ತಂದೆ ಮುಚ್ಚಿಟ್ಟು ಕಸ್ಟಮರ್ ಗೊಂದಲದಲ್ಲಿ ಕೊಟ್ಟ ಸಾವಿರ ರೂಪಾಯಿಗಳನ್ನು, ಮತ್ತೆ ಅವರಿಗೇ ಕೊಟ್ಟುಬಿಡ ಬೇಕೆಂಬ ಅಮೂಲ್ಯವಾದ ವಿಷಯವನ್ನು ಮರೆಮಾಚಿ, ಅದನ್ನು ಹಂಚಿಕೊಳ್ಳುವ ವಿಷಯ ಕುರಿತಂತೆ ಚರ್ಚಿಸಿದ್ದು ನಾಚಿಕೆಗೇಡಿನ ವಿಷಯ.
ತಾಯಿ-ತಂದೆಯರಿದ್ದಾರೆ. ಹಾಗೆಯೇ ಮಕ್ಕಳಿಗೆ ಅರ್ಥವಾಗುವ ಹಾಗೆ ತಾಯಿ-ತಂದೆಯರು ಕೂಡಾ ಮಾತನಾಡುವುದನ್ನು ಕಲಿತುಕೊಳ್ಳಬೇಕು ಅದಕ್ಕೆ ಮೊದಲು ಮಕ್ಕಳನ್ನು ಅರ್ಥಮಾಡಿಕೊಳ್ಳಬೇಕು ಅಂದರೆ ಅವರ ಮಟ್ಟದಲ್ಲಿ ಆಲೋಚಿಸುವುದನ್ನು ಕಲಿತುಕೊಳ್ಳಬೇಕು” ಅದಕ್ಕೆ ತಕ್ಕ ಹಾಗೆ ಮಕ್ಕಳಿಗೆ ತರಬೇತಿ ನೀಡಬೇಕು ತರಬೇತಿಯಲ್ಲಿ ಶಿಕ್ಷೆ ಇರಬಾರದು, ತರಬೇತಿ ನೀಡುವ ಮುಂಚೆ ಪೇರೆಂಟ್ಸ್ ಕೂಡಾ ಅವುಗಳನ್ನು ಆಚರಿಸಿ ತೋರಿಸಬೇಕು “ತಾಯಿ ಆಮೆ ತಾನು ತಪ್ಪಾಗಿ ನಡೆಯುತ್ತಾ, ಮರಿ ಆಮೆಯನ್ನು ಸರಿಯಾಗಿ ನಡಿ ಎಂದರೆ ಹೇಗೆ?” ಎಂಬ ಚೀನಿಗಾದೆಯ ಹಾಗ ವರ್ತಿಸಬಾರದು. ಆದ್ದರಿಂದಲೇ ಮಕ್ಕಳಿಗೆ ಈ ವಿಷಯಗಳು ಅರ್ಥವಾಗುವ ಹಾಗೆ ಮಾಡಿ ತೋರಿಸಿ ಕಲಿಸಬೇಕು.
