ಮನೆ ರಾಜ್ಯ ಮೇಲುಕೋಟೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ: ಬಿ.ವೈ.ವಿಜಯೇಂದ್ರ

ಮೇಲುಕೋಟೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ: ಬಿ.ವೈ.ವಿಜಯೇಂದ್ರ

0

ಪಾಂಡವಪುರ:ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಪರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಟ್ಟಣದಲ್ಲಿ ಶನಿವಾರ ರೋಡ್ ಶೋ ನಡೆಸುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು

Join Our Whatsapp Group

ಪಟ್ಟಣದ ಐದು ದೀಪದ ವೃತ್ತದ ಬಳಿ ೧೧.೪೫ಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನು ಸ್ವಾಗತಿಸಿದರು. ಬಳಿಕ ತೆರೆದ ವಾಹನ ಏರಿದ ವಿಜಯೇಂದ್ರ ಅವರು ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಹಾಗೂ ಮುಖಂಡರೊಂದಿಗೆ ರೋಡ್ ಶೋ ನಡೆಸಿ ಮತಯಾಚಿಸಿದರು.

ಐದು ದೀಪವೃತ್ತದಿಂದ ಆರಂಭಗೊಂಡ ಕಾರ‍್ಯಕರ್ತರ ಬೈಕ್ ರ‍್ಯಾಲಿಯೂ ಮಂಡ್ಯ ಸರ್ಕಲ್, ಚರ್ಚೆ ರಸ್ತೆ, ಕಾಮನಚೌಕ, ಪೊಲೀಸ್ ಸ್ಟೇಷನ್ ರಸ್ತೆ, ಪೇಟೆಬೀದಿ, ಪೋಸ್ಟ್ಆಫೀಸ್ ಸರ್ಕಲ್, ವಿಜಯ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಸ್ತೆ ಮಾರ್ಗವಾಗಿ ಹಳೇಬಸ್ ನಿಲ್ದಾಣಕ್ಕೆ ಆಗಮಿಸಿತು. ರೋಡ್ ಶೋ ಉದ್ದಕ್ಕೂ ಕರ‍್ಯಕರ್ತರು, ಬೆಂಬಲಿಗರು ಬಿಜೆಪಿ ಅಭ್ಯರ್ಥಿಯ ಪರವಾಗಿ ಘೋಷಣೆಮೊಳಗಿಸಿ ಸಂಭ್ರಮಿಸಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತಮ ನಾಯಕನ ಹುಡುಕಾಟದಲ್ಲಿದ್ದೆವು.ಅತ್ಯುತ್ತಮ ಸಂಘಟನಾಕಾರರಾದ ಡಾ.ಎನ್.ಎಸ್.ಇಂದ್ರೇಶ್ ಎಂಬ ಸಮರ್ಥ ಅಭ್ಯರ್ಥಿ ನಮಗೆ ಸಿಕ್ಕಿದ್ದಾರೆ. ಕೆ.ಆರ್.ಪೇಟೆಯ ಉಪ ಚುನಾವಣೆಯ ಮಾದರಿಯಲ್ಲಿಯೇ ಮೇಲುಕೋಟೆ ಕ್ಷೇತ್ರದಲ್ಲೂ ನಾವು ವಿಜಯ ಪತಾಕೆ ಹಾರಿಸಲಿದ್ದೇವೆ ಎಂದರು.

ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ  ಮತದಾರರಿಗೆ ತಿಳಿಸಿ ಬಿಜೆಪಿ ಗೆಲ್ಲಿಸಲು ಶ್ರಮ ಪಡಬೇಕು, ಮೇ.೧೩ಕ್ಕೆ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಗೆಲುವು ರಾಜ್ಯಕ್ಕೆ ಮೊದಲಾಗಬೇಕು. ನಾನು ಈಗಾಗಲೇ ವರುಣಾ, ಹನೂರು, ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಚಾರ ಮುಗಿಸಿ ಬಂದಿದ್ದೇನೆ. ಕಡೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸುಭದ್ರವಾಗಿದ್ದು, ನಾವು ಈ ಬಾರಿ ಇಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ ಮಾತನಾಡಿ, ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಚುನಾವಣಾ ಪ್ರಚಾರ ನಡೆಸಿದ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅದರಂತೆ ಮೇಲುಕೋಟೆ ಕ್ಷೇತ್ರದಲ್ಲೂ ಈ ಬಾರಿ ಕಮಲ ಅರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮೈಲ್ಯಾಕ್ ಮಾಜಿ ಅಧ್ಯಕ್ಷ ರಘು ಕೌಟಿಲ್ಯ, ಮೇಲುಕೋಟೆ ಉಸ್ತುವಾರಿ ಸುನಿಲ್ ಕುಮಾರ್ ಯಾದವ್, ಮನ್‌ಮುಲ್ ನಿರ್ದೇಶಕಿ ರೂಪ, ರೈಸ್‌ಮಿಲ್ ತಮ್ಮಣ್ಣ, ಮೈ ಶುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ತಾಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ಹೆಚ್.ಎನ್.ಮಂಜುನಾಥ್, ಶ್ರೀಧರ, ಎಸ್‌ಎನ್‌ಟಿ ಸೋಮಶೇಖರ್, ತಾಪಂ ಮಾಜಿ ಸದಸ್ಯ ಮಂಗಳ ನವೀನ್, ಚಿಕ್ಕಮರಳಿ ನವೀನ, ಡಾ.ಇಂದ್ರೇಶ್ ಪತ್ನಿ ಪರಿಮಳ ಇಂದ್ರೇಶ್, ಪುಷ್ಪ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ ಬಾಬು, ಮರಿಸ್ವಾಮಿಗೌಡ, ಹೊನ್ನಗಿರಿಗೌಡ, ಮೈನ್‌ಮುಲ್ ಮಾಜಿ ನಿರ್ದೇಶಕ ಅಶೋಕ್, ಕೆ.ಎಲ್.ಆನಂದ್, ಸಂದೇಶ್, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಹಲವರಿದ್ದರು.

ಹಿಂದಿನ ಲೇಖನಚಾಂದಿನಿ ಬಾರ್ ಚಿತ್ರ ವಿಮರ್ಶೆ
ಮುಂದಿನ ಲೇಖನಬೆಂಗಳೂರು-ಮೈಸೂರು ಎಕ್ಸ್ ‍ಪ್ರೆಸ್ ಹೈವೆಯಲ್ಲಿ ಅಪಘಾತ: ಒಂದೇ ಕುಟುಂಬದ ಮೂವರು ಸಾವು