ಮನೆ ಆರೋಗ್ಯ ಮಹಿಳೆಯರಿಗೆ ಈ ಕಾರಣಗಳಿಂದಲೂ ಹಾರ್ಟ್ ಅಟ್ಯಾಕ್ ಬರಬಹುದು!

ಮಹಿಳೆಯರಿಗೆ ಈ ಕಾರಣಗಳಿಂದಲೂ ಹಾರ್ಟ್ ಅಟ್ಯಾಕ್ ಬರಬಹುದು!

0

ಮನುಷ್ಯನಿಗೆ ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ! ನನಗೆ ಹೇಗೆ ಈ ಕಾಯಿಲೆ ಕಾಣಿಸಿಕೊಂಡಿತು ಎನ್ನುವುದು ನನಗೆ ಗೊತ್ತಾ ಗುತ್ತಿಲ್ಲ ಎಂದು ನಮಗೆ-ನಾವೇ ಪ್ರಶ್ನೆ ಮಾಡಿ ಕೊಳ್ಳುತ್ತೇವೆ! ಎಷ್ಟೇ ಆರೋಗ್ಯಕಾರಿ ಜೀವನ ನಡೆಸಿದರೂ ಕೂಡ, ಹೇಗಾದರೂ ಒಂದು ರೂಪದಲ್ಲಿ ಕೆಲವೊಂದು ಕಾಯಿಲೆಗಳು ನಮ್ಮ ದೇಹವನ್ನು ಸೇರಿಕೊಂಡು ಆರೋಗ್ಯ ಸಮಸ್ಯೆ ಗಳನ್ನು ಉಂಟು ಮಾಡಿದ ಬಳಿಕವಷ್ಟೇ ನಮಗೆ ತಿಳಿಯುವುದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಲಕ್ಷಣಗಳನ್ನು ಕಡೆಗಣಿಸುವುದು!

Join Our Whatsapp Group


ಆದರೆ ಕೆಲವೊಮ್ಮೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ, ನಮ್ಮ ಆರೋಗ್ಯದಲ್ಲಿ ಉಂಟಾಗುವ ಕೆಲವೊಂದು ಹೃದಯಕ್ಕೆ ಸಂಬಂಧ ಪಟ್ಟ ಲಕ್ಷಣ ಗಳನ್ನು ಕಡೆಗಣಿಸುತ್ತೇವೆ. ಕೊನೆಗೆ ಇದೇ ನಿರ್ಲಕ್ಷ್ಯದಿಂದಾಗಿ ಮುಂದೆ ದೊಡ್ಡ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.
ಸಕ್ಕರೆಕಾಯಿಲೆ ಇರುವವರಲ್ಲಿ…

  • ಸಕ್ಕರೆಕಾಯಿಲೆ ಸೈಲೆಂಟ್ ಕಿಲ್ಲರ್ ಕಾಯಿಲೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ.
  • ಒಂದು ವೇಳೆ ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣಕ್ಕೆ ಸಿಗದೇ ಹೋದರೆ, ಕೊನೆಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
  • ಅದರಲ್ಲೂ ಯಾವ ಮಹಿಳೆಯರಿಗೆ ಶುಗರ್ ನಿಯಂತ್ರಣ ತಪ್ಪಿರುತ್ತದೆಯೋ, ಅಂತಹ ಮಹಿಳೆ ಯರಿಗೆ ಹೃದಯಕ್ಕೆ ಸಂಬಂಧ ಪಟ್ಟಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
  • ಹೀಗಾಗಿ ಸಕ್ಕರೆಕಾಯಿಲೆ ಇರುವ ಮಹಿಳೆಯರು, ತಿಂಗಳಿಗೆ ಒಮ್ಮೆ ಆದರೂ ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದರ ಜೊತೆಗೆ, ಈ ಕಾಯಿಲೆ ಕೈಮೀರಿ ಹೋಗದಂತೆ ಎಚ್ದರಿಕೆ ವಹಿಸಬೇಕು.
  • ಇಲ್ಲಾಂದ್ರೆ ಕೊನೆಗೆ ಇದೇ ಕಾರಣಕ್ಕೂ ಕೂಡ ಮಹಿಳೆಯ ರಲ್ಲಿ ಹೃದಯಘಾತ ಆಗುವ ಸಾಧ್ಯತೆ ಯನ್ನು ತಳ್ಳಿ ಹಾಕು ವಂತಿಲ್ಲ!
    ಮಾನಸಿಕ ಒತ್ತಡ ಹಾಗೂ ಚಿಂತನೆ
  • ಮಾನಸಿಕ ಒತ್ತಡ ಹಾಗೂ ಚಿಂತನೆಗಳು ಹೆಚ್ಚಾಗುತ್ತಾ ಹೋದ ಹಾಗೆ ಹೃದಯಕ್ಕೆ ಸಂಬಂಧಪಟ್ಟ, ಕಾಯಿಲೆಗಳು ಕೂಡ ನಮಗೆ ಹತ್ತಿರವಾಗಿ ಬಿಡುತ್ತದೆ ಎನ್ನುವ ಸತ್ಯಾ ಸತ್ಯತೆಯನ್ನು ಮೊದಲು ನಾವು ಅರಿತು ಕೊಳ್ಳಬೇಕು.
  • ಇನ್ನು ಈ ವಿಷ್ಯದಲ್ಲಿ ಮಹಿಳೆಯರ ಬಗ್ಗೆ ಹೇಳುವು ದಾದರೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ತುಂಬಾನೇ ಸೆನ್ಸಿಟಿವ್! ಸಣ್ಣ-ಪುಟ್ಟ ವಿಷ್ಯಕ್ಕೂ ಕೂಡ ಚಿಂತೆಯಲ್ಲಿ ಮುಳುಗುತ್ತಾರೆ.
  • ಇದರಿಂದ ಕೆಲವೊಮ್ಮೆ ಯಾವುದಾದರೂ ಕೆಟ್ಟ ವಿಷಯ ವನ್ನು ಮನಸ್ಸಿಗೆ ತುಂಬಾನೇ ಹಚ್ಚಿಕೊಂಡು ಬಿಡುತ್ತಾರೆ, ಅದರಿಂದ ಮಾನಸಿಕ ಖಿನ್ನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
  • ಇದರ ಪರಿಣಾಮದಿಂದಾಗಿಯೂ ಕೂಡ ಮಹಿಳೆಯರಲ್ಲಿ ಹೃದಯದ ಸಮಸ್ಯೆಗಳು ಕಂಡು ಬರುತ್ತದೆ.
    ಕೆಟ್ಟ ಕೊಲೆಸ್ಟ್ರಾಲ್ ಅಂಶ
  • ಮನುಷ್ಯನ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋದರೆ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತದೆ.
  • ಉದಾಹರಣೆಗೆ ಹೇಳಬೇಕೆಂದ್ರೆ ರಕ್ತದಲ್ಲಿ ಕೆಟ್ಟ ಕೊಲೆ ಸ್ಟ್ರಾಲ್ ಅಂಶ, ಜಾಸ್ತಿಯಾಗುತ್ತಾ ಹೋದಂತೆ, ಮನುಷ್ಯನಿಗೆ ಯಾವುದೇ ಸಂದರ್ಭದಲ್ಲಿ ರಕ್ತದೊತ್ತಡ ಸಮಸ್ಯೆ ಎದುರಾಗಿ, ಹೃದಯಾ ಘಾತ ಅಥವಾ ಪಾರ್ಶ್ವ ವಾಯು ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮಹಿಳೆಯರು ಕೊಲೆಸ್ಟ್ರಾಲ್ ವಿಚಾರ ದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು.
  • ಯಾಕೆಂದ್ರೆ ಇದೇ ಕಾರಣಕ್ಕೂ ಕೂಡ ಮಹಿಳೆಯರಿಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆಯಂತೆ!
    ಧೂಮಪಾನ ಮತ್ತು ಮಧ್ಯಪಾನ
  • ಧೂಮಪಾನ ಮತ್ತು ಮಧ್ಯಪಾನ ಕೆಟ್ಟದ್ದು ಎಂದು ಗೊತ್ತಿದ್ದರೂ ಕೂಡ ಇಂದಿನ ದಿನಗಳಲ್ಲಿ ಎಷ್ಟೋ ಜನರು, ಇದರ ದಾಸ್ಯಕ್ಕೆ ಒಳಗಾಗಿ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ.
  • ಇಂತಹ ಕೆಟ್ಟ ದುರಾಭ್ಯಾಸಕ್ಕೆ ಕೇವಲ ಪುರುಷರು ಮಾತ್ರ ಬಲಿಯಾಗು ತ್ತಿಲ್ಲ ಮಹಿಳೆಯರು ಕೂಡ ಇದರಲ್ಲಿ ತೊಡಗಿ, ತಮ್ಮ ಜೀವನವನ್ನು ತಾವೇ ಹಾಳು ಮಾಡಿ ಕೊಳ್ಳುತ್ತಿದ್ದಾರೆ.
  • ಕೊನೆಗೆ ಇದೇ ಕಾರಣಕ್ಕೂ ಕೂಡ ಮಹಿಳೆಯರಿಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.