೧೯. ಮೂಲಾ ನಕ್ಷತ್ರದಲ್ಲಿ ಹುಟ್ಟಿದವನು ಸೌಭಾಗ್ಯವಂತನೂ, ದೀರ್ಘ ಆಯುಷ್ಯವುಳ್ಳವನೂ, ವಂಶವನ್ನು ವೃದ್ಧಿ ಮಾಡುವವನೂ ಆಗುತ್ತಾನೆ.
ಚರಣ ಫಲವು : ಮೂಲಾ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ಬಂಧು
ಬಳಗದ ರಕ್ಷಕನೂ ಸುಶೀಲನೂ, ಶಾಂತ ಸ್ವಭಾದವನೂ, ವಿದ್ಯಾ ಭೂಷಣನೂ, ಬಲವಂತನೂ ಆಗುತ್ತಾನೆ. ೨ ನೇ ಚರಣದಲ್ಲಿ ಜನಿಸಿದವನು ಅಲ್ಪ ಸುಖಭೋಗಿಯು ಆದರೆ ದಯೆಧರ್ಮ ಸ್ವಭಾವದನು, ಸತ್ಕಾರ್ಯದಲ್ಲಿ ವಿಶೇಷ ಅಭಿರುಚಿಯುಳ್ಳವನೂ ಜನಾನುರಾಗಿಯೂ, ಸದಾಮೃಷ್ಟಾನ್ನ ಭೋಜನ ಪ್ರೀಯನೂ ಆಗುತ್ತಾನೆ. ೩ ನೇ ಚರಣದಲ್ಲಿ ಜನಿಸಿದವನು ಶ್ರೀಮಂತನೂ, ಒಳ್ಳೇ ಮಾತುಕತೆಯುಳ್ಳವನೂ, ವಿದ್ಯಾವಂತನೂ ಸರಕಾರೀ ಆಡಳಿತದಲ್ಲಿ ನುರಿತವನೂ, ನೀತಿ- ರೀತಿಗಳನ್ನು ಅರಿತು ನಡೆಯುವವನೂ ಆಗುವನು. ೪ ನೇ ಚರಣದಲ್ಲಿ ಜನಿಸಿದವನು ಪರೋಪಕಾರಿಯೂ, ಸುಶೀಲ ಶಾಂತ ಸ್ವಭಾವದವನೂ, ಶ್ರೀಮಂತನೂ ಆಗುವನು.
ಗ್ರಂಥಾಂತರೇ : ಈ ನಕ್ಷತ್ರದಲ್ಲಿ ೬ ಘಳಿಗೆಗಳಲ್ಲಿ ಮೊದಲಿನ ೪ ಘಳಿಗೆಗಳಲ್ಲಿ ಕೂಸು ಜನಿಸಿದರೆ ಆ ಕೂಸಿಗೆ ಪೂರ್ಣ ಕಾಡಾಟಗಳಿವೆ. ನಂತರ ೭ ಘಳಿಗೆಯಲ್ಲಿ ಜನನವಾದರೆ ಕೂಸಿನ ವಂಶದಲ್ಲಿ ಧನನಾಶವುಂಟು. ಆನಂತರ ೧೦ ಘಳಿಗೆಯಲ್ಲಿ ಜನನವಾದರೆ ಕೂಸಿನ ಅಣ್ಣನಿಗೆ ಅರಿಷ್ಟವು, ನಂತರ ಆ ಘಳಿಗೆಯಲ್ಲಿ ಜನನವಾದರೆ ತಾಯಿಗೆ ಅರಿಷ್ಟವು, ನಂತರ ಘಳಿಗೆಯಲ್ಲಿ ಜನನವಾದರೆ ಆ ಕೂಸಿನ ಬಂಧು ಬಳಗದವರಿಗೆಲ್ಲ ಅರಿಷ್ಟವು. ಆನಂತರ ಈ ಘಳಿಗೆಯಲ್ಲಿ ಜನನವಾದರೆ ರಾಜ್ಯದ ಆಡಳಿತೆಯಲ್ಲಿ ಈತನಿಗೆ ದೊಡ್ಡ ಪದವಿಪದ ದೊರೆಯುವದು ಆನಂತರ೬ ಗಳಿಗೆಯಲ್ಲಿ ಜನನವಾದರೆ ರಾಜಮನ್ನಣೆ ಪ್ರಾಪ್ತಿ. ಆನಂತರ ೧೧ ಘಳಿಗೆಯಲ್ಲಿ ಜನನವಾದರೆ ಕೂಸಿಗೆ ಅಲ್ಪಾಯುಷ್ಯವೆಂದು ಭಾವಿಸಬೇಕು.
ಮಾಘ, ಆಷಾಢ, ಆಶ್ವೇಜ ಮತ್ತು ಭಾದ್ರಪದ ಮಾಸಗಳಲ್ಲಿಯಾಗಲೀ, ಅಥವಾ ವೃಷಭ, ವೃಶ್ಚಿಕ, ಸಿಂಹ, ಕುಂಭ ಲಗ್ನಗಳಲ್ಲಿಯಾಗಲಿ ಕೂಸು ಜನಿಸಿದರೆ ಆಗ ಮೂಲಾ ನಕ್ಷತ್ರವು ಸ್ವರ್ಗಲೋಕದಲ್ಲಿರುವದರಿಂದ ಯಾವ ದೋಷಗಳೂ ಉಂಟಾಗುವದಿಲ್ಲ. ವೈಶಾಖ, ಜೇಷ್ಠ, ಮಾರ್ಗಶಿರ ಮತ್ತು ಫಾಲ್ಗುಣ ಮಾಸಗಳಲ್ಲಿಯಾಗಲಿ ಅಥವಾ ಮಿಥುನ ಕನ್ಯಾ, ತುಲಾ ಮೀನಾ ಲಗ್ನಗಳಲ್ಲಿಯಾಗಲೀ ಕೂಸು ಜನಿಸಿದರೆ ಆಗ ಮೂಲಾ ನಕ್ಷತ್ರವು ಪಾತಾಳಲೋಕದಲ್ಲಿ ರುವದರಿಂದ ಯಾವ ದೋಷಗಳೂ ಉಂಟಾಗುವದಿಲ್ಲ ಆದರೆ, ಇನ್ನು ಉಳಿದ ೪ ತಿಂಗಳುಗಳಲ್ಲಿ ಯಾಗಲಿ ೪ ಲಗ್ನಗಳಲ್ಲಿಯಾಗಲೀ (ಚೈತ್ರ, ಶ್ರಾವಣ, ಕಮತ್ತುರ್ತಿಕ ಪುಣ್ಯ ಮಾಸಗಳಲ್ಲಿ ಯಾಗಲಿ ಇಲ್ಲವೆ ಮೇಷ ಕರ್ಕ, ಧನು ಹಾಗೂ ಮಕರ ಲಗ್ನಗಳಲ್ಲಿ) ಕೂಸು ಜನಿಸಿದರೆ ಮಾತ್ರ ಆಗ ಮೂಲಾನಕ್ಷತ್ರವು ಪೃಥ್ವಿಯ (ಜನ್ಮಭೂಮಿ) ಮೇಲಿರುವದ ರಿಂದ ನಿಶ್ಚಯವಾಗಿಯೂ ಕೂಸಿನ ಕುಟುಂಬಕ್ಕೆ ಪೀಡಾಕರವು. ಆದ್ದರಿಂದ ಅವಶ್ಯವಾಗಿ ಶಾಂತಿ ಮಾಡಿಸಬೇಕು. ಹಾಗೂ ಈ ನಕ್ಷತ್ರದ ೧-೨-೩ ನೇ ಚರಣಗಳಲ್ಲಿ ಹೆಣ್ಣು ಕೂಸು ಜನಿಸಿದರೆ, ಹೆಣ್ಣು ಕೂಸಿನ ಮಾವನಿಗೆ ದೋಷವುಂಟು.
ಅಭುಕ್ತಮೂಲದಲ್ಲಿ (ಜೇಷ್ಠಾ ನಕ್ಷತ್ರದ ಅಂತ್ಯದ ೨ ಗಳಿಗೆ, ಮೂಲಾ ನಕ್ಷತ್ರದ ಪ್ರಾರಂಭದ ೨ ಗಳಿಗೆಗಳ ಅವಧಿಗೆ ಅಭುಕ್ತ ಮೂಲವೆಂದು ಹೆಸರು) ಶಿಶುವು ಜನಿಸಿದರೆ ಆ ಶಿಶುವಿನ ತಂದೆಗೆ ಮರಣಪ್ರದ ದೋಷವು ಆದರೆ, ಅಭುಕ್ತ ಮೂಲ ಕಾಲದಲ್ಲಿ ಹುಟ್ಟಿದ ಶಿಶುವು ಕುಲೋದ್ಧಾರಕನೂ ಶ್ರೀಮಂತನೂ ಕೀರ್ತಿವಂತನೂ ದಯಾಭರಿತ ಸ್ವಭಾವ ದವನೂ, ತನ್ನ ದೊಡ್ಡ ಜನಾಂಗದ ಪ್ರಮುಖನೂ, ಅನೇಕ ಬಹು ಅಮೌಲ್ಯವಾದ ವಾಹನಗಳನ್ನು ಹೊಂದಿದವನೂ ಆಗುತ್ತಾನೆ. ಮೂಲಾನಕ್ಷತ್ರದ ಅರಿಷ್ಟ ಕಾಲದಲ್ಲಿ ಶಿಶುವು ಜನಿಸಿದರೆ ಆ ದೋಷ ನಿವಾರಣಾರ್ಥವಾಗಿ ಕೂಸಿನ ತಂದೆಯು ೮ ವರ್ಷಗಳವರೆಗೆ ಕೂಸಿನ ಮುಖ ನೋಡಬಾರದು ಎಂದು ಶಾಸ್ತ್ರವಿದೆ ಆದರೆ, ಕೂಸು ಜನಿಸಿದ ೬ ತಿಂಗಳೊಳಗಾಗಿ ಗೋಮುಖ ಪ್ರಸವ ಶಾಂತಿ ಕ್ರಮವನ್ನು ಶಾಸ್ರೋಕ್ತವಾಗಿ ಮಾಡಬೇಕು. ಇಲ್ಲವೆ ಒಂದು ಹಿಂಡುವ ಎಮ್ಮೆಯನ್ನು ಕರುಸಹಿತ ದಾನ ಮಾಡಿ ಕೂಸಿನ ಮುಖವನ್ನು ನೋಡಬೇಕು.
ವಿಶೇಷ : ಈ ನಕ್ಷತ್ರವು ಶ್ವಾನಯೋನಿ, ರಾಕ್ಷಸಗಣ, ಆದಿನಾಡಿ, ದಾರುಣ ಸಂಜ್ಞೆ, ಸುಲೋನವುಳ್ಳದ್ದು ಈ ನಕ್ಷತ್ರದ ಆರಾಧ್ಯವೃಕ್ಷ ರಾಳದ ಗಿಡ.
೨೦. ಪೂರ್ವಾಷಾಢ ನಕ್ಷತ್ರದಲ್ಲಿ ಹುಟ್ಟಿದವನು ವಿಶೇಷ ನೀರಿನ ದಾಹವುಳ್ಳವನು (ಮೇಲಿಂದ ಮೇಲೆ ನೀರು ಕುಡಿಯುವವನು) ಸುಖ ಸೌಭಾಗ್ಯವಂತನು ಯಾವಾಗಲೂ ಸುರಸ ಸರಸ ಮಾತುಕತೆಗಳಲ್ಲಿ ಅಭಿರುಚಿಯುಳ್ಳವನು, ಒಳ್ಳೇ ಆಚಾರ ವಿಚಾರವಂತನು, ಕುಳಿತು ಅನುಭವಿಸಿದರೂ ಕಡಿಮೆಯಾಗದಂತಹ ಸಮೃದ್ಧ ಸಂಪತ್ತುಳ್ಳವನೂ ಆಗುವನು.
ಚರಣ ಫಲ : ಈ ನಕ್ಷತ್ರದ ೧ ನೇ ಚರಣದಲ್ಲಿ ಹುಟ್ಟಿದವನು ಧೈರ್ಯವಂತನೂ,ದಿಟ್ಟ ಸ್ವಭಾವಿಯೂ, ಸಾಧಾರಣ ಸುಖಿಯೂ, ಅನ್ಯರ ಸಂಪತ್ತಿಗೆ ಆಶೆ ಮಾಡತಕ್ಕವನೂ. ಅಪಹರಣ ಮಾಡುವವನೂ, ಕೋಪಿಯೂ ಆಗುವನು. ೨ ನೇ ಚರಣದಲ್ಲಿ ಜನಿಸಿದವನು ಒಳ್ಳೇ ಮೃದು ನಡೆ-ನುಡಿಗಳನ್ನುಳ್ಳವನೂ, ದಾನ-ಧರ್ಮ ಕಾರ್ಯಗಳಲ್ಲಿ ಸದಾನಿಷ್ಟನೂ ಸತ್ಕಾರ್ಯಗಳಲ್ಲಿ ಮುಂದುವರೆದವನೂ, ಪರೋಪಕಾರಿಯೂ, ದಯೆ-ದಾಕ್ಷಿಣ್ಯಗಳಲ್ಲಿ ಶ್ರೇಷ್ಠನೂ, ಕೊಟ್ಟ ಮಾತನ್ನು ತಪ್ಪದವನೂ ಆಗುತ್ತಾನೆ. ೩ ನೇ ಚರಣದಲ್ಲಿ ಜನಿಸಿದವನು ರಾಜಮನ್ನಣೆ-ಜನ ಮನ್ನಣೆ-ಸಮಾಜದಲ್ಲಿ ಮನ್ನಣೆಯನ್ನು ಹೊಂದುವವನಾಗುತ್ತಾನೆ ಅಂತಃಕರಣ ಹೃದಯದವನಾದ ಈತನು ಸುಶೀಲ ಸ್ವಭಾದವನೂ, ಗುರುದೇವತಾದಿಗಳಲ್ಲಿ ಭಯ-ಭಕ್ತಿಯುಳ್ಳವನೂ, ಸಕಲ ಭೋಗ ಭಾಗ್ಯಗಳನ್ನು ಹೊಂದಿದವನೂ ಆಗುತ್ತಾನೆ. ೪ನೇ ಚರಣದಲ್ಲಿ ಜನಿಸಿದ ಈ ಜಾತಕನು ಆಗಾಗ್ಗೆ ಸಾಧಾರಣ ರೋಗದಿಂದ ಬಳಲುವವನೂ, ಕಿರಿಕಿರಿ ಸ್ವಭಾವದವನೂ ಕೋಪವನ್ನು ಕೂಡಲೇ ಪ್ರಕಟ ಮಾಡುವವನೂ, ಸುಳ್ಳು ಹೇಳುವದರಲ್ಲಿ ಚಾಣಾಕ್ಷನೂ, ವಿಶೇಷವಾಗಿ ಕೆಟ್ಟ ಕೆಲಸಗಳಲ್ಲಿಯೇ ಆಸಕ್ತನಾಗಿರುವನು.
ಗ್ರಂಥಾಂತರೇ : ೩ ನೇ ಚರಣದಲ್ಲಿ ಗಂಡು ಶಿಶುವು ಜನಿಸಿದರೆ ತಂದೆಗೂ ಹೆಣ್ಣುಶಿಶುವು ಜನಿಸಿದರೆ ತಾಯಿಗೂ ದೋಷವು ಈ ದೋಷ ನಿವಾರಣೆಗಾಗಿ ಒಂದು ಹೊಸ ಕಂಚಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ಅದರಲ್ಲಿ ಬೆಳ್ಳಿ ನಾಣ್ಯವನ್ನಿಟ್ಟು ಅದರ ಮೇಲೆ ಬಿಳಿಯ ಹೊಸ ಬಟ್ಟೆಯನ್ನು ಮುಚ್ಚಿ ಅದನ್ನು ಪೂಜ್ಯರಿಗೆ ದಾನ ಕೊಡಬೇಕು. ಆದರೆ ಈ ನಕ್ಷತ್ರದ ೩ ನೇ ಚರಣದಲ್ಲಿ ಜನಿಸಿದವನು ಸಕಲ ಸುಖ- ಸೌಖ್ಯ ಭಾಗ್ಯವಂತನೂ ಸುಶೀಲನೂ ದಯಾಳುವೂ ಗುರು-ಹಿರಿಯರಲ್ಲಿ ಭಯ ಭಕ್ತಿಯುಳ್ಳವನೂ ರಾಜ ಮನ್ನಣೆಯನ್ನು ಪಡೆಯುವವನೂ ಆಗುತ್ತಾನೆ.
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದ ೧ ನೇ ತಿಂಗಳಲ್ಲಿ ಅಜೀರ್ಣ
ದೋಷದಿಂದಾದ ಜ್ವರ ಪೀಡೆಯು. ೩ ನೇ ತಿಂಗಳಲ್ಲಿ ಇಲ್ಲವೇ ೩ ನೇ ವರ್ಷಕ್ಕೆ ಅಗ್ನಿಯಿಂದಾದ ಗಾಯದ ಬಾಧೆಯು ೫ ನೇ ವರ್ಷದಲ್ಲಿ ಶೀತಜ್ವರ ಬಾಧೆಯು. ೮ ನೇ ವರ್ಷದಲ್ಲಿ ಗ್ರಹಗಳ ಪೀಡೆಯು ೧೨ ನೇ ವರ್ಷದಲ್ಲಿ ನೀರಿನ ಕಂಟಕವು. ೧೬ನೇ ವರ್ಷದಲ್ಲಿ ಹಾವು ಚೇಳುಗಳಂಥ ವಿಷಜಂತುಗಳ ಬಾಧೆಯು ೨೦ ನೇ ವರ್ಷದಲ್ಲಿ ವಿರೋಧಿಗಳ ಜ್ಯಾಸ್ತಿ ಉಪಟಳ ೩೦ ನೇ ವರ್ಷದಲ್ಲಿ ಅಪಮೃತ್ಯು ಭಯವು. ಇಲ್ಲವೆ ಕಳ್ಳರಿಂದ ಭಯಾನಕ ಬಾಧೆಯು. ೩೬ ನೇ ವರ್ಷದಲ್ಲಿ ಶತೃಗಳಿಂದ ಬಾಧೆ. ೪೮ ನೇ ವರ್ಷದಲ್ಲಿ ಸನ್ನಿಪಾತದಂಥ ರೋಗ ಭಯವು. ೬೦ ನೇ ವರ್ಷದಲ್ಲಿ ಕಳ್ಳಕಾಕರಿಂದ ಅನಿಷ್ಟ ಯೋಗವು. ಈ ಎಲ್ಲ ಕಂಟಕಾದಿಗಳಿಂದ ಪಾರಾದರೆ ಈ ಜಾತಕನಿಗೆ ೮೦ ವರ್ಷ ಆಯುಷ್ಯವು.
ವಿಶೇಷ : ಈ ನಕ್ಷತ್ರವು ಮಂಗಯೋನಿ, ಮನುಷ್ಯಗಣ, ಮಧ್ಯನಾಡಿ, ಉಗ್ರಸಂಜ್ಞೆ, ಅಂಧಲೋಚನವುಳ್ಳದ್ದು, ಈ ನಕ್ಷತ್ರದ ಆರಾಧ್ಯ ವೃಕ್ಷ ಬೆತ್ತದ ಬಳ್ಳಿ.