ಮನೆ ಮನರಂಜನೆ ‘ಯಶ್ ತಾಯಿಗೆ ಇದು ಗೊತ್ತಾಗ್ಲಿ’: ಕೊತ್ತಲವಾಡಿ ಕಲಾವಿದಂಗೆ ಬಂದಿಲ್ಲ ಪೇಮೆಂಟ್

‘ಯಶ್ ತಾಯಿಗೆ ಇದು ಗೊತ್ತಾಗ್ಲಿ’: ಕೊತ್ತಲವಾಡಿ ಕಲಾವಿದಂಗೆ ಬಂದಿಲ್ಲ ಪೇಮೆಂಟ್

0

ಕೆಜಿಎಫ್ ಸ್ಟಾರ್ ಯಶ್ ತಾಯಿ ಪುಷ್ಪ ಅವರ ನಿರ್ಮಾಣದ ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದ ಕಲಾವಿದರಿಗೆ ಪೇಮೆಂಟ್ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೇಮೆಂಟ್ ವಿಚಾರವಾಗಿ ಸಹ ಕಲಾವಿದರೊಬ್ಬರು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ರಂದು ಅದ್ದೂರಿಯಾಗಿ ರಿಲೀಸ್ ಆಯಿತು. ಯಶ್ ತಾಯಿ ನಿರ್ಮಾಣದ ಸಿನಿಮಾ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಕೆಲವರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದರು. ಈಗ ಸಿನಿಮಾ ಒಟಿಟಿಗೂ ಕಾಲಿಟ್ಟಿದೆ. ಆದರೆ, ಕೆಲವು ಕಲಾವಿದರಿಗೆ ಇನ್ನೂ ಪೇಮೆಂಟ್ ಆಗಿಲ್ಲವಂತೆ. ಈ ಬಗ್ಗೆ ಚಿತ್ರದ ಕಲಾವಿದ ಮಹೇಶ್ ಗುರು ಅವರು ವಿಡಿಯೋ ಮಾಡಿ ದೂರಿದ್ದಾರೆ. ಯಶ್ ತಾಯಿಗೆ ಈ ವಿಚಾರ ತಲುಪಬೇಕು ಎಂಬುದು ಅವರ ಆಶಯವಾಗಿದೆ.

‘ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ರಿಲೀಸ್ ಆಯಿತು. ಯಶ್ ತಾಯಿ ಪುಷ್ಪ ಅವರು ಇದನ್ನು ನಿರ್ಮಾಣ ಮಾಡಿದ್ದರು. ಪೃಥ್ವಿ ಅಂಬರ್ ಸಹ ನಟನಾಗಿ ನಾನು ಸಿನಿಮಾದಲ್ಲಿ ಇದ್ದೆ. ಮೂರು ತಿಂಗಳಿಗೂ ಅಧಿಕ ಕಾಲ ಸಿನಿಮಾ ಶೂಟ್​ನಲ್ಲಿ ಭಾಗಿ ಆಗಿದ್ದೆ’ ಎಂದು ಅವರು ಹೇಳಿದರು.

ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿರುವ ನಮಗೆ ಸಂಭಾವನೆ ಬಂದಿಲ್ಲ ಸಹ ನಟ ಮಹೇಶ್ ಗುರು ಆರೋಪ ಮಾಡಿದ್ದಾರೆ. ಫೇಸ್ಬುಕ್‌ನಲ್ಲಿ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ನೋಡಿದ್ರೆ ವಿಡಿಯೋ ಡಿಲೀಟ್ ಆಗಿದೆ.

‘ನಾನು ಆಯ್ಕೆ ಆಗಿದ್ದು, ನಿರ್ಮಾಣ ಸಂಸ್ಥೆ ಕಡೆಯಿಂದ ಅಲ್ಲ ನಿರ್ದೇಶಕ ಶ್ರೀರಾಜ್ ಕಡೆಯಿಂದ. ನಿರ್ದೇಶಕರು ಪ್ಯಾಕೇಜ್ ಮಾತನಾಡಿದರು. ಸಿನಿಮಾ ಆರಂಭಕ್ಕೂ ಮೊದಲು ಅಡ್ವಾನ್ಸ್ ಕೊಡಸ್ತೀನಿ ಅಂತ ಹೇಳಿದ್ದರು. ಆದರೆ ಕೊಡಿಸಿಲ್ಲ. ಸಿನಿಮಾ ಮುಗಿದರೂ ಹಣ ಬಂದಿಲ್ಲ ಅಂತ ಹೇಳುತ್ತಲೇ ಬಂದರು. ಡಬ್ಬಿಂಗ್ ಮುಗಿದರೂ ಹಣ ಕೊಡಲಿಲ್ಲ’. ಅವರಿಗೇನು ಗೌರವ ಧನ ಏನಿದೆ ಎಲ್ಲಾ ಕ್ಲಿಯರ್ ಆಗಿದೆ. ನಮ್ಮ ಕಡೆಯಿಂದ ಪೇಮೆಂಟ್ ಕ್ಲಿಯರ್ ಆಗಿದೆ. ಪೊಲೀಸ್ ಸ್ಟೇಷನ್‌ಗೆ ದೂರು ಕೊಡ್ತೀನಿ. ನಮ್ಮ ಕಡೆ ಪೇಮೆಂಟ್ ಕೊಟ್ಟಿರುವ ಬಗ್ಗೆ ದಾಖಲೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.