ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕು ಮಡಬೂರು ಗ್ರಾಮದ ಸಮೀಪ ಗುರುವಾರ (ಡಿ.19) ನಡೆದಿದೆ.
ಮಡಬೂರು ಗ್ರಾಮದ ಕೃಷಿಕ ಕೆ.ಕೆ.ಏಲಿಯಾಸ್ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಮೇಯಲು ಕಾಡಿಗೆ ತೆರಳಿದ್ದ ಎಮ್ಮೆ ಬಾರದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗ ಎಮ್ಮೆ ಹುಡುಕಿಕೊಂಡು ಕಾಡಿಗೆ ತೆರಳಿದ್ದರು. ಈ ವೇಳೆ ಆನೆ ಎದುರುಗೊಂಡಿದ್ದು ಆನೆಯನ್ನು ಕಂಡ ಮಗ ಸ್ಥಳದಿಂದ ಓಡಿ ಬಂದಿದ್ದಾನೆ. ಆದರೆ ತಂದೆ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ನ.30 ರಂದು ನರಸಿಂಹ ರಾಜಪುರ ತಾಲೂಕಿನ ಸೀತೂರು ಗ್ರಾಮದ ಉಮೇಶ್ ಗ್ರಾಮಕ್ಕೆ ನುಗ್ಗಿದ್ದ ಆನೆಯನ್ನು ಓಡಿಸಲು ಮುಂದದಾಗ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು. ಈ ಘಟನೆ ನಡೆದು 20 ದಿನ ಕಳೆದಿದ್ದು ಘಟನೆ ಮಾಸುವ ಮುನ್ನಾ ಮಡಬೂರು ಗ್ರಾಮದ ಕೆ.ಕೆ.ಏಲಿಯಾಸ್ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮಲೆನಾಡು ಭಾಗದಲ್ಲಿ ಆನೆಗಳ ದಾಳಿಗೆ ಕಡಿವಾಣ ಹಾಕುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.