ಮೈಸೂರು (Mysuru): ಇದೇ ತಿಂಗಳ 21 ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಇಂದು ಆಯೋಜಿಸಿದ್ದ ಯೋಗಾಭ್ಯಾಸದಲ್ಲಿ 12 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಪೂರ್ವಭಾವಿಯಾಗಿ ನಡೆದ ಯೋಗಾಭ್ಯಾಸಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು.
ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಮಂಡೂಕಾಸನ, ಮಕರಾಸನ, ಭುಂಜಂಗಾಸನ, ಶಲಭಾಸನ, ಸೇತುಬಂಧಾಸನ, ಪಾದಾಸನ, ಹಲಾಸನ, ಪವನ ಮುಕ್ತಾಸನ, ಶವಾಸನಗಳನ್ನು ವಿದ್ಯಾರ್ಥಿಗಳು, ನಾಗರಿಕರು ಅಭ್ಯಾಸಿಸಿದರು.
ಯೋಗ ಫೆಡರೇಷನ್ ಆಫ್ ಮೈಸೂರು ಪದಾಧಿಕಾರಿಗಳಾದ ಶ್ರೀಹರಿ, ಡಾ.ಪಿ.ಎನ್.ಗಣೇಶ್ ಕುಮಾರ್, ಸತ್ಯನಾರಾಯಣ, ಬಿ.ಪಿ.ಮೂರ್ತಿ, ಶಶಿಕುಮಾರ್ ಅವರು ಯೋಗಭ್ಯಾಸಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಾಣಾಯಾಮ, ಧ್ಯಾನ, ಸಂಕಲ್ಪವನ್ನು ತರಬೇತುದಾರ ಗಣೇಶ್ ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪಸಿಂಹ, ಕೇಂದ್ರ ಮುರಾರ್ಜಿ ದೇಸಾಯಿ ಯೋಗ ಮತ್ತು ನ್ಯಾಚುರೋಪತಿ ಸಂಸ್ಥೆಯ ನಿರ್ದೇಶಕ ಡಾ.ಈಶ್ವರ್ ಬಸವಾರೆಡ್ಡಿ, ಶಾಸಕ ಎಸ್.ಎ.ರಾಮದಾಸ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಎನ್.ವಿ.ಫಣೀಶ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎನ್.ಸುಬ್ರಹ್ಮಣ್ಯ ಇದ್ದರು.
ಜೂ.12 ರಂದು ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.