ಯಾದಗಿರಿ: ಯುಗಾದಿ ಅಮವಾಸ್ಯೆ ದಿನದಂದೇ ವ್ಯಕ್ತಿಯೊಬ್ಬರನ್ನು ಬರ್ಬರ ಹತ್ಯೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ನಡೆದಿದೆ.
ಏವೂರು ಗ್ರಾಮದ ನಿವಾಸಿ ಬಂದೇನವಾಜ್ (40) ಎಂಬಾತನೇ ಕೊಲೆಯಾದ ವ್ಯಕ್ತಿ. ಮಾರಕಾಸ್ತ್ರ ಬಳಸಿ ಬರ್ಬರ ಹತ್ಯೆ ಮಾಡಲಾಗಿದೆ.
ಹೊರಗೆ ಬಹಿರ್ದೆಸೆಗೆ ತೆರಳಿದ ಬಂದೇನವಾಜ್ ರನ್ನು ಮಾರಕಾಸ್ತ್ರಗಳಿಂದ ಸೋಮವಾರ ಬೆಳಗಿನ ಜಾವ ಹತ್ಯೆ ಮಾಡಲಾಗಿದೆ.
ಕೊಲೆ ಘಟನೆಯಿಂದ ಏವೂರು ಗ್ರಾಮಸ್ಥರು ಬೆಚ್ವಿಬಿದ್ದಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಎಸ್ಪಿ ಜಿ. ಸಂಗೀತಾ ಭೇಟಿ, ಪರಿಶೀಲನೆ ನಡೆಸಿದರು. ಕೆಂಭಾವಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube