ಮೈಸೂರು: ಲಿವಿಂಗ್ ಟುಗೆದರ್’ನಲ್ಲಿದ್ದ ಮಹಿಳೆ ಹತ್ಯೆ ಪ್ರಕರಣ ಸಂಬಂಧ ಪ್ರಿಯಕರನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಏಳು ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದು ಪ್ರಿಯಕರನೊಂದಿಗೆ ಲಿವಿಂಗ್ ಟುಗೆದರ್’ನಲ್ಲಿದ್ದ ಸೌಮ್ಯ(28) ಎಂಬವರು ಮೃತ ದುರ್ದೈವಿ.
ಶನಿವಾರ ಸೌಮ್ಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಿಯಕರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಿಪುರಂ ಠಾಣೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.