ದೇಹವೇ ಒಂದು ದೇವಾಲಯ :
ದೇಹವೇ ಒಂದು ದೇವಾಲಯವಿದ್ದ ಹಾಗೆ ಅದನ್ನು ಪ್ರತಿದಿನ ಶುಭ್ರವಾಗಿಟ್ಟುಕೊಳ್ಳಬೇಕು ಶುಭ್ರವೆಂದರೆ ಹಲ್ಲುಗಳ ಶುಭ್ರತೆ, ಶರೀರ ಶುಭ್ರತೆಯೊಂದೇ ಅಲ್ಲ ಮನಸ್ಸು ಕೂಡಾ ಶುಭ್ರಪಡಿಸಿಕೊಳ್ಳಬೇಕು ಮನಸ್ಸಿನ ನಿನ್ನೆಯ ಕೊಳೆಯನ್ನು ಎಂದರೆ ಫೈಲೂರನ್ನು ತೆಗೆದುಹಾಕಬೇಕು ನಾಳೆಗಾಗಿ ತಯಾರಾಗಿರಬೇಕು ಅದಕ್ಕೇ ಈ ದಿನವೇ ಒಳ್ಳೆಯ ದಿನ. ಈ ದಿನವೆಲ್ಲಾ ಒಳ್ಳೆಯ ಆಲೋಚನೆಗಳಿಂದ. ಒಳ್ಳೆಯ ಕೆಲಸಗಳೊಂದಿಗೆ ಕಾಲ ಕಳೆಯಬೇಕು. ತಾಯಿ-ತಂದೆಯರು ಮಕ್ಕಳಿಗೆ ಈ ವಿಷಯಗಳನ್ನು ಹೇಳಬೇಕು. ಅಹಿಂಸೆ, ಅನ್ಯಾಯ, ಅಧರ್ಮಗಳಿಂದ ಸಾಧಿಸುವಂತಾದ್ದು ಯಾವುದೂ ಇರುವುದಿಲ್ಲವೆಂದು ಇದ್ದರೂ ಅದು ತಾತ್ಕಾಲಿಕವೆಂದು ತಿಳಿಸಬೇಕು. ಕೆಟ್ಟ ಗುಣಗಳೊಂದಿಗೆ ದೇವಾಲಯವನ್ನು ಅಪವಿತ್ರಗೊಳಿಸ ಬಾರದೆಂದು ಹೇಳಬೇಕು
ಮಕ್ಕಳ ಮನಸನ್ನು ಓದಿರಿ..
ಪುಸ್ತಕಗಳನ್ನು ಓದುವುದನ್ನು ಕೇಳಿದ್ದೇನೆ ಆದರೆ, ಮಕ್ಕಳನ್ನು ಓದುವುದೆಂದರೇನು? ಎಂದೆನಿಸುತ್ತಿದೆಯಲ್ಲವೇ? ಇದು ಸರಿಯಾದ ಭಾಷಾ ಪ್ರಯೋಗವಲ್ಲವಾದರೂ, ಮಕ್ಕಳನ್ನು ತಿದ್ದಿ ರೂಪಿಸಲು ಉತ್ತಮ ಪ್ರಯೋಗ ಒಂದು ಪುಸ್ತಕವನ್ನು ಓದಿ ಚೆನ್ನಾಗಿ ಅರ್ಥ ಮಾಡಿಕೊಂಡರೆ, ಅದರಲ್ಲಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಕೊಡುವ ಹಾಗೆ ಮಕ್ಕಳನ್ನು ಚೆನ್ನಾಗಿ ಪರಿಶೀಲಿಸಿ, ಅಧ್ಯಯನ ಮಾಡಿದರೆ ಅವರೊಂದಿಗೆ ಹೇಗ ಮಾತನಾಡಬೇಕು ಯಾವ ರೀತಿ ಹೇಳಿದರೆ ಅರ್ಥವಾಗುತ್ತದೆ. ಹೇಗೆ ಹೇಳಿದರೆ ಕೇಳುವುದಿಲ್ಲ ಇವೆಲ್ಲ ಗೊತ್ತಾಗಿಬಿಡುತ್ತದೆ ಆದರೆ, ಎಷ್ಟು ‘ಮಂದಿ ಈ ಕೆಲಸ ಮಾಡುತ್ತಿದ್ದಾರೆ?
ಮಕ್ಕಳಿಗೆ ಯಾವುದಾದರೂ ಒಳ್ಳೆಯ ವಿಷಯ ಹೇಳಬೇಕೆಂದುಕೊಂಡಾಗ, ಅದನ್ನು ಳುವುದಕ್ಕೆ ಕೆಲವು ರೀತಿ ನೀತಿಗಳಿವೆ ಆ ಹುಡುಗನಿಗೆ ಆ ರೀತಿ ಹೇಳಬೇಕೆಂದರೆ ಮಕ್ಕಳ ಮನನಸ್ನನ್ನು ಒದಬೇಕು ಕೆಲವು ಮಕ್ಕಳಿಗೆ ಮಾಡಿ ತೋರಿಸಿ ಹೇಳಬೇಕು ಮತ್ತೆ ಕೆಲವರಿಗೆ ಕಥೆಗಳ ಮೂಲಕ ಹೇಳಬೇಕು ಕಥೆಗಳ ಮೂಲಕ ಹೇಳುವುದು ಒಳ್ಳೆಯ ಪದತಿ ಕೆಲವರಿಗೆ ಹಾಡು ಇದಗಳ ಮೂಲಕ ಹೇಳಬೇಕು ಕೆಲವರಿಗೆ ಸಣ್ಣಪುಟ್ಟ ಪ್ರದರ್ಶನದ ಮೂಲಕ ಹೇಳಬೇಕಾಗುತ್ತದೆ. ಯಾವುದನ್ನು ಹೇಗೆ ಹೇಳಿದರೂ ತಾಯಿ-ತಂದೆಯರಿಗೆ ನಾನೆಂದರೆ ತುಂಬಾ ಇಷ್ಟ ಎಂದು ಅವರಿಗೆ ನಂಬಿಕೆ ಬರುವಂತೆ ಮಾಡಬೇಕು.
