ಮನೆ ರಾಜಕೀಯ ಪಿಎಫ್’ಐ ನಿಷೇಧ ಕುರಿತು ಸಿದ್ದರಾಮಯ್ಯ, ಡಿಕೆಶಿ ಬಾಯಿ ತೆರೆದಿಲ್ಲ ಏಕೆ? : ಬಿಜೆಪಿ ಪ್ರಶ್ನೆ

ಪಿಎಫ್’ಐ ನಿಷೇಧ ಕುರಿತು ಸಿದ್ದರಾಮಯ್ಯ, ಡಿಕೆಶಿ ಬಾಯಿ ತೆರೆದಿಲ್ಲ ಏಕೆ? : ಬಿಜೆಪಿ ಪ್ರಶ್ನೆ

0

ಮೈಸೂರು(Mysuru): ಪಿಎಫ್‌ಐ ನಿಷೇಧದ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಏಕೆ ಇನ್ನೂ ಬಾಯಿ ತೆರೆದಿಲ್ಲ?, ಮತ ಬ್ಯಾಂಕ್‌ ಕಳೆದುಕೊಳ್ಳುವ ಭಯವೇ ? ಎಂದು ಬಿಜೆಪಿ  ವಾಗ್ದಾಳಿ ನಡೆಸಿದೆ.

ಪಿಎಫ್‌ಐ ನಿಷೇಧ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್‌ ಮಾಡಿರುವ ಬಿಜೆಪಿ, ಪಿಎಫ್‌ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲಾ ದೇಶ ವಿರೋಧಿ ಚಟುವಟಿಕೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಕ್ಷ (ಕಾಂಗ್ರೆಸ್) ಬೆಂಗಾವಲಾಗಿ ನಿಂತಿತ್ತು ಎಂದು ಆರೋಪಿಸಿದೆ.

ಮಾನ್ಯ ಸಿದ್ದರಾಮಯ್ಯ ಅವರೇ, ನಾವು ನುಡಿದಂತೆ ನಡೆದಿದ್ದೇವೆ. ನೀವು ‘ಉಗ್ರಭಾಗ್ಯ’ ಯೋಜನೆಯಡಿ ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ ಎಂದು ಬಿಜೆಪಿ ಗುಡುಗಿದೆ.

ದೇಶದ ಆಂತರಿಕ ಭದ್ರತೆಗೆ ಸವಾಲೆಸೆದಿದ್ದ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಂದಿನ 5 ವರ್ಷಗಳ ಅವಧಿಗೆ ನಿಷೇಧ ಮಾಡಿದೆ. ಮೋದಿ ಸರ್ಕಾರದ ಈ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಮತಾಂಧ ಶಕ್ತಿಗಳ ವಿರುದ್ಧ ಸಮರ ಮುಂದುವರೆಯಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.