ಮನೆ ರಾಜ್ಯ ಹಾವೇರಿಯಲ್ಲಿ ಕಾಡಾನೆ ಓಡಾಟ – ಗ್ರಾಮಸ್ಥರಲ್ಲಿ ಆತಂಕ..!

ಹಾವೇರಿಯಲ್ಲಿ ಕಾಡಾನೆ ಓಡಾಟ – ಗ್ರಾಮಸ್ಥರಲ್ಲಿ ಆತಂಕ..!

0

ಹಾವೇರಿ : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬ್ಯಾಡಗಿ ಮತ್ತು ರಾಣೇಬೆನ್ನೂರು ತಾಲೂಕಿನಲ್ಲಿ ಕಾಡಾನೆ ಓಡಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.

ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಮತ್ತು ಹಿರೇಅಣಜಿ ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷವಾಗಿತ್ತು. ಇಂದು ರಾಣೇಬೆನ್ನೂರು ತಾಲೂಕಿನ ಕುಸಗೂರ ಗ್ರಾಮದ ಬಳಿ ಆನೆ ಪ್ರತ್ಯಕ್ಷವಾಗಿದೆ. ಕಳೆದ ಮೂರು ದಿನಗಳಿಂದ ಆನೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಒಂದೇ ಕಡೆ ನಿಲ್ಲದೆ ಬೇರೆ ಸ್ಥಳಗಳಿಗೆ ಕಾಡಾನೆ ಹೋಗುತ್ತಿದೆ. ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿ ಮಾಡುತ್ತಾ ಕಂಡಕಂಡಲ್ಲಿ ನುಗ್ಗಿ ಹೋಗುತ್ತಿದೆ. ಗಜರಾಜನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಕಸರತ್ತು ನಡೆಸಿದ್ದಾರೆ. ಸ್ಥಳೀಯರು ಶೀಘ್ರದಲ್ಲೇ ಆನೆಯನ್ನ ಹಿಡಿದು ಬೇರೆ ಸ್ಥಳಕ್ಕೆ ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.