ಜಪಾನಿನಲ್ಲಿ ತಂದೆ-ತಾಯಿಯರು ತಮ್ಮ ಮಗನೊಂದಿಗೆ ಯಾರದೋ ವಿವಾಹಕ್ಕೆ ಹೋದಾಗ, ಇವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಗಂಡ ಸ್ಥಳದಲ್ಲೇ ಅಸುನೀಗಿದ ತಾಯಿ, ಮಗ ಅಲ್ಪಸ್ವಲ್ಪ ಗಾಯಗಳಿಂದ ಪಾರಾದರು. ಆಕೆಯ ಮಗ ಶಾಲೆಯಲ್ಲಿ ಓದುತ್ತಿದ್ದ. ಆದರೆ, ಅವನು ಓದಿನಲ್ಲಿ ಡಲ್ ಆಗಿರುತ್ತಿದ್ದ ತಾಯಿಯೊಂದಿಗೆ ಸರಿಯಾಗಿ ಪ್ರವರ್ತಿಸುತ್ತಿರಲಿಲ್ಲ. ತಾಯಿ ಅವನನ್ನು ಸೈಕಿಯಾಟ್ರಿಸ್ಟ್‌ಗೆ ತೋರಿಸಿದಳು. ಅವರು ಬರೆದುಕೊಟ್ಟ ಔಷಧಿಗಳನ್ನು ಉಪಯೋಗಿಸುತ್ತಿದ್ದನಾದರೂ ಅವನಲ್ಲಿ ದೊಡ್ಡ ಬದಲಾವಣೆಯೇನೂ ಬರಲಿಲ್ಲ. ಒಮ್ಮೆ ಬೊಂಬೆಗಳ ಮಾರಾಟದ ಮಳಿಗೆಗೆ ಹೋದ ಅಲ್ಲಿನ ಬೊಂಬೆಗಳನ್ನು ನೋಡಿ ಖುಷಿಯಾದ ಮುಖ್ಯವಾಗಿ ಒಂದು ಮಿಕ್ಕಿಮೌಸ್ ಗೊಂಬೆ ಕಥೆ ಹೇಳುತ್ತಿರುವಾಗ ಮೈಮರೆತು ಕೇಳುವುದನ್ನು ನೋಡಿದ್ದ ತಾಯಿ, ಆ ಸೇಲ್ಸ್‌ಮೆನ್ ಬಳಿಗೆ ಹೋಗಿ ಒಂದು ಕಾಗದದ ಮೇಲೆ ಏನನ್ನೋ ಬರೆದುಕೊಟ್ಟಳು. ಆ ಸೇಲ್‌ಮೆನ್ ಅದೇ ರೀತಿಯಾಗಿ ಮಾಡಿದ ಅವರು ಮನೆಗೆ ಬಂದ ಮೇಲೆ ಆ ಹುಡುಗನ ಪ್ರವರ್ತನೆಯಲ್ಲಿ ಅದ್ಭುತವಾದ ಬದಲಾವಣೆ ದಿನೇ ದಿನೇ ಕಂಡುಬರತೊಡಗಿತು ಕೇವಲ ಒಂದೇ ತಿಂಗಳಲ್ಲಿ ಯಥಾಪ್ರಕಾರ ಪ್ರವರ್ತಿಸಲಾರಂಭಿಸಿದ ಇಷ್ಟಕ್ಕೂ ಆ ತಾಯಿ ಕಾಗದದ ಮೇಲೆ ಬರೆದಿದ್ದೇನು ಗೊತ್ತೇ?
‘ನನ್ನ ಗಂಡ ಅಪಘಾತದಲ್ಲಿ ಮರಣ ಹೊಂದಿದ್ದರಿಂದ ನಾನು ಆಘಾತಕ್ಕೊಳಗಾಗಿ ಮೂಗಿಯಾದೆ ಕೇಳಿಸಿಕೊಳ್ಳ ಬಲ್ಲೆ ಆದರೆ ನನ್ನ ಬಾಯಿಂದ ಮಾತು ಹೊರಡುವುದಿಲ್ಲ. ನನ್ನ ಮಗನಿಗೆ ಪ್ರತಿರಾತ್ರಿ ಕಥೆ ಹೇಳಿದರೆ ಮಾತ್ರ ನಿದ್ದೆ ಮಾಡುತ್ತಿದ್ದ. ನಾನು ಹೇಳಲಾರೆನಾದ್ದರಿಂದ, ಆ ಮಿಕ್ಕಿಮೌಸ್‌ನಲ್ಲಿ ಅಳವಡಿಸಿರುವ ಟೇಪ್ ರೆಕಾರ್ಡ್‌ನಲ್ಲಿ ಹೆಚ್ಚು ಕತೆಗಳನ್ನು ರಿಕಾರ್ಡ್ ಮಾಡಿಕೊಡಿ ನಾನು ಅವುಗಳನ್ನು ನನ್ನ ಮಗನಿಗೆ ದಿನಕ್ಕೊಂದರ ಹಾಗೆ ಕೇಳಿಸುತ್ತೇನೆ” ಎಂದು ಬರೆದಿದ್ದಳು.
ಪ್ರಮುಖ ಇಂಗ್ಲೀಷ್ ಕವಿ ಥಾಮಸ್ ಕಾರ್ಲಯಲ್ ಬರೆದ ಈ ಸಾಲುಗಳನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು
“You may have riches and wealth untold.
Caskets of jewels and baskets of gold,
But richer than 1 you will never be, for 1 had a mother who read to me”
Thomas Corlyle
”ಎಷ್ಟು ಬಂಗಾರವಿದ್ದರೇನು? ಎಷ್ಟು ಆಭರಣಗಳಿದ್ದರೇನು? ನಿನಗೆ ಓದಿ ಹೇಳುವ ತಾಯಿ ಇದ್ದಾಳೆ ಅದಕ್ಕಿಂತ ಮಿಗಿಲಾದ ಸಂಪತ್ತು ಏನಿದೆ?” ಎನ್ನುತ್ತಾನೆ. ಆದ್ದರಿಂದಲೇ ತಾಯಂದಿರು ಮಕ್ಕಳಿಗೆ ಓದಿ ಹೇಳಬೇಕು ಅವರನ್ನು ಸಮಗ್ರವಾಗಿ ಓದಬೇಕು
ಒಳ್ಳೆಯ ಶಾಲೆಯಲ್ಲಿ ಸೇರಿಸಬೇಕು:
*ಮಕ್ಕಳ ಓದಿನ ವಿಷಯದಲ್ಲಿ ಈಗಿನ ಕಾಲದ ತಾಯಿ ತಂದೆಯರು ಹೆಚ್ಚು ಶ್ರದೆ ವಹಿಸುತ್ತಿದ್ದಾರೆ ಎಷ್ಟೇ ಹಣವಾದರೂ ಖರ್ಚು ಮಾಡಲು ಹಿಂಜರಿಯುತ್ತಿಲ್ಲ. ಆದರೆ ಶಾಲಾ ಆಡಳಿತ ವರ್ಗಗಳು ತಾಯಿ-ತಂದೆಯರು ಆಶಿಸಿದ ಮಟ್ಟಕ್ಕೆ ಇವೆಯೇ/ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದು ಅನುಮಾನವೇ. ಕೆಲವು ಶಾಲಾ ಆಡಳಿತ ವರ್ಗಗಳು ಬಹಳ ಶ್ರದೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ, ಇನ್ನೂ ಕೆಲವರು ವ್ಯಾಪಾರ ಧೋರಣೆಯೊಂದಿಗೆ ಶಾಲೆಯನ್ನು ನಿರ್ವಹಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಶಾಲೆಯನ್ನು ಹೇಗೆ ಆಯ್ಕೆ ಮಾಡಬೇಕು?
★* ಪತ್ರಿಕೆಗಳಲ್ಲಿ ನೀಡುವ ಜಾಹಿರಾತುಗಳಿಂದಲೇ?
★ದೊಡ್ಡ ದೊಡ್ಡ ಕಟ್ಟಡಗಳಿವೆಯೆಂದು ಸೇರಿಸಬೇಕೆ?
★ಪ್ರತಿ ಊರಿನಲ್ಲೂ ಶಾಖೆಗಳಿವೆಯಾದ್ದರಿಂದ ಸೇರಿಸಬೇಕೆ?
★ನಮಗೆ ಪರಿಚಯಸ್ಥರು ಅಥವಾ ಜಾತಿ, ಕುಲಬಾಂಧವರ ಶಾಲೆ ಒಳ್ಳೆಯದೆ?
ಇವು ಯಾವುವೂ ಪ್ರಮಾಣ/ಮಾನದಂಡಗಳಲ್ಲ. ಇವುಗಳನ್ನು ನೋಡಿ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಫಲಿತಾಂಶ ಅಪಾಯಕಾರಿಯಾಗಿರಬಹುದು. ಇಂದಿನ ದಿನಗಳಲ್ಲಿ ಓದಿನಲ್ಲಿ ಕೇವಲ ರಾಂಕ್ಗಳು ಬಂದರೆ ಸಾಕಾಗುವುದಿಲ್ಲ. ಓದಿದ್ದನ್ನು ಮನವರಿಕೆ ಮಾಡಿಕೊಳ್ಳಬೇಕು. ಓದಿನ ಜೊತೆಗೆ ಸಮಾಜದ ಬಗ್ಗೆ, ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ರೀತಿಯಾಗಿ ಶಿಕ್ಷಣ ನೀಡುವ ಶಾಲೆಯನ್ನು ಒಂದು ಮರದ ಕೆಳಗೆ ನೆಡೆಸಿ ಪಾಠ ಹೇಳಿದರೂ ಪರವಾಗಿಲ್ಲ.
ಶಾಲೆ ಹೇಗಿರಬೇಕು?
ಶಾಲೆಯೆಂದರೆ ದೊಡ್ಡ ಕಟ್ಟಡ/ಭವನಗಳಲ್ಲ. ಓದು ಕಲಿಸುವ ವಿಧಾನಗಳು ಹೇಗಿವೆಯೆಂಬುದನ್ನು ಪ್ರತಿಯೊಬ್ಬ ತಾಯಿ-ತಂದೆ ತಿಳಿದುಕೊಳ್ಳಬೇಕು. ಅದಕ್ಕೆ ನಾನು DATES ಎಂಬ ಪದತಿಯನ್ನು ಸೂಚಿಸುತ್ತೇನೆ. ಡೇಟ್ಸ್ ಎಂದರೆ ಖರ್ಜೂರ ಹಣ್ಣುಗಳು ಎಂದರ್ಥ ಈ ಹಣ್ಣು ಮನುಷ್ಯನಿಗೆ ಬಹಳಷ್ಟು ಶಕ್ತಿಯನ್ನು ತಂದುಕೊಡುತ್ತದೆ. ಅಲ್ಲದೆ ಬಹಳಷ್ಟು ನಿಗ್ರಹವನ್ನು ಕಲಿಸುತ್ತದೆ ಶಾಲೆ ಕೂಡಾ ಹಾಗೆಯೇ ಇರಬೇಕು DATES ಎಂದರೆ….
D – Discipline (১)
A- Academic responsibility (4 )
T – Talent recognition (ಪ್ರತಿಭೆಯನ್ನು ಗುರುತಿಸುವುದು)
E Effective Coaching (ಪರಿಣಾಮಕಾರಿ ಬೋಧನೆ)
S – Stress reduction (ಒತ್ತಡ ಕಡಿಮೆ ಮಾಡಬೇಕು)