ಮೈಸೂರು (Mysuru): ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ನಗರದಲ್ಲಿ ಇತ್ತೀಚೆಗೆ ಜಾಗೃತಿ ಜಾಥಾ ನಡೆಸಲಾಯಿತು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಚೈಲ್ಡ್ ಲೈನ್-1098 ಮೈಸೂರು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾಗೆ ಸಹಾಯಕ ಕಾರ್ಮಿಕ ಆಯುಕ್ತರಾದ ನಾಜಿಯ ಸುಲ್ತಾನ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಡಿ.ಕೆ.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು.
ಜಾಥವು ಪಬ್ಲಿಕ್ ಶಾಲೆಯ ಆವರಣದಿಂದ ಆರಂಭವಾಗಿ ಕುರಿಮಂಡಿ, ರಾಜೇಂದ್ರನಗರ, ಎನ್. ಆರ್.ಠಾಣೆಯ ಮೂಲಕ ಪುನಃ ಶಾಲೆಯ ಆವರಣದಲ್ಲಿ ಮುಕ್ತಾಯವಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಧನಂಜಯ ಅವರು, ಮಕ್ಕಳ ಹಕ್ಕುಗಳ ಬಗ್ಗೆ, ಬಾಲಕರ್ಮಿಕತೆಯ ಬಗ್ಗೆ, ಬಾಲಕರ್ಮಿಕತೆಗೆ ಕಾರಣಗಳು, ಪರಿಣಾಮಗಳನ್ನು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕರಾದ ಸರಸ್ವತಿ, ಶಿಶು ಅಭಿವೃದ್ಧಿಯೋಜನಾಧಿಕಾರಿ ಮಧುಸೂದನ್, ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಂಗಾಧರ್, ಶಿಕ್ಷಣ ಇಲಾಖೆಯ ಡಿ.ವೈ.ಪಿ.ಸಿ ರಾಜಶೇಖರ, ಶಿಕ್ಷಣಾಧಿಕಾರಿ ಕಾಂತರಾಜು, ಶಿಕ್ಷಣ ಇಲಾಖೆ ಬಿ.ರ್.ಪಿ. ಶಂಕರ್, ಸಿ.ಆರ್.ಪಿ ಅರವಿಂದ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿ.ಡಬ್ಲ್ಯೂ.ಪಿ.ಓ. ಪ್ರಸನ್ನ ಕುಮಾರ್, ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಮಮತಾ, ಶಾಲೆಯ ಪ್ರಾಂಶುಪಾಲರಾದ ವಿಜೇಯೇಂದ್ರ ಕುಮಾರ್, ಉಪ ಪ್ರಾಂಶುಪಾಲರಾದ ಶ್ವೇತಾ, ಮುಖ್ಯ ಶಿಕ್ಷಕರಾದ ಶರ್ಮಿಳಾ, ಶಾಲೆಯ ಹಾಗೂ ಚೈಲ್ಡ್ ಲೈನ್-1098 ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.