ಮನೆ ರಾಜ್ಯ ಅ‌.15ರಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ:  ಪ್ರೊ.ಕೆ.ಎಸ್.ರಂಗಪ್ಪ

ಅ‌.15ರಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ:  ಪ್ರೊ.ಕೆ.ಎಸ್.ರಂಗಪ್ಪ

0

ಮೈಸೂರು(Mysuru): ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ, ಮೈಸೂರು ವಿವಿಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಬಗ್ಗೆ ಅ. 15ರಂದು ಕಾರ್ಯಾಗಾರ ನಡೆಸಲಾಗುವುದು ಎಂದು ಮೈಸೂರು ವಿವಿ ವಿಶ್ರಾಂತಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅಂದು ಬೆಳಗ್ಗೆ11ಕ್ಕೆ ನಡೆಯಲಿರುವ ಕಾರ್ಯಾಗಾರವನ್ನು ಶಿಕ್ಷಣ ತಜ್ಞ ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭಾಗವಹಿಸಲಿದ್ದಾರೆ‌ ಎಂದು ಹೇಳಿದರು.

ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ 2020ರ ಮೊದಲನೇ ಸ್ನಾತಕ ವರ್ಷದ ಅನುಷ್ಠಾನ ರಾಜ್ಯ ಮಟ್ಟದಲ್ಲಿ ಮುಗಿದು, ವಿದ್ಯಾರ್ಥಿಗಳು, 2ನೇ ಸ್ನಾತಕ ವರ್ಷದ ಅನುಷ್ಠಾನದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅದಾಗ್ಯೂ  ಸ್ನಾತಕ ಪದವಿ ಕಾಲೇಜುಗಳು, ಸಂಬಂಧಿಸಿದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹಲವಾರು ನ್ಯೂನತೆಗಳಲ್ಲಿದ್ದು, ಅವುಗಳನ್ನು ಗುರುತಿಸಿ, ಪರಿಹಾರ ಸೂಚಿಸುವ ದಿಶೆಯಲ್ಲಿ “Forum of Former Vice Chancellors of Karnataka” ಸಮಿತಿಯೊಂದನ್ನು ರಚಿಸಲಾಗಿದೆ. ಕಳೆದ 2 ತಿಂಗಳಿನಿಂದ ಇದು ಕಾರ್ಯೋನ್ಮುಖವಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಡಾ.ಎನ್. ರಾಮೇಗೌಡ, ಸಮಿತಿಯ ಸದಸ್ಯರಾದ ಪ್ರೊ.ನಿರಂಜನ್ ಇದ್ದರು.

ಹಿಂದಿನ ಲೇಖನಬೆಳಗಾವಿ ಯುವತಿಯ ಅನುಮಾನಾಸ್ಪದ ಸಾವು: ಅತ್ಯಾಚಾರ, ಕೊಲೆ ಶಂಕೆ
ಮುಂದಿನ ಲೇಖನಕಸಾಪ  ಮೈಸೂರು ನಗರ ಅಧ್ಯಕ್ಷರಾಗಿ ಕೆ. ಎಸ್. ಶಿವರಾಮು ನೇಮಕ