ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ತಂಡ ನೆದರ್ಲೆಂಡ್ಸ್ ಜೊತೆಗೆ ಉತ್ತಮ ಅಭ್ಯಾಸ ಪಂದ್ಯವನ್ನಾಡಿತು. 2023ರ ವಿಶ್ವಕಪ್ ನಲ್ಲಿ ಭಾರತ ತಂಡ ಲೀಗ್ ಹಂತದಲ್ಲಿ ಒಂದೂ ಸೋಲನ್ನು ಕಾಣದೇ ಸೆಮಿ ಫೈನಲ್ ಪ್ರವೇಶ ಪಡೆದುಕೊಂಡಿತು. ಬೆಂಗಳೂರಿನಲ್ಲಿ 160 ರನ್ ಗಳ ಗೆಲುವಿನ ನಂತರ, ಭಾರತವು ಸತತ 9 ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ ವಿಶ್ವಕಪ್ ಇತಿಹಾಸದಲ್ಲಿ ತನ್ನ ಸುದೀರ್ಘ ಗೆಲುವಿನ ಸರಣಿಯನ್ನು ದಾಖಲಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಬಳಿಕ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಿಗಧಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆಹಾಕಿತು.
ಈ 410 ರನ್ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್ ತಂಡ 5 ರನ್ ಗೆ ಮೊದಲ ವಿಕೆಟ್ ಉರುಳಿದರೂ, ಎರಡನೇ ವಿಕೆಟ್ ಗೆ ಮ್ಯಾಕ್ಸ್ ಓಡೌಡ್ (30) ಮತ್ತು ಕಾಲಿನ್ ಅರ್ಕಮನ್ (35) 61 ರನ್ ಗಳ ಪಾಲುದಾರಿಕೆ ಮಾಡಿದರು. ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಜೊತೆ ಸ್ಕಾಟ್ ಎಡ್ವರ್ಡ್ಸ್ (17) ಮತ್ತು ಬಾಸ್ ಡಿ ಲೀಡೆ (12) ಕ್ರಮವಾಗಿ 39 ಮತ್ತು 33 ರನ್ ಗಳ ಪಾಲುದಾರಿಕೆ ಮಾಡಿದರು. ಸೈಬ್ರಾಂಡ್ 5 ರನ್ ನಿಂದ ಅರ್ಧಶತಕದಿಂದ ವಂಚಿತರಾದರು.
ಸೈಬ್ರಾಂಡ್ 80 ಬಾಲ್ ಆಡಿ 4 ಬೌಂಡರಿಯಿಂದ 45 ರನ್ ಕಲೆಹಾಕಿದರು. ತೇಜಾ ನಿಡಮನೂರು ಕೊನೆಯಲ್ಲಿ ಹೋರಾಟವನ್ನು ತೋರಿದರು. ಕೆಳ ಕ್ರಮಾಂಕದ ಬ್ಯಾಟರ್ ಗಳ ಜೊತೆಗೆ ಇನ್ನಿಂಗ್ಸ್ ಕಟ್ಟಿದ ಅವರು ಅರ್ಧಶತಕ ಗಳಿಸಿದರು. ಲೋಗನ್ ವ್ಯಾನ್ ಬೀಕ್ (16), ರೋಲೋಫ್ ವ್ಯಾನ್ ಡೆರ್ ಮೆರ್ವೆ (16) ಮತ್ತು ಆರ್ಯನ್ ದತ್ (5) ಜೊತೆಗೆ ಸೇರಿ ವಿಕೆಟ್ ಕಾಯ್ದುಕೊಂಡ ತೇಜಾ 39 ಬಾಲ್ ನಲ್ಲಿ 6ಸಿಕ್ಸ್ ಮತ್ತು 1 ಬೌಂಡರಿಯಿಂದ 54 ರನ್ ಗಳಿಸಿ, 47.5 ಬಾಲ್ ಗೆ 250 ರನ್ ಗಳಿಸಿ ನೆದರ್ಲೆಂಡ್ಸ್ ತಂಡ ಆಲ್ ಔಟ್ ಆದರು. ಇದರಿಂದ ಭಾರತ ತಂಡ 160 ರನ್ ಗಳ ಗೆಲುವು ದಾಖಲಿಸಿತು.