ಕೋಝಿಕೋಡ್: ಕೇರಳದ ಕೋಝಿಕೋಡ್‌ನಲ್ಲಿ ನಿಜಕ್ಕೂ ಪವಾಡವೋ ಎಂಬಂತೆ ಬದುಕುಳಿದ ಅಪಘಾತದ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿಬಿಳಿಸುತ್ತಿದೆ. ಒಂದು ಕ್ಷಣದಲ್ಲಿ ಜೀವ ಹೋಗಬಹುದಾದ ಘಟನೆಯಲ್ಲಿ ಮಹಿಳೆಯೊಬ್ಬರು ಪವಾಡ ಸದೃಶದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕೋಝಿಕೋಡ್ ಜಿಲ್ಲೆಯ ಪೆರಿಂಗಲಂ ಪಟ್ಟಣದ ಎತ್ತರದ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಮುಂದೆ ಇದ್ದ ಟ್ರಕ್ ಏಕಾಏಕಿ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು. ಆಗ ಹೆದರುತ್ತಾ ಸ್ಕೂಟರ್ ನಿಯಂತ್ರಣ ತಪ್ಪಿದ ಮಹಿಳೆ ರಸ್ತೆಗೆ ಬಿದ್ದರು.
ಅಚ್ಚರಿಯ ವಿಷಯವೆಂದರೆ, ಆ ಟ್ರಕ್ ಆಕೆಯ ಕಾಲ ಬಳಿಯಿಂದ ಹಾದುಹೋಗಿ, ನಿಂತಿದ್ದ ಸ್ಕೂಟರ್‌ನನ್ನು ಸಂಪೂರ್ಣವಾಗಿ ಅಪ್ಪಚ್ಚಿ ಮಾಡಿತು. ಕೆಲವೇ ಸೆಕೆಂಡುಗಳ ಅಂತರದಲ್ಲಿ ಮಹಿಳೆಯೂ ಅದರಡಿ ಸಿಲುಕಬಹುದಿತ್ತು. ಆಕೆ ಸ್ವಲ್ಪ ದೂರದಲ್ಲಿ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಪವಾಡಸದೃಶ ಘಟನೆ ರಸ್ತೆಯ ಬಳಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸದ್ಯ ಸಂಪೂರ್ಣವಾಗಿ ದಾಖಲಾಗಿದ್ದು, ಅದರ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲರು ಆಕೆಯ ತಾಳ್ಮೆ ಮತ್ತು ಅದೃಷ್ಟವನ್ನು ಮೆಚ್ಚಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಘಟನೆಯ ನಂತರ ಸ್ಥಳೀಯರು ತಕ್ಷಣವೇ ಆ ಮಹಿಳೆಗೆ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆಕೆಗೆ ಸಣ್ಣ ಪುಟ್ಟ ಗಾಯಗಳಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.















