ಮನೆ ರಾಜ್ಯ ವಾಕಿಂಗ್ ಮಾಡೋವಾಗ ಏಕಾಏಕಿ ಮಹಿಳೆ ಮೇಲೆ ನಾಯಿ ದಾಳಿ – 50ಕ್ಕೂ ಹೆಚ್ಚು ಹೊಲಿಗೆ..!

ವಾಕಿಂಗ್ ಮಾಡೋವಾಗ ಏಕಾಏಕಿ ಮಹಿಳೆ ಮೇಲೆ ನಾಯಿ ದಾಳಿ – 50ಕ್ಕೂ ಹೆಚ್ಚು ಹೊಲಿಗೆ..!

0

ಬೆಂಗಳೂರು : ವಾಕಿಂಗ್ ಮಾಡೋವಾಗ ಏಕಾಏಕಿ ನಾಯಿ ಕಚ್ಚಿದ ಪರಿಣಾಮ ಮಹಿಳೆಯೊಬ್ಬರ ಮುಖ, ಕತ್ತಿಗೆ ಗಾಯವಾಗಿ 50ಕ್ಕೂ ಹೆಚ್ಚು ಹೊಲಿಗೆ ಹಾಕಿರುವ ಘಟನೆ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆ ಬೆಳಿಗ್ಗೆ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ನಾಯಿ ಏಕಾಏಕಿ ಮಹಿಳೆಯ ಮೇಲೆ ದಾಳಿ ಮಾಡಿ, ಮುಖ, ಕೈ ಹಾಗೂ ಕಾಲಿಗೆ ಗಾಯ ಮಾಡಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖ ಹಾಗೂ ಕತ್ತಿನ ಬಳಿ 50ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಹಿಳೆಯ ಪತಿ ಅಮರೇಶ್ ರೆಡ್ಡಿ ಎಂಬುವವರ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಮರೇಶ್ ರೆಡ್ಡಿಯ ನಿರ್ಲಕ್ಷ್ಯದಿಂದ ನಾಯಿ ದಾಳಿ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.