ಒಡಹುಟ್ಟಿದವರಲ್ಲಿ ಅನೇಕರು ಒಬ್ಬರಿಗೊಬ್ಬರು ಗಾಢವಾದ ಬಂಧವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಲಿಕ್ಕಾಗದು. ಕೆಲವು ಒಡಹುಟ್ಟಿದವರು ಟಾಮ್ ಆಂಡ್ ಜೆರ್ರಿಯಂತೆ ಕಿತ್ತಾಡುತ್ತಾರೆ, ಜಗಳ ಮಾಡುತ್ತಾರೆ, ಹೊಡೆದಾಡಿಕೊಳ್ಳುತ್ತಾರೆ ಕೂಡಾ. ಒಡಹುಟ್ಟಿದವರಲ್ಲಿ ಮೂಡುವ ಮೊದಲ ವಿರೋಧ ಭಾವನೆಯೆಂದರೆ ಅಸೂಯೆ. ಈ ಅಸೂಯೆಯೇ ಕೆಲವೊಮ್ಮೆ ಒಡಹುಟ್ಟಿದವರ ಸಂಬಂಧದಲ್ಲಿ ಜಗಳವನ್ನು ತಂದಿಡುತ್ತದೆ. ಆದರೆ ಇಂಥವರನ್ನು ಹೊರತುಪಡಿಸಿ ಕೆಲವು ಒಡಹುಟ್ಟಿದವರು ಬೇರೆಯರ ದೃಷ್ಟಿ ಬೀಳುವಂತೆ ಬಾಂಧವ್ಯ ಬೆಳೆಸಿಕೊಂಡಿರುತ್ತಾರೆ. ಜೀವನದಲ್ಲಿ ಏನೇ ಕಷ್ಟಗಳು ಬಂದರೂ, ಖುಷಿಯ ಕ್ಷಣಗಳಿದ್ದರೂ ಅದನ್ನು ಅನುಭವಿಸಲು, ಸಂಭ್ರಮಿಸಲು ಒಡಹುಟ್ಟಿದವರು ಇರುತ್ತಾರೆ. ತಮ್ಮ ತಂಗಿ, ತಮ್ಮ, ಅಣ್ಣ ಅಥವಾ ಅಕ್ಕನೇ ಆಗಿರಲಿ ಸದಾ ಬೆನ್ನ ಹಿಂದೆ ಬೆಂಬಲವಾಗಿ ನಿಲ್ಲುತ್ತಾರೆ.
ಮೇಷ ರಾಶಿ
ಸಹೋದರ ಮತ್ತು ಸಹೋದರಿಯ ನಡುವಿನ ಪ್ರತಿಯೊಂದು ಸಂಬಂಧವು ಆದರ್ಶಪ್ರಾಯವಾಗಿರುