ಮನೆ ಯೋಗಾಸನ ಗರ್ಭಾಸನ

ಗರ್ಭಾಸನ

0

ಗರ್ಭಾಸನಕ್ಕೆ ಅನೇಕಾರು ಹೆಸರುಗಳುಂಟು. ಸಾಮಾನ್ಯವಾಗಿ ಇದನ್ನು ಗರ್ಭಾಸನವೆಂದೂ ಕರೆಯುತ್ತಾರೆ. ಇದು ಸಹ ಪದ್ಮಾಸನದ ಒಂದು ವ್ಯತ್ಯಾಸ್ತಭಂಗಿಯೇ. ಗರ್ಭದಲ್ಲಿರುವ ಮಗುವಿನ ಆಕಾರವನ್ನು ಹೋಲುವುದೆಂದರೂ, ಈ ವಿವರಣೆಯು ಹೆಚ್ಚು ಅರ್ಥಕಾರಿಯಲ್ಲ. ಏಕೆಂದರೆ ಗರ್ಭದಲ್ಲಿರುವ ಮಗು ಪದ್ಮಾಸನದಲ್ಲಿ ಇರುವುದಿಲ್ಲ. ಅಲ್ಲದೆ ಗರ್ಭದಲ್ಲಿ ಮಗು ಚಿತ್ರದಲ್ಲಿರುವಂತೆ ಇರದೆ ತಲೆಕೆಳಗಾಗಿರುತ್ತದೆ.

Join Our Whatsapp Group

ಮಾಡುವ ಕ್ರಮ : ಗರ್ಭಾಸನ ಮಾಡುವ ಮೊದಲು ಪದ್ಮಾಸನದಲ್ಲಿ ಎಡತೊಡೆಯ ಮೇಲೆ ಬಲಪಾದವನ್ನೂ ಬಲತೊಡೆಯ ಮೇಲೆ ಎಡಪಾದವನ್ನೂ ಹಾಕಿ ಕುಳಿತುಕೊಳ್ಳಬೇಕು. ಕುಕ್ಕುಟಾಸನದಲ್ಲಿ ಹೇಳಿದಂತೆ ಬಲಗಾಲು ಮತ್ತು ಬಲ ಮೀನಖಂಡಗಳ ನಡುವೆ ಬಲಗೈಯನ್ನೂ, ಎಡಗಾಲು ಮತ್ತು ಎಡ ಮೀನಖಂಡಗಳ ನಡುವೆ ಎಡಗೈಯನ್ನೂ ತೂರಿಸಬೇಕು. ಅನಂತರ ಪೃಷ್ಠಭಾಗದ ತಳದ ಕಾಕ್ಸಿಕ್ಸ್ (ಕೊನೆಯ ಮೂಳೆಯ) ಮೇಲೆ ಮೊದಲು ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಸಮತೋಲನ ಬಂದನಂತರವೇ ಬಲಕೈಯಿಂದ ಬಲಕಿವಿಯನ್ನು ಎಡಗೈಯಿಂದ ಎಡಕಿವಿಯನ್ನು ಹಿಡಿದು ಚಿತ್ರದಲ್ಲಿ ತೋರಿಸಿರುವಂತೆ ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಸುಮಾರು 20 ರಿಂದ 30 ಸೆಕೆಂಡುಗಳವರೆಗಿದ್ದು ಅನಂತರ ನಿಧನವಾಗಿ ಪದ್ಮಾಸನದಲ್ಲಿ ಕುಳಿತು ಕ್ರಮೇಣ ಕಾಲುಗಳನ್ನು ಬದಲಾಯಿಸಬೇಕು. ಈ ಸ್ಥಿತಿಯಲ್ಲಿ ಸಮತೋಲನ ಪಡೆಯುವುದು ಅತಿ ಮುಖ್ಯವಾದುದು. ಒಮ್ಮೆ ಸಮತೋಲನ ತಪ್ಪಿತೆಂದರೆ ಬೀಳುತ್ತಾರೆ.

ಲಾಭಗಳು : ಈ ಆಸನದ ಅಭ್ಯಾಸದಿಂದ ದೇಹದ ಪ್ರತಿಯೊಂದು ಅಂಗವೂ ಕುಗ್ಗಿ, ಶರೀರದಲ್ಲಿ  ಲವಲವಿಕೆ ಉಂಟಾಗುವುದು. ರಕ್ತ ಸಂಚಾರ ಸುಸೂತ್ರವಾಗಿ ಹಾಗೂ ವೇಗವಾಗಿ ನಡೆಯುವುದು. ಗರ್ಭಾಸನವು ಕೆಲ ಮಟ್ಟಿಗೆ ಹರ್ನಿಯಾ ರೋಗವನ್ನು ತಡೆಗಟ್ಟುವುದು. ಸತತ ಅಭ್ಯಾಸದಿಂದ ಎದೆ ಹಾಗೂ ಸೊಂಟಗಳಲ್ಲಿ ನವಚೈತನ್ಯ ಮೂಡುವುದು.