ಮನೆ ಆರೋಗ್ಯ ಮಹಿಳೆಯರು ಈ ಸೊಪ್ಪುಗಳನ್ನು ಇಷ್ಟ ಇಲ್ಲಾಂದರೂ ಸೇವಿಸಬೇಕು!

ಮಹಿಳೆಯರು ಈ ಸೊಪ್ಪುಗಳನ್ನು ಇಷ್ಟ ಇಲ್ಲಾಂದರೂ ಸೇವಿಸಬೇಕು!

0

ತರಕಾರಿಗಳು ಹಸಿರೆಲೆ ತರಕಾರಿಗಳು ನೈಸರ್ಗಿಕ ವಾಗಿ ಸಿಗುವ ಉತ್ಪ ನ್ನವಾಗಿರುವುದರಿಂದ, ಇದರಿದಾಗಿ ಆರೋಗ್ಯಕ್ಕೆ ಅಡ್ಡಪರಿಣಾಮಗಳು ತುಂಬಾನೇ ಕಡಿಮೆ ಇರುತ್ತವೆ, ಜೊತೆಗೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಆರೋಗ್ಯ ಲಾಭಗಳನ್ನು ಕೊಡುವಂತಹ ಗುಣಗಳು ಕೂಡ ಇವುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಸಬ್ಬಸಿಗೆ ಸೊಪ್ಪು

• ಮಹಿಳೆಯರು ತಮ್ಮ ಆಹಾರ ಪದ್ಧತಿಯಲ್ಲಿ, ನಿಯಮಿತ ವಾಗಿ ಸಬ್ಬಸಿಗೆ ಸೊಪ್ಪಿನ್ನು ಕೂಡ ಸೇರಿಸುವುದರಿಂದ, ದೀರ್ಘಕಾಲದ ಕಾಯಿಲೆಗಳಾದ ಅಧಿಕರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿ ಯಾಗುತ್ತದೆ.

• ಇನ್ನೂ ಪ್ರಮುಖವಾಗಿ ಹೇಳಬೇಕೆಂದರೆ, ಈ ಸೊಪ್ಪಿನಲ್ಲಿ ಫ್ಲೇವನಾಯ್ಡ್ ಎಂಬ ನೈಸರ್ಗಿಕ ಅಂಶಗಳ ಪ್ರಮಾಣ ಯಥೇಚ್ಛವಾಗಿ ಕಂಡು ಬರುವುದರಿಂದ, ದೇಹದ ಹಾರ್ಮೋನ್ ಏರುಪೇರಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ಮಹಿಳೆಯರ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಹೊಟ್ಟೆ ಸೆಳೆತ, ವಾಕರಿಕೆ ಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.

• ಇಷ್ಟೇ ಅಲ್ಲದೆ, ಈ ಸೊಪ್ಪಿನಲ್ಲಿ ಸಿಗುವ ಇನ್ನಷ್ಟು ಪ್ರಯೋಜನಗಳ ಬಗ್ಗೆ ನೋಡುವುದಾದರೆ, ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ ಅಂಶ, ಅಧಿಕ ಪ್ರಮಾ ಣದಲ್ಲಿ ಸಿಗುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

• ಜೊತೆಗೆ ಕಣ್ಣಿನ ದೃಷ್ಟಿಯ ಸಮಸ್ಯೆಯನ್ನು ಕೂಡ ದೂರಮಾಡುತ್ತದೆ. ಹೀಗಾಗಿ ಮಹಿಳೆಯರು ಆದಷ್ಟು ತಮ್ಮ ಆಹಾರ ಪದ್ಧತಿಯಲ್ಲಿ ಈ ಸೊಪ್ಪನ್ನು ಸೇರಿಸಿ ಕೊಂಡರೆ ಬಹಳ ಒಳ್ಳೆಯದು.

ಮೆಂತೆ ಸೊಪ್ಪು

• ನಮಗೆಲ್ಲಾ ಗೊತ್ತೇ ಇರುವ ಹಾಗೆ, ಮೆಂತೆ ಸೊಪ್ಪು ಕಹಿ ಗುಣ ವನ್ನು ಹೊಂದಿದ್ದರೂ, ಮನುಷ್ಯನ ಆರೋಗ್ಯಕ್ಕೆ ಬೇಕಾ ಗುವ ಎಲ್ಲಾ ರೀತಿಯ ಔಷಧೀಯ ಗುಣಗಳು ಈ ಸೊಪ್ಪಿನಲ್ಲಿ ಕಂಡು ಬರುತ್ತದೆ.

