ಮೈಸೂರು : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು 15 ನಿಮಿಷ ಮಾತ್ರ ಮೈಸೂರು ವಿಮಾನ ನಿಲ್ದಾಣದಲ್ಲಿ ಇರಲಿದ್ದಾರೆ. ಹೀಗಾಗಿ ರಾಹುಲ್ ಜೊತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉಭಯ ಕುಶಲೋಪರಿ ಮಾತ್ರ ಮಾಡುವ ಸಾಧ್ಯತೆಯಿದೆ
ಇಂದು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 2:20ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. 15 ನಿಮಿಷದ ಬಳಿಕ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ನಲ್ಲಿ ತಮಿಳುನಾಡಿನ ಗುಡ್ಲುರಿಗೆ ಪ್ರಯಾಣಿಸಲಿದ್ದಾರೆ.
ಸಂಜೆ 5:45 ಕ್ಕೆ ಹೆಲಿಕಾಪ್ಟರ್ನಲ್ಲಿ ತಮಿಳುನಾಡಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಮರಳಲಿದ್ದು, ಸಂಜೆ 6 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ.
ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮಕ್ಕ ಭಾಗಿಯಾಗಲು ಮೈಸೂರಿಗೆ ಬರುತ್ತಿರುವ ಕಾರಣ ಇಂದು ಮಹತ್ತದ ವಿಚಾರ ಬಗ್ಗೆ ಚರ್ಚೆ ನಡೆಯುವುದು ಅನುಮಾನ. ಉಭಯ ಕುಶಲೋಪರಿಗಷ್ಟೇ ಇಂದಿನ ರಾಹುಲ್ ಗಾಂಧಿ – ಸಿಎಂ, ಡಿಸಿಎಂ ಭೇಟಿ ಸೀಮಿತವಾಗಲಿದೆ.














