ಮನೆ ರಾಜ್ಯ ಯಾದಗಿರಿ: ಸೋಲನ್ನು ಒಪ್ಪಿಕೊಂಡು ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿ ಅಭ್ಯರ್ಥಿ ರಾಜೂಗೌಡ

ಯಾದಗಿರಿ: ಸೋಲನ್ನು ಒಪ್ಪಿಕೊಂಡು ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿ ಅಭ್ಯರ್ಥಿ ರಾಜೂಗೌಡ

0

ಯಾದಗಿರಿ: ಸುರಪುರ ಉಪಚುನಾವಣೆ ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರು 15 ನೇ ಸುತ್ತಿನ ನಂತರ ಹೊರ ನಡೆದರು.

Join Our Whatsapp Group

ಜನಾಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ, 2023 ವಿಧಾನಸಭೆಯಲ್ಲಿ ಕೆಲ ತಪ್ಪುಗಳಿಂದ ಸೋಲನ್ನು ಅನುಭಿಸಿದ್ದೆ, ಆದರೆ ಬಯಸದೆ ಬಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, ಆದರೆ ಅನುಕಂಪ ಹಾಗೂ ರಾಜ್ಯ ಸರ್ಕಾರದ ಪ್ರಭಾವದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ತಮ್ಮ ಸೋಲನ್ನು ಅನಧಿಕೃತವಾಗಿ ಒಪ್ಪಿಕೊಂಡರು.

ಒಂದನೇ ಸುತ್ತಿನಿಂದ ಮತ ಎಣಿಕೆಯಲ್ಲಿ ಹಾಜರಿದ್ದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ 15 ನೇ ಸುತ್ತಿನ ಮತ ಎಣಿಕೆಯ ನಂತರ ತಮ್ಮ ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರ ನಗರದ ಸರಕಾರಿ ಪದವಿಪೂರ್ವ ಕಾಲೇಜನಿಂದ ಹೊರ ನಡೆದು ಹೋದರು.

ನಮ್ಮ ಪಕ್ಷದಲ್ಲಿಯೇ ಮೇಲಿನ ನಾಯಕರು ಕೈ ಬಿಟ್ಟಿದ್ದಾರೆ, ಎಲ್ಲವನ್ನೂ ಮುಂಬರುವ ದಿನಗಳಲ್ಲಿ ಸಂಕ್ಷಿಪ್ತವಾಗಿ ತಿಳಿಸುವೆ. ಬಯಸದೆ ಬಂದ ಉಪಚುನಾವಣೆಯಲ್ಲಿ ಹಿಂದೆ ಸರಿಯದೆ ಎದುರಾಳಿಯ ವಿರುದ್ದ ಕಣದಲ್ಲಿ ಹೋರಾಡಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ರಾಜೂಗೌಡ ಹೇಳಿದರು.

ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ನನ್ನ ಕೈ ಬಿಡದೆ ನಿರಂತರ ಪ್ರಚಾರದಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ದೇವರ ರೂಪದಲ್ಲಿ ನಿಂತ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಅನಂತ ಧನ್ಯವಾದಗಳು ಸಲ್ಲಿಸುವೆ ಎಂದರು.

16 ನೇ ಸುತ್ತಿನಲ್ಲೂ ರಾಜಾ ವೇಣುಗೋಪಾಲ ಮುನ್ನಡೆ ಬಿಜೆಪಿ ಅಭ್ಯರ್ಥಿ ರಾಜೂಗೌಡ 65489 ಮತಗಳು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 84780 ಮತಗಳು 16 ನೇ ಸುತ್ತಿನಲ್ಲಿ ಪಡೆದಿದ್ದಾರೆ. 19291 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮುನ್ನಡೆ ಸಾಧಿಸಿದ್ದಾರೆ.