ನವದೆಹಲಿ: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ವಿಶ್ವನಾಥ್ ಸುರೇಶ್, ವಂಶಜ್ ಮತ್ತು ದೇವಿಕಾ ಘೋರ್ಪಡೆ ಅವರು ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್’ಷಿಪ್’ನಲ್ಲಿ ಚಿನ್ನದ ಪದಕಗಳಿಗೆ ಮುತ್ತಿಟ್ಟಿದ್ದಾರೆ.
ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪುರುಷರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ವಿಶ್ವನಾಥ್ ಅವರು ಫಿಲಿಪ್ಪೀನ್ಸ್‌ನ ರೋನೆಲ್ ಸುಯೊಮ್ ಅವರನ್ನು ಏಕಪಕ್ಷೀಯವಾಗಿ ಸೋಲಿಸಿದರು.
63.5 ಕಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ವಂಶಜ್ ಫೈನಲ್‌ನಲ್ಲಿ ಜಾರ್ಜಿಯಾದ ದೆಮುರ್ ಕಜೈಯಾ ಅವರನ್ನು ಪರಾಭವಗೊಳಿಸಿದರು.
ಮಹಿಳೆಯರ 52 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ದೇವಿಕಾ ಅವರು ಇಂಗ್ಲೆಂಡ್‌ನ ಲಾರೆನ್ ಮ್ಯಾಕಿ ಸವಾಲು ಮೀರಿದರು.
ಆಶಿಶ್ (54 ಕೆಜಿ) ಮತ್ತು ಭಾವನಾ ಶರ್ಮಾ (ಮಹಿಳೆಯರ 48 ಕೆಜಿ) ಬೆಳ್ಳಿ ಪದಕ ಗೆದ್ದುಕೊಂಂಡರು.
ಪ್ರಶಸ್ತಿ ಸುತ್ತಿನಲ್ಲಿ ಆಶಿಶ್ 1–4ರಿಂದ ಜಪಾನ್‌ನ ಯುತಾ ಸಕಾಯಿ ಎದುರು ಪರಾಭವಗೊಂಡರು.
ಭಾವನಾ ಶರ್ಮಾ ಫೈನಲ್‌ನಲ್ಲಿ 0–5ರಿಂದ ಉಜ್ಬೆಕಿಸ್ತಾನದ ಗುಲ್ಸೆವರ್ ಗ್ಯಾನಿಯೆವಾ ಎದುರು ಸೋತರು.
ತಮನ್ನಾ (50 ಕೆಜಿ), ಕುಂಜರಾಣಿ ದೇವಿ ಥೊಂಗಮ್ (60 ಕೆಜಿ), ಮುಸ್ಕಾನ್ (75 ಕೆಜಿ) ಮತ್ತು ಲಾಶು ಯಾದವ್ (70 ಕೆಜಿ) ಸೆಮಿಫೈನಲ್‌ಗಳಲ್ಲಿ ಸೋತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.