ಬಾಲಿವುಡ್ (Bollywood) ನಟಿ (Actor) ಯಾಮಿ ಗೌತಮ್ (Yami goutham) ಅವರ ಇನ್ಸ್ಟಾಗ್ರಾಂ(Instagram) ಖಾತೆ ಹ್ಯಾಕ್(Hack) ಆಗಿರುವ ಸಾಧ್ಯತೆ ಇದೆ ಎಂದು ಸ್ವತಃ ನಟಿ ಟ್ವೀಟ್ ಮಾಡಿದ್ದಾರೆ.
ನಿನ್ನೆಯಿಂದ ನನ್ನ ಇನ್ಸ್ಟಾಗ್ರಾಂ ಖಾತೆ ಲಾಗಿನ್ ಆಗುತ್ತಿಲ್ಲ, ಬಹಶಃ ಯಾರೋ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಈಗಾಗಲೇ ಇನ್ಸ್ಟಾಗ್ರಾಂ ತಂಡಕ್ಕೆ ಈ ಬಗ್ಗೆ ದೂರು ನೀಡಲಾಗಿದೆ. ಖಾತೆಯನ್ನು ಮರು ಸ್ಥಾಪನೆ ಮಾಡಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಯಾಮಿ ಗುಪ್ತ ಟ್ವಿಟ್ಟರ್(twitter) ನಲ್ಲಿ ಮಾಹಿತಿ ನೀಡಿದ್ದಾರೆ.
ನನ್ನ ಖಾತೆ ಹ್ಯಾಕ್ ಆಗಿರುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳು ನನ್ನ ಖಾತೆ ಹೆಸರಿನಿಂದ ಬರುವ ಲಿಂಕ್, ವಿಡಿಯೊಗಳನ್ನು ಕ್ಲಿಕ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.