ಮನೆ ರಾಜ್ಯ ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೌರುಷ ತೋರಿಸಲಿ – ಅಶ್ವಥ್ ನಾರಾಯಣ

0

ಮಂಡ್ಯ : ಪೊಲೀಸರು ಹಿಂದೂಗಳ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ ಎಂದು ಶಾಸಕ ಡಾ.ಸಿ.ಎನ್ ಅಶ್ವಥ್ ನಾರಾಯಣ ಆಗ್ರಹಿಸಿದರು.

ಮದ್ದೂರು ಕಲ್ಲು ತೂರಾಟ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಪ್ರತಿಭಟಿಸಿದ ಹಿಂದೂಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ. ಅದರ ಬದಲು ಕಲ್ಲೆಸೆದವರ ಮೇಲೆ ಪೊಲೀಸರು ತಮ್ಮ ಪೌರುಷ ತೋರಿಸಲಿ. ಪೊಲೀಸ್ ಇಲಾಖೆ ಸರ್ಕಾರದ ಓಲೈಕೆಗಷ್ಟೇ ಸೀಮಿತವಾಗಿದೆ. ಪೋಸ್ಟಿಂಗ್ ಸಲುವಾಗಿ ಪೊಲೀಸ್ ಇಲಾಖೆ ಓಲೈಕೆಗಿಳಿದಿದೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳ್ಕೊಂಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸತ್ತು ಹೋಗಿದೆ, ಅಮಾಯಕರು ಬಲಿಯಾಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅನ್ಯಧರ್ಮದ ವ್ಯಕ್ತಿಗಳು ಮತ್ತು ಸಮುದಾಯದವರು ಗಣೇಶೋತ್ಸವದ ಮೆರವಣಿಗೆ, ಹಿಂದೂ ಸಂಸ್ಕೃತಿ ಅರ್ಥ ಮಾಡಿಕೊಳ್ಳಬೇಕು. ಇತರ ಧರ್ಮದ ಆಚರಣೆಗೆ ಗೌರವ ಕೊಡಬೇಕು, ಒಪ್ಕೋಬೇಕು. ನಾವು ಇರಾನ್, ಪಾಕಿಸ್ತಾನ, ಸೌದಿಯಲ್ಲಿಲ್ಲ. ಭಾರತದಲ್ಲಿದ್ದೇವೆ. ಭಾರತದ ಸಂಸ್ಕೃತಿ, ಆಚರಣೆಗೆ ಅವಕಾಶವೇ ಇಲ್ಲದಂತಾಗಿದೆ. ಇದು ಪದೇ ಪದೇ ಅತಿರೇಕಕ್ಕೆ ಹೋಗ್ತಿದೆ. ಮೊನ್ನೆ ಇದೇ ಸ್ಥಳದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆದಿತ್ತು. ಆಗ ಹಿಂದೂಗಳು ಕಲ್ಲೆಸೆದಿದ್ರಾ ಎಂದು ಆಕ್ರೋಶ ಹೊರಹಾಕಿದರು.