ಮನೆ ಸುದ್ದಿ ಜಾಲ ಯೋಗ ಪ್ರತಿಯೊಬ್ಬ ಮನುಷ್ಯನ ಜೀವ ರಕ್ಷಕ: ಶ್ರೀವತ್ಸ

ಯೋಗ ಪ್ರತಿಯೊಬ್ಬ ಮನುಷ್ಯನ ಜೀವ ರಕ್ಷಕ: ಶ್ರೀವತ್ಸ

0

ಮೈಸೂರು: ಮಾನವನ ದಿನನಿತ್ಯದ ಜೀವನದಲ್ಲಿ ಪ್ರತಿಯೊಂದು ವಿಚಾರಗಳಿಗೂ ಪರ್ಯಾಯ ಅಂಶಗಳನ್ನು ಕಂಡುಕೊಳ್ಳಬಹುದು ಅದರೆ ಆರೋಗ್ಯದ ವಿಚಾರದಲ್ಲಿ ಬದಲಿ ಮಾರ್ಗಗಳನ್ನು ಕಂಡುಕೊಳಲಾಗುವುದಿಲ್ಲ, ಆರೋಗ್ಯ ಸುಧಾರಣೆ ಮತ್ತು ಚೈತನ್ಯದಿಂದ ಜೀವನ ನಡೆಸಲು ಪ್ರತಿದಿನ ಯೋಗಾಭ್ಯಾಸ ಮಾಡುವುದು ಅವಶ್ಯಕವಾಗಿದೆ. ಯೋಗ ಪ್ರತಿಯೊಬ್ಬ ಮನುಷ್ಯನ ಜೀವ ರಕ್ಷಕ ಅಂಶವಾಗಿದೆ ಪ್ರತಿಯೊಬ್ಬರು ಯೋಗವನ್ನು ಅನುಸರಿಸಿ ಎಂದು ಶಾಸಕರಾದ ಶ್ರೀವತ್ಸರವರು ತಿಳಿಸಿದರು.

Join Our Whatsapp Group

ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮೈಸೂರು ಇವರ ಸಹಯೋಗದೊಂದಿಗೆ ಮೈಸೂರು ಅರಮನೆಯ ಕೋಟೆ ಅಂಜನೇಯ ಸ್ವಾಮಿ ದೇವಾಲಯದ ಅವರದಲ್ಲಿ ಅಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲೂ ಕೂಡ ಯೋಗದ ಮಹತ್ವ ತಿಳಿದು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುತ್ತಿದ್ದಾರೆ. ಜೂನ್ ಅರ್ಥಪೂರ್ಣವಾದ ವಿಶೇಷ ವಿಚಾರಗಳನ್ನು ಒಳಗೊಂಡ ದಿನಾಚರಣೆಗಳ ತಿಂಗಳಾಗಿದೆ. ಯೋಗವು ದೇಶ ವಿದೇಶಗಳಲ್ಲಿ ಅತ್ಯುನ್ನತ ಪ್ರಸಿದ್ಧಿಯನ್ನು ಹೊಂದಿದ್ದು ವಿಶೇಷವಾಗಿ ವಿದೇಶದವರು ಯೋಗಾಭ್ಯಾಸ ಮಾಡಲು ಮೈಸೂರನ್ನು ಆಯ್ಕೆ ಮಾಡಿಕೊಂಡಿರುವುದು ಖುಷಿಯ ವಿಚಾರ ಹಾಗೂ ಯೋಗದ ಉಪಯೋಗವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಆರೋಗ್ಯದಲ್ಲಿ ವೃದ್ಧಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಜೂ.5 ರಂದು ವಿಶ್ವಪರಿಸರ ದಿನ, ಜೂ.14 ರಂದು ರಕ್ತದಾನಿಗಳ ದಿನ, ಜೂ.21 ರಂದು ಯೋಗದಿನಾಚರಣೆಗಳನ್ನು ನಾವು ಆಚರಣೆ ಮಾಡುತ್ತೇವೆ. ಈ ಪ್ರಮುಖ ಮೂರು ದಿನಗಳು ಮಾನವನ ದಿನನಿತ್ಯದ ಜೀವನದಲ್ಲಿ ಅತ್ಯಂತ ಅವಶ್ಯಕವಾಗಿದೆ. ಪರಿಸರ, ರಕ್ತ, ಆರೋಗ್ಯ ಇವುಗಳಿಗೆ ಯಾವುದೇ ಪರ್ಯಾಯವಾದ ಅಂಶಗಳನ್ನು ಕಂಡುಕೊಳ್ಳಲೂ ಸಾಧ್ಯವಿಲ್ಲ ಪ್ರತಿಯೊಬ್ಬರೂ ಕೂಡ ಪರಿಸರ ಸಂರಕ್ಷಣೆ, ರಕ್ತದಾನ ಮತ್ತು ಆರೋಗ್ಯ ಸುಧಾರಣೆ ಉಪಯುಕ್ತವಾದ ಯೋಗವನ್ನು ನಿಮ್ಮ ಜೀವನದಲ್ಲಿ ಅಳವಡಿಕೊಳ್ಳಿ ಎಂದು ತಿಳಿಸಿದರು.

ವಿಧಾನ ಪರಿಷತ್ ಶಾಸಕರಾದ ಸಿ ಎನ್ ಮಂಜೇಗೌಡ ಅವರು ಮಾತನಾಡಿ ಮನುಷ್ಯನ ಒತ್ತಡದ ಜೀವನದಲ್ಲಿಯೂ ಕೂಡ ಉತ್ತಮ ಜೀವನಪದ್ಧತಿ, ಆರೋಗ್ಯ, ಬಲಿಷ್ಠ ಮೈಕಟ್ಟು, ಯೌವನ, ಮುಖದಲ್ಲಿನ ತೇಜಸ್ಸು ಇವುಗಳನ್ನು ಪಡೆದುಕೊಳ್ಳಲು ಯೋಗ ಉಪಯುಕ್ತ ಅಂಶವಾಗಿದೆ. ಯೋಗ ಎಂಬ ವಿಚಾರಕ್ಕೆ ಯಾವುದೇ ಜಾತಿ ಭೇದ ಎಂಬ ವಿಚಾರಗಳ ಅಡಿಯಿಲ್ಲ. ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಯೋಗವನ್ನು ಅನುಸರಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ. ಜಿ ರೂಪ, ನಗರ ಪಾಲಿಕೆ ಸದಸ್ಯರಾದ ಸತೀಶ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರುದ್ರೇಶ್, ಪ್ರಾಂಶುಪಾಲರಾದ ಗಜಾನನ ಹೆಗ್ಡೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಸಿದ್ದರು.