ಮನೆ ಮನೆ ಮದ್ದು ಹೊಟ್ಟೆಯಲ್ಲಿ ಜಂತು ಹುಳು

ಹೊಟ್ಟೆಯಲ್ಲಿ ಜಂತು ಹುಳು

0

1. ಒಂದು ಕಡಲೆಕಾಳಿನಷ್ಟು ಇಂಗನ್ನು ಬೇವಿನ ಸೊಪ್ಪಿನ ರಸದಲ್ಲಿ ಕುಡಿದರೆ ಜಂತು ಹುಳು  ಮಲದೊಂದಿಗೆ ಬಿಡುವುದು.

Join Our Whatsapp Group

2. ಪರಂಗಿ ಬೀಜವನ್ನು ಒಣಗಿಸಿ, ಪುಡಿ ಮಾಡಿ ಸಕ್ಕರೆ ಬೆರೆಸಿ ಸೇವಿಸಲು ಜಂತುಹುಳು ನಾಶವಾಗುವುದು.

3. ಪರಂಗಿಕಾಯಿಯನ್ನು ಉಪ್ಪು ಮತ್ತು ಕರಿಮೆಣಸಿನ ಪುಡಿಯಲ್ಲಿ ಸೇವಿಸಿದರೆ ಜಂತುಹುಳುಗಳು ಹೊರಬೀಳುವುವು.

4. ಬೆಳ್ಳುಳ್ಳಿಯನ್ನು ಕುಟ್ಟಿ ರಸವನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಲು ಹೊಟ್ಟೆಯಲ್ಲಿ ಹುಳುಗಳ ಕಾಟ ನಿವಾರಣೆ ಆಗುವುದು.

5. ಸಕ್ಕರೆಯ ಜೊತೆಯಲ್ಲಿ ಕುಂಬಳ ಬೀಜವನ್ನು ಅರೆದು, ನೀರಿನಲ್ಲಾಗಲೀ, ಹಾಲಿನಲ್ಲಾಗಲೀ ಸೇವಿಸಿದರೆ ಹುಳು ಬಿದ್ದು ಹೋಗುವುದು.

6. ಮುತ್ತುಗದ ಬೀಜವನ್ನು ನೀರಿನಲ್ಲಿ ಹಾಕಿ ಸಿಪ್ಪೆ ಸುಲಿದು ಒಳಬೀಜವನ್ನು ಕುಟ್ಟಿ ಪುಡಿ ಮಾಡಿ ಸೇವಿಸಲು ಹುಳುಗಳು ನಾಶವಾಗುವುದು.

ಹೊಟ್ಟೆಯಲ್ಲಿ ಹುಣ್ಣು :

1. ಮುಸುಕಿನ ಜೋಳವನ್ನು ತೆನೆ ಸಹಿತವಾಗಿ ಕೆಂಡದ ಮೇಲೆ ಪಕ್ವವಾಗುವವರೆಗೂ ಕಾವು ಕೊಟ್ಟು ಸೇವಿಸಿದರೆ ಹೊಟ್ಟೆ.ಹುಣ್ಣು ಆಗುವುದಿಲ್ಲ.ಜಂತುಹುಳುಗಳು  ಬರುತ್ತವೆ.

2. ಗಣಿಕೆ ಸೊಪ್ಪನ್ನು ಹಾಗೆಯೇ ಸೇವಿಸುವುದು. ಅಥವಾ ಪಲ್ಯ ಮಾಡಿ ತಿಂದರೆ ಹೊಟ್ಟೆ ಹುಣ್ಣು ಮಾಯುವುದು

3. ಒಂದು ತೋಳ ಕೊತ್ತಂಬರಿ ಬೀಜದ ಕಷಾಯ ಮಾಡಿ ಅದರಲ್ಲಿ ಕರಿಮೆಣಸಿನಪುಡಿ ಹಾಕಿ ಕುಡಿದರೆ ಹೊಟ್ಟೆ ಹುಣ್ಣು ಮಾಯುವುದಲ್ಲದೆ ಹುಳುಗಳು ಹೊರಗೆ ಬರುವುವು..

4. ಅಲಸಂದೆ ಕಾಳನ್ನು ಚೆನ್ನಾಗಿ ಬೇಯಿಸಿ,ಅದರ ಕಟ್ಟನ್ನು ಕುಡಿಯುವುದರಿಂದ ಹೊಟ್ಟೆ ಹುಣ್ಣು ಮಾಯವಾಗಿ ಜಂತು ಹುಳುಗಳು ವಿಸರ್ಜನೆ ಯಾಗುವುದು.