ಮನೆ ಮನರಂಜನೆ ಆಸ್ಕರ್ ಪ್ರಶಸ್ತಿಗೆ ಹಾಜರಾಗದಂತೆ ವಿಲ್ ಸ್ಮಿತ್ ಗೆ 10 ವರ್ಷ ನಿಷೇಧ

ಆಸ್ಕರ್ ಪ್ರಶಸ್ತಿಗೆ ಹಾಜರಾಗದಂತೆ ವಿಲ್ ಸ್ಮಿತ್ ಗೆ 10 ವರ್ಷ ನಿಷೇಧ

0

ಏಂಜಲೀಸ್(Anglais) : ಆಸ್ಕರ್ ಪ್ರಶಸ್ತಿ(Oscar award) ವಿತರಣೆ ಸಮಾರಂಭದಲ್ಲಿ ಸಹ ನಟನ ಕೆನ್ನೆಗೆ ಬಾರಿಸಿದ್ದ ವಿಲ್ ಸ್ಮಿತ್(will smith) ಅವರನ್ನು ಹಾಲಿವುಡ್ ಫಿಲ್ಮ್ ಅಕಾಡೆಮಿಯು(Hollywood film academy) 10 ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗದಂತೆ ನಿಷೇಧಿಸಿದೆ.

ವಿಲ್ ಸ್ಮಿತ್ ಅವರ ರಾಜೀನಾಮೆಯನ್ನು ಅಂಗೀಕರಿಸುವುದರ ಜೊತೆಗೆ ಏಪ್ರಿಲ್ 8, 2022 ರಿಂದ 10 ವರ್ಷಗಳ ಅವಧಿಗೆ ಆಸ್ಕರ್ ಪ್ರಶಸ್ತಿ ಸಮಾರಂಭಗಳಿಗೆ ಭೌತಿಕ ಮತ್ತು ವರ್ಚುವಲ್ ಆಗಿ ಹಾಜರಾಗಲು ಅನುಮತಿ ನೀಡದಿರಲು ಮಂಡಳಿಯ ಸಭೆ ನಿರ್ಧರಿಸಿದೆ’ ಎಂದು ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಸ್ಕರ್ ಪ್ರಶಸ್ತಿ ಸಮಾರಂಭವು ಹಿಂದಿನ ವರ್ಷ ಸಿನಿಮಾ ರಂಗದಲ್ಲಿ ಅಸಾಧಾರಣ ಕೆಲಸ ಮಾಡಿದ ವ್ಯಕ್ತಿಗಳ ಸಂಭ್ರಮದ ಕ್ಷಣವಾಗಿತ್ತು. ಅಂತಹ ಕ್ಷಣಗಳನ್ನು ಹಾಳುಮಾಡಿದ ಸ್ಮಿತ್ ಅವರ ವರ್ತನೆಯು ಸ್ವೀಕಾರರ್ಹವಲ್ಲ ಎಂದು ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವವ ಸ್ಮಿತ್, ‘ನಾನು ಅಕಾಡೆಮಿಯ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಗೌರವಿಸುತ್ತೇನೆ‘ ಎಂದು ಹೇಳಿದ್ದಾರೆ.