ಶ್ರೀರಂಗಪಟ್ಟಣ: ಪಟ್ಟಣ ಪುರಸಭೆ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಧಿಢೀರ್ ಲೋಕಾಯುಕ್ತರು ಭೇಟಿ ನೀಡಿ ಕಡತಗಳ ಪರಿಶೀಲನೆ ನೆಡಸಿದರು.
ಸರ್ಕಾರಿ ನಿವೇಶನಗಳನ್ನು ಅಕ್ರಮ ದಾಖಲೆಗಳ ಸೃಷ್ಠಿಸಿ ಬೇರೆಯವರಿಗೆ ಪರಭಾರೆ ಹೆಸರಿಗೆ ಅಕ್ರಮ ಖಾತೆ ಗಳನ್ನು ಮಾಡಿರುವ ಆರೋಪಗಳ ಕುರಿತು ಅನೇಕರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಸುಮಾರು 15 ಕ್ಕೂ ಹೆಚ್ಚು ಸಿಬ್ಬಂಧಿಗಳು ಆಗಮಿಸಿ ಕಚೇರಿಯ ದಾಖಲೆಗಳ ಪರಿಶೀಲನೆ ನಡೆಸಿದರು. ಕಡತಗಳೊಂದಿಗೆ ಕಂಪೂಟರಿಕರಣವಾಗಿದ್ದ ದಾಖಲೆಗಳ ಪರಿಶೀಲನೆ ಹಾಗೂ ಅಧಿಕಾರಿಗಳನ್ನು ತನಿಖೆಗಳ ಮೂಲಕ ಪ್ರಶ್ನಿಸಿದರು.
ಇದೇ ವೇಳೆ ಕಚೇರಿ ಬಳಿ ನಿಂತಿದ್ದ ಸ್ಥಳೀಯ ಸಾರ್ವಜನಿಕರು ಜನರು ಪುರಸಭೆ ಕಚೇರಿ ಆವರಣದಲ್ಲಿ ಕೆಲವು ದೂರುಗಳ ನೀಡಿ ಅಧಿಕಾರಿಗಳ ವಿಳಂಬ ಕುರಿತು ಲೋಕಾಯುಕ್ತರ ಎದುರು ಅಳಲು ತೋಡಿಕೊಂಡರು.
ಸಾರ್ವಜನಿಕರು ದೂರು ಕೊಟ್ಟು ಹಲವು ದಿನಗಳು ಕಳೆದರೂ ಅವರ ಕೆಲಸಗಳ ವಿಳಂಬ ಲಂಚದ ಹಣಕ್ಕಾಗಿ ಬೇಡಿಕೆ ಈಗೆ ಫಲಾನುಭವಿಗಳ ಕೆಲಸಗಳನ್ನು ಮಾಡಿಕೊಡದೆ ಕಚೇರಿಯಿಂದ ಅಲೆದಾಡಿಸುತ್ತಿರುವುದರ ಬಗ್ಗೆ ದೂರುಗಳಲ್ಲಿ ದಾಖಲಾಗಿದೆ ಇದರ ಜೊತೆ ಅರ್ಜಿಗಳ ಬೇಗನೆ ವಿಲೆವಾರಿಯಾಗದೆ ವಿಳಂಬ ಮಾಡುವುದು ಏಕೆ ಎಂದು ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳಿಗೆ ಪ್ರಶ್ನಿಸಿ ತರಾಟೆ ತೆಗೆದುಕೊಂಡರು.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಅಲ್ಲಿನ ಸಿಬ್ಬಂಧಿಗಳ ವಿರುದ್ಧ ದೂರಿನ ಸುರಿಮಳೆಗೈದರು. ಯಾವೊಬ್ಬರು ಸಹ ಸರಿಯಾದ ಮಾಹಿತಿ ನೀಡುವುದಿಲ್ಲ. ಅಗತ್ಯ ದಾಖಲೆಗಳನ್ನ ಒದಗಿಸಿದರೂ ಸಹ ಯಾವುದೇ ಕೆಲಸಗಳನ್ನು ಸುಲಲಿತವಾಗಿ ಮಾಡಿಕೊಡುತ್ತಿಲ್ಲ. ಬದಲಿಗೆ ಕಚೇರಿಗೆ ಮೇಲಿಂದ ಮೇಲೆ ಅಲೆಸುತ್ತಾರೆ ಎಂದು ದೂರಿದರು. ಈ ವೇಳೆ ಲೋಕಾಯಕ್ತ ಅಧಿಕಾರಿಗಳು ಲಿಖಿತ ರೂಪದಲ್ಲಿ ದೂರು ನೀಡಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ‘ರವಸೆ ನೀಡಿದರು. ಪುರಸಭೆ ಕಚೇರಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಅಧಿಕಾರಿಗಳು, ಸಾರ್ವಜನಿಕರಿಗೆ ಎಷ್ಟು ತೊಂದರೆ ನೀಡಿದ್ದೀರಿ ಎಂಬುದು ತಿಳಿಯುತ್ತಿದೆ.ನಿಮ್ಮಗಳ ಮುಂದೆಯೇ ದೂರುವಂತೆ ಮಾಡಿಕೊಂಡಿದ್ದೀರಿ,ಇನ್ನು ಮುಂದಾದರೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುವಂತಹ ಗುಣಗಳನ್ನ ಮೈಗೂಡಿಸಿಕೊಳ್ಳಿ ಎಂದು ಎಚ್ಚರಿಸಿರುವುದಾಗಿ ತಿಳಿದು ಬಂದಿದೆ. ಡಿವೈಎಸ್‌ಪಿ ಸುನೀಲ್ ಕುಮಾರ್, ಇನ್ಪೆಕ್ಟರ್ ಮೊಹನ್ ರೆಡ್ಡಿ, ಬ್ಯಾಟರಾಯಿಗೌಡ ಸೇರಿದಂತೆ ಇತರ ಸಿಬ್ಬಂದಿವರ್ಗ ಸ್ಥಳದಲ್ಲಿದ್ದು ಪರಿಶೀಲನಾ ಕಾರ್ಯ ನಡಸಿದರು.