• ಹೀಗಾಗಿ ನಿಯಮಿತವಾಗಿ ಈ ಸೊಪ್ಪನ್ನು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಾ ಬರುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

• ಪ್ರಮುಖವಾಗಿ ಮಧುಮೇಹ, ಇರುವಂತಹ ಮಹಿಳೆ ಯರಿಗೆ ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ. ಯಾಕೆಂದ್ರೆ ಇದರಲ್ಲೂ ಕೂಡ ಅಷ್ಟೇ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಪ್ರಮಾ ಣದಲ್ಲಿ ಕಂಡು ಬರುವುದರಿಂದ, ರಕ್ತ ದಲ್ಲಿ ಸಕ್ಕರೆ ಪ್ರಮಾ ಣವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪು

• ಪಾಲಕ್ ಸೊಪ್ಪು ತನ್ನಲ್ಲಿ ಬೇರೆ ಬಗೆಯ ಪೌಷ್ಟಿಕ ಸತ್ವಗಳ ಜೊತೆಗೆ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಸಿ, ಕಬ್ಬಿಣಾಂಶ, ಆಂಟಿಆಕ್ಸಿಡೆಂಟ್, ಸೋಡಿಯಂ ಅಂಶ, ಒಮೆ ಗಾ-3 ಕೊಬ್ಬಿನಾಮ್ಲಗಳು ಮತ್ತು ಫಾಲಿಕ್ ಆಮ್ಲವನ್ನು ಯಥೇ ಚ್ಛವಾಗಿ ಒಳಗೊಂಡಿರುವುದರಿಂದ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಹಿಡಿದು, ದೇಹದ ತೂಕವನ್ನು ನಿಯಂತ್ರ ಣದಲ್ಲಿಡಲು ನೆರವಿಗೆ ಬರುತ್ತದೆ.

• ಇನ್ನೂ ಪ್ರಮುಖವಾಗಿ ಈ ಪಾಲಕ್ ಸೊಪ್ಪಿನಲ್ಲಿ ಗ್ಲೈಸೆ ಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುವು ದರಿಂದ ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರಿಗೆ ಬಹಳ ಒಳ್ಳೆಯದು.

• ಹೀಗಾಗಿ ಮಹಿಳೆಯರು ಪಾಲಕ್ ಸೊಪ್ಪಿನ ಪಲ್ಯವನ್ನು ನಿಯ ಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು. ಇಲ್ಲಾಂದ್ರೆ ಇದರ ಸೂಪ್ ತಯಾ ರು ಮಾಡಿ ಕೊಂಡು ಕೂಡ ಸೇವನೆ ಮಾಡಬಹುದು

ಹರಿವೆ ಸೊಪ್ಪು

• ಎಲ್ಲಾ ಬಗೆಯ ಸೊಪ್ಪು ತರಕಾರಿಗಳ ಹಾಗೆ ಹರಿವೆ ಸೊಪ್ಪು ಕೂಡ ಅಷ್ಟೇ, ಆರೋಗ್ಯಕ್ಕೆ ಬಹಳ ಒಳ್ಳೆಯದು.

• ಇದರಲ್ಲಿಯೂ ಕೂಡ ಅಷ್ಟೇ, ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಲಭ್ಯವಿರುವುದರಿಂದ, ಉರಿಯೂತಕ್ಕೆ ಕಾರಣವಾಗುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ, ಆರೋಗ್ಯಕ್ಕೆ ಪೋಷಕಾಂಶಗಳನ್ನು ನೀಡುವುದು.

• ಇನ್ನು ಈ ಸೊಪ್ಪಿನಲ್ಲಿ ನಾರಿನಾಂಶ ಹಾಗೂ ಪ್ರೋಟೀನ್ ಅಂಶ ಅತ್ಯಧಿಕ ಮಟ್ಟದಲ್ಲಿ ಕಂಡು ಬರುವುದರಿಂದ, ದೇಹದ ತೂಕವನ್ನು ಇಳಿಸಲು ಹಾಗೂ ಕೆಟ್ಟ ಕೊಲೆ ಸ್ಟ್ರಾಲ್ ತಗ್ಗಿಸಲ ನೆರವಾಗುತ್ತದೆ. ಅಷ್ಟೇ ಅಲ್ಲದೆ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಕೂಡ ದೂರ ಮಾಡಲು ನೆರವಾಗುತ್ತದೆ.