ಮನೆ ಮಕ್ಕಳ ಶಿಕ್ಷಣ ಓದಿನಲ್ಲಿ ಚಾಂಪಿಯನ್ ಮಾಡುವುದೇಗೆ ?

ಓದಿನಲ್ಲಿ ಚಾಂಪಿಯನ್ ಮಾಡುವುದೇಗೆ ?

0

 ಶಿಸ್ತು :

Join Our Whatsapp Group

    ಈ ಕಾಲದ ಮಕ್ಕಳಿಗೆ ಓದಿನ ಜೊತೆ ಜೊತೆಗೇ ಉತ್ತಮವಾದ ಶಿಸ್ತು ಕಲಿಸಬೇಕು. ಅಂದರೆ ಮೊದಲಿಗೆ ಆ ಶಿಸ್ತು ಟೀಚರ್ ಗಳಿಗೆ ಮತ್ತು ಮ್ಯಾನೇಜ್ ಮೆಂಟ್ ಗೆ ಕೂಡಾ ಇರಬೇಕು ವೇಷ, ಭಾಷೆಗಳು, ಪದತಿಗಳು, ಪ್ರಚಾರಗಳು ಸಂದರ್ಭೋಚಿತವಾಗಿರಬೇಕು. ಮಕ್ಕಳಿಗೆ ಎಷ್ಟು ಅಂಕಗಳು ಹೆಚ್ಚಾಗಿ ಬರುತ್ತವೆಯೆಂಬುದಕ್ಕಿಂತ, ಎಷ್ಟರಮಟ್ಟಿಗೆ ಶಿಸ್ತಿನಿಂದ ಪ್ರವರ್ತಿಸುತ್ತಿದ್ದಾರೆಂಬ ಬಗ್ಗೆ ಶ್ರದೆ ತೋರಬೇಕು ಇತ್ತೀಚೆಗೆ ಒಂದು ಶಾಲಾ ಆಡಳಿತವರ್ಗ ತಮ್ಮ ಸ್ಪೂಡೆಂಟ್ಸ್ಗೆ ಅತ್ಯಧಿಕ ಅಂಕಗಳು ಬರಬೇಕೆಂಬ ದುರ್ಬುದಿಯಿಂದ ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಪ್ರಶ್ನೆಪತಿ .ಕೆ ನೀಡಿದರೆಂಬ ವಿಷಯ ಸುದಿ ಪತ್ರಿಕೆಯಲ್ಲಿ ಓದಿದೆ ಮತ್ತೊಂದು ಶಾಲೆಯ ಆಡಳಿತವರ್ಗ ಬೇರೆ ಶಾಲೆಯ ಆಡಳಿತ ವರ್ಗದೊಂದಿಗೆ ಶಾಮೀಲಾಗಿ ಅವರ ಮಕ್ಕಳಿಗೆ ಇವರು, ಇವರ ಮಕ್ಕಳಿಗೆ ಅವರು, ಪಬ್ಲಿಕ್ ಪರೀಕ್ಷೆಗಳಲ್ಲಿ ಕಾಪಿಗಳನ್ನು ನೀಡಿದರು.

    ಅಂತಹ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಿದ ಮಕ್ಕಳು ಜೀವನದಲ್ಲಿ ತಾವು ಮಾಡಲಿರುವ ಉದ್ಯೋಗಗಳಲ್ಲಿ ಪ್ರತಿಭೆಗಳನ್ನು ತೋರಲಾಗದಿರಬಹುದು. ಇತ್ತೀಚೆಗೆ ಬಿಟ್ಸ್ಪಿಲಾನಿ ಸಂಸ್ಥೆ ಇಂತಹ ಅನುಮಾನವೇ ಬಂದು ತಮ್ಮ ಎಂಟ್ರೆನ್ಸ್ ಟೆಸ್ಟನ್ನು ತಾವೇ ಇಡಲು ಪ್ರಾರಂಭಿಸಿದರು. ಅದಕ್ಕೆ ಮುಂಚೆ ಇಂಟರ್‌ನಲ್ಲಿ ಹೆಚ್ಚು ಅಂಕಗಳು ಬಂದವರಿಗೇ ಸೀಟು ಕೊಡುತ್ತಿದ್ದರು. ಆ ಮಾತಿಗೆ ಬಂದರೆ ನಮ್ಮ ಸಿಇಟಿ ಕೂಡಾ ಅಷ್ಟೇ ಅಲ್ಲವೆ?

 ಓದಿನ ಜವಾಬ್ದಾರಿ :

      ಮಕ್ಕಳು ಸೇರಲಿರುವ ಶಾಲೆಯಲ್ಲಿ ಆಡಳಿತವರ್ಗ ಯಾವ ರೀತಿ ಜವಾಬ್ದಾರಿ ತೆಗೆದುಕೊಳ್ಳುತ್ತದೋ ತಿಳಿದುಕೊಳ್ಳಬೇಕು. ಅಂದರೆ ಮಕ್ಕಳನ್ನು ಓದಿಸಿ ಅರ್ಥವಾಗದಿದ್ದರೆ ವಿದ್ಯಾರ್ಥಿಗಳು ಮಂಕಾಗಿದ್ದರೆ, ಪ್ರತ್ಯೇಕ ಶ್ರದೆ ವಹಿಸಿ ಹೇಳುವ ಟೀಚರ್‌ಗಳಿರಬೇಕು ಆ ಟೀಚ‌ರ್ ಗಳಿಗೆ ಸಹನೆ, ತಾಳ್ಮೆಯಿರಬೇಕು ಮಕ್ಕಳಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ಒಂದೇ ರೀತಿಯ ಬೋಧನೆಗಳಿರಬಾರದು ಸಂಜೆ ಮನೆಗೆ ಬಂದ ನಂತರ ಹೋಮ್‌ ವರ್ಕ್ನಂತಸ ಕೆಲಸಗಳನ್ನು ಕೊಡಬಾರದು. ಮನೆಗೆ ಹೋದ ನಂತರ ಕಲಿತುಕೊಳ್ಳಬೇಕಾದ ಇತರ ಮೌಲಗಳ ಕುರಿತಂತೆ ತಾಯಿ-ತಂದೆಯರು ಕಲಿಸಬೇಕು. ಶಾಲೆಗಳಲ್ಲಿ ಮಾತ್ರ ಪಾಠವನ್ನು ಹೊಸ ಪದತಿಗಳಲ್ಲಿ ಹೇಳಿಕೊಡಬೇಕು. ಅಗತ್ಯವೆನಿಸಿದಾಗ ಕಥೆಗಳನ್ನು ಹೊಂದಿಸಿಕೊಳ್ಳಬೇಕು. ಪ್ರತಿ :ವಿದ್ಯಾರ್ಥಿಯ ಬಗ್ಗೆ ವಿಶೇಷ ಶ್ರದೆವಹಿಸಿ ಆ ಶಾಲೆಯಲ್ಲಿ ಓದುವ ಪ್ರತಿ ವಿದ್ಯಾರ್ಥಿಯ ಜವಾಬ್ದಾ ಯನ್ನು ತೆಗೆದುಕೊಳ್ಳುವ ಆಡಳಿತವರ್ಗ/ಮಾಲಿಕತ್ವವಿರಬೇಕು.

 ಪ್ರತಿಭೆಯನ್ನು ಗುರುತಿಸಬೇಕು :

       ಕೆಲವು ಮಕ್ಕಳಲ್ಲಿ ಮೇಧಾವಿಗಳಿರುತ್ತಾರೆ. ಮತ್ತೆ ಕೆಲವರಲ್ಲಿ ಅಂಜುಬುರುಕರಿರುತ್ತಾರೆ ಅಂತಹವರನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು. ಟೀಚರ್‌ಗಳು ಸ್ವಲ್ಪ ಶ ದೆವಹಿಸಿ ವಿದ್ಯಾರ್ಥಿಯೊಳಗಿನ ಸಾಮರ್ಥ್ಯ, ಬಲ, ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ಬಲಗಳಾಗಿ ಬದಲಾಯಿಸುವ ಪ್ರಯತ್ನ ಮಾಡಬೇಕು ಪ್ರತಿಭೆಯನ್ನು ಗುರುತಿಸಲು ಟೀಚರ್ಗಳು ಸೇರಿದಂತೆ ಪೇರೆಂಟ್ಸ್ ಕೂಡಾ ಕಾರ್ಯ ಮಾಡಬೇಕು ಶಾಲಾ ಸಮಯವಾದ ನಂತರ ಮನೆಗೆ ಬಂದ ಮೇಲೆ, ಪ್ರೇರಣೆ ಉಂಟಾಗುವ ಹಾಗೆ ಮಾತನಾಡಬೇಕು ಮನೆಗೆ ಬಂದ ನಂತರ ಮಾಡುವ ಹೋಮ್ ವರ್ಕ್ ನೀಡುವ ಶಾಲೆಗಿಂತ ಇಡೀ ಓದೆಲ್ಲಾ ಅಲ್ಲೇ ಮುಗಿಯುವ ಶಾಲೆಗೆ ಪ್ರಾತಿನಿಧ್ಯ ಕೊಡಿ ಅಮೆರಿಕ, ಮತ್ತಿತರ ರಾಷ್ಟ್ರಗಳಲ್ಲಿ ಇಂದಿಗೂ ವರ್ಷದಲ್ಲಿ 180 ದಿನಗಳು ಮಾತ್ರ ಶಾಲೆಗಳಿರುತ್ತವೆ. ನಮಗೆ ಬೇಸಿಗೆ ರಜೆಗಳನ್ನು ಹೊರತುಪಡಿಸಿದರೆ. ಉಳಿದೆಲ್ಲಾ ದಿನಗಳೂ ಓದುವುದೇ ಇನ್ನು ಪ್ರತಿಭೆಗೆ ಸಾಣೆ ಹಿಡಿಯಲು ಎಲ್ಲಿಂದ ಸಾಧ್ಯವಾಗುತ್ತದೆ?

 ಸೂಕ್ತವಾದ ಬೋಧನೆ :

        ಈ ಮುಂಚೆ ಮಕ್ಕಳಲ್ಲಿ ಓದಿಗಾಗಿ ಸ್ಪರ್ಧೆ ಇರುತ್ತಿತ್ತು. ಇದೀಗ ಅದು ಟೀಚರ್‌ಗಳನ್ನು ಆವರಿಸಿದೆ. ಇದು ಬಹಳ ಒಳ್ಳೆಯ ಬದಲಾವಣೆ ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ಜೈಲ್ಡ್ ಸೈಕಾಲಜಿ, ಬಿ.ಎಡ್. ಓದಿದ ಟೀಚಗರ್‌ಗಳು ಕಡಿಮೆ ಸಂಖ್ಯೆಯಲ್ಲಿರುತ್ತಾರೆ ಆದ್ದರಿಂದ ಅವರು ತಮ್ಮ ನೈಪುಣ್ಯತೆ ಚೆನ್ನಾಗಿ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಸಾಧ್ಯವಾದರೆ ಇಂಟರ್‌ನೆಟ್‌ ನಲ್ಲಿ ಒಂದೊಂದು ಪಾಠಕ್ಕೆ ಸಂಬಂಧಿಸಿದ ಲೆಕ್ಟರ್ ಗಳನ್ನು ನೋಡಬೇಕು ಉದಾಹರಣೆಗೆ ನ್ಯೂಟನ್ ಸಿದಾಂತ ಕುರಿತಂತೆ ಇಂಟ‌ರ್ನೆಟ್ನಲ್ಲಿ ನಾಲೈದು ಮಂದಿ ಹೇಳಿದ ಪಾಠಗಳನ್ನು ನೋಡಿ, ಕೇಳಿ ಟೀಚರ್ ತಮ್ಮ ಬೋಧನೆಯ ಪದತಿಯನ್ನು ಬದಲಾಯಿಸಿಕೊಂಡರೆ, ಮಕ್ಕಳು ಸದರಿ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಹೋಗುವ ಯೋಚನೆಯನ್ನೇ ಮಾಡಲಾರರು *.

 ಒತ್ತಡ ಕಡಿಮೆ ಮಾಡಬೇಕು :

      ಸದಾ ಓದಿಕೊಳ್ಳಿ ಟೈಂ ವೇಸ್ಟ್ ಮಾಡದೆ ಒದಿಕೊಳ್ಳುತ್ತಿರಿ ಎಂದು ಒತ್ತಡ ವನ್ನುಂಟು ಮಾಡಿದ ಶಾಲೆಗಳಿಂದ ಎಷ್ಟು ದೂರವಿದ್ದರೆ ಅಷ್ಟು ಒಳ್ಳೆಯದು ಓದದೆ ಇದ್ದರೆ ಶಿಕ್ಷಿಸುವುದು. ಇತರ ಸ್ಪೂಡೆಂಟ್ಸ್ ಮುಂದೆ ಅವಮಾನಿಸುವುದು ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಲೇಬೇಕೆಂದು ತಾಕೀತು ಮಾಡುವುದು, ಪಬ್ಲಿಕ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದರೆ ಶಾಲೆ ಬಿಡಬೇಕಾಗುತ್ತದೆಂದು ಭಯದಿಂದ ರಾತ್ರಿ ಹಗಲು ಓದುವುದು/ಓದಿಸುವುದು ಇಂತಹ ಶಾಲೆಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ ರ್ಯಾಂಕ್  ಗಳಿಂದಾಗಿ ಶಾಲೆಗೆ ಹೆಸರು ಬರಬಹುದಾದರೂ, ವಿದ್ಯಾರ್ಥಿಯ ದೇಹಾರೋಗ್ಯದ ಮನಸ್ಸಿನ ಪರಿಸ್ಥಿತಿ ಹೇಗೆ? ಹೋಗಲಿ ಈ ರ್ಯಾಂಕುಗಳ ಆಧಾರವಾಗಿಯೇ ನಾಳೆ ಉದ್ಯೋಗಗಳು ಸಿಗುತ್ತವೆಯೇ ಎಂದರೆ ಈ ದಿನಗಳಲ್ಲಿ ಅದೂ ಗಗನ ಕುಸುಮವೇ ಓದಿನ ಜೊತೆ ಜೊತೆಗೆ ಇತರ ವಿಷಯಗಳಲ್ಲೂ ಟ್ಯಾಲೆಂಟ್ ಬೆಳೆಸಿಕೊಳ್ಳಬೇಕು ಜನರಲ್ ನಾಲೆಡ್ಜ್ ಬಹಳ ಮುಖ ಆದರಿಂದ ‘ಡೇಟ್ಸ್’ನ್ನು ಮರೆಯಬೇಡಿ

 ಸೋದರ ಮಾವನ ಹೋಲಿಕೆ :

     ”ನಮ್ಮ ಮಗನಿಗೆ ಎಲ್ಲವೂ ಅವನ ಸೋದರಮಾವನ ಹೋಲಿಕೆಗಳೇ ಬಂದಿವೆ. ಪ್ರತಿದಿನ ಶಾಲೆಗೆ ಕೊಂಡೊಯ್ಯುವ ಬ್ಯಾಗನ್ನು ಸುಮಾರು ಒಂದು ಗಂಟೆಯ ತನಕ ಹುಡುಕಾಡುತ್ತಿರುತ್ತಾನೆ. ಆತನು ಕೂಡಾ ಇದೇ ರೀತಿ ಮಾಡುತ್ತಿದ್ದ. ಇದಕ್ಕೇನಾದರೂ ಪರಿಹಾರ ಇದೆಯೇ ?’ ಎಂದು ತಂದೆಯಾದವರು ಕೇಳಿದರು

     ಸಹಜವಾಗಿ ಎಲ್ಲಾ ಮಕ್ಕಳ ಕೋಣೆಗಳೂ ಹೀಗೆಯೇ ಇರುತ್ತವೆ. ಅವರೆಲ್ಲರಿಗೂ ಇಂತಹ ಸೋದರಮಾವಂದಿರು ಇರುವುದಿಲ್ಲ. ಆದ್ದರಿಂದ ಅಂತಹ ಮಾತನ್ನು ಮತ್ತೆ ಮತ್ತೆ ಆತನ ಮುಂದೆ ಹೇಳಬೇಡಿ. ಮಕ್ಕಳ ಸ್ಟಡಿರೂಂನಲ್ಲಿ ಎಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿಡಲು ತಾಯಿ ಸಹಾಯ ಮಾಡಬಹುದು ಮೊದಲಿಗೆ ನಿಮ್ಮ ಮಗನ ಎತ್ತರಕ್ಕೆ ಸರಿಹೊಂದುವ ಟೇಬಲ್‌ನ್ನು ಹೊಂದಿಸಿಕೊಡಿ. ಅದರ ಮೇಲೆ ಎರಡು ಬುಕ್ ಶೆಲ್ಛ್ ಗಳನ್ನು ಇಡಿ ಎರಡು ಟ್ರೇಗಳನ್ನು ಇಡಿ. ಒಂದು ಟ್ರೇನಲ್ಲಿ ಕಾಗದಗಳು, ಪತ್ರಗಳು, ಬೊಂಬೆಗಳು ವಗೈರೆ ಎರಡನೇ ಟ್ರೇನಲ್ಲಿ ಪೆನ್ಸಿಲ್ ಗಳು, ಪೆನ್ನುಗಳು, ಕ್ಯಾಲಿಕ್ಯುಲೇಟರ್ ಮುಂತಾದವುಗಳು ಇರಲಿ.

      ಆ ಕೋಣೆಯಲ್ಲಿ ಒಂದು ಲೈಟ್. ಸಾಧ್ಯವಾದರೆ ಟೇಬಲ್ ಮೇಲೆ ಒಂದು ಟೇಬಲ್‌ಲೈಟ್ ಇಡಿ ಕೋಣೆಯಲ್ಲಿ ಒಂದು ಮೂಲೆಯಲ್ಲಿ ಒಂದು ಡಬ್ಬ. ಅದರಲ್ಲಿ ಗಮ್, ರಬ್ಬರ್, ಇಂಕು, ಕತ್ತರಿಗಳಂತಹವನ್ನು ಇಡಿ ಒಂದು ಕಸದ ಬುಟ್ಟಿಯನ್ನು ಟೇಬಲ್ ಕೆಳಗಿಡಿ ಕೆಲಸಕ್ಕೆ ಬಾರದ ಪೇಪ‌ರ್ ಗಳನ್ನು ಹರಿದು ಅದರಲ್ಲಿ ಹಾಕು ಎಂದು ಹೇಳಿ ಈ ಎಲ್ಲವನ್ನೂ ನೀವು ಒಂದು ವಾರದ ಕಾಲ ಮಾಡಿ

       ಆನಂತರ ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಿ ಆ ರೀತಿಯಾಗಿ ಮಾಡುವುದ ರಿಂದ ಕೆಲವೇ ದಿನಗಳಲ್ಲಿ ಅದು ಅಭ್ಯಾಸವಾಗುತ್ತದೆ. ಅಷ್ಟೇ ಹೊರತು ಆತನಿಗೇ ಆತನೇ ಅದೇಗೆ ಅಭ್ಯಾಸ ಮಾಡಿಕೊಳ್ಳುತ್ತಾನೆ? ಯಾವುದೇ ಕೆಲಸಕ್ಕಾದರೂ ತರಬೇತಿಯ ಅಗತ್ಯವಿದೆಯೆಂಬುದನ್ನು ಗುರುತಿಸಬೇಕು ಇನ್ನು ಮುಂದ ಸೋದರಮಾವನ ಹೋಲಿಕೆ ಎಂಬ ಮಾತನ್ನು ಆಡಬೇಡಿ ಸೋದರಮಾವ ಸೋಮಾರಿಯಾಗಿರಬಹುದು. ಆದರೆ ನಿಮ್ಮ ಮಗ ಅಲ್ಲ. ಆತನಿಗೆ ಬಂದಿರುವುದೆಲ್ಲಾ ಅಕ್ಷರಶಃ ನಿಮ್ಮ ಹೋಲಿಕೆಗಳೇ ಎಂದು ಹೇಳಿ ಕಳುಹಿಸಿದೆ.