ಮನೆ Uncategorized ಗರ್ಭಾವಸ್ಥೆಯಲ್ಲಿ ಮಾಡಬಹುದಾದ ಯೋಗಾಸನಗಳು

ಗರ್ಭಾವಸ್ಥೆಯಲ್ಲಿ ಮಾಡಬಹುದಾದ ಯೋಗಾಸನಗಳು

0

ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಯೋಗ ಹಾಗೂ ವ್ಯಾಯಾಮವನ್ನು ಮಾಡುವುದು ಬಹಳ ಮುಖ್ಯ. ಯೋಗಾಸನ ಮಾಡುವುದರಿಂದ ತಾಯಿ ಹಾಗೂ ಮಗು ಆರೋಗ್ಯದಿಂದಿರುತ್ತಾರೆ.

ಆದರೆ ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ಸಮಯ ಅಥವಾ ತಿಂಗಳಿನಿಂದ ಯೋಗ ಮಾಡಲು ಆರಂಭಿಸಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧ್ಯಯನದ ಪ್ರಕಾರ, ಗರ್ಭಿಣಿಯರು ಸುಖಾಸನ, ಪಶ್ಚಿಮೋತ್ತಾಸನ, ಮಾರ್ಜರಿಯಾಸನ, ವೀರಭದ್ರಾಸನ, ಉತ್ತಾನಾಸನ, ಊರ್ಧ್ವ ಉತ್ತಾನಾಸನ, ವಿರಾಸನ ಮತ್ತು ಉಸ್ತರಾಸನ ಇತ್ಯಾದಿಗಳನ್ನು ಮಾಡಬಹುದು.

ನೀವು ಮೊದಲ ಬಾರಿಗೆ ಯೋಗ ಮಾಡುತ್ತಿದ್ದರೆ, ಮೊದಲ ತ್ರೈಮಾಸಿಕದಲ್ಲಿ ಯೋಗ ಮಾಡಬೇಡಿ. ಈ ಸಮಯದಲ್ಲಿ ಗರ್ಭಪಾತದ ಅಪಾಯವಿದೆ. ಹಾಗಾಗಿ ಯೋಗವನ್ನು ಅಭ್ಯಾಸ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನೀವು ಯೋಗವನ್ನು ಹಿಂದೆಂದೂ ಮಾಡಿಲ್ಲದಿದ್ದರೆ, ಗರ್ಭಧಾರಣೆಯ 14 ನೇ ವಾರದಲ್ಲಿ ನೀವು ಯೋಗವನ್ನು ಪ್ರಾರಂಭಿಸಬಹುದು.

ನೀವು ಐವಿಎಫ್ ಸಹಾಯದಿಂದ ಗರ್ಭಿಣಿಯಾಗಿದ್ದರೆ, ನೀವು 20 ನೇ ವಾರದ ನಂತರ ಯೋಗವನ್ನು ಆರಂಭಿಸಿ. IVF ಚಿಕಿತ್ಸೆಯಲ್ಲಿ ಗರ್ಭಪಾತದ ಅಪಾಯವೂ ಹೆಚ್ಚು, ಆದ್ದರಿಂದ ನೀವು ಈ ಸಮಯದಲ್ಲಿ ಜಾಗರೂಕರಾಗಿರುವುದು ಉತ್ತಮ. ವೈದ್ಯರ ಸಲಹೆ ಮೇರೆಗೆ ಯೋಗವನ್ನು ಆರಂಭಿಸಿ.

ಪ್ರಾರಂಭದಲ್ಲಿ ಸುಲಭವಾದ ಯೋಗಾಸನಗಳನ್ನು ಮಾತ್ರ ಮಾಡಿ. ನಂತರ ನಿಮ್ಮ ಗರ್ಭಧಾರಣೆಯ ಹಂತಕ್ಕೆ ಅನುಗುಣವಾಗಿ ಅದನ್ನು ಬದಲಾಯಿಸಬಹುದು. ಯೋಗಾಸನಗಳನ್ನು ದೇಹದ ಮೇಲೆ ಒತ್ತಡ ಹೇರುವಂತಹ ಯೋಗಾಸನವನ್ನು ಅಭ್ಯಾಸ ಮಾಡದಿರಿ. ಯೋಗಾಸನ ಮಾಡುವ ಸಂದರ್ಭದಲ್ಲಿ ಯಾವುದೇ ನೋವು ಅಥವಾ ಅಸ್ವಸ್ಥತೆ ಕಂಡುಬಂದರೆ ತಕ್ಷಣ ಯೋಗ ಮಾಡುವುದನ್ನು ನಿಲ್ಲಿಸುವುದು ಒಳ್ಳೆಯದು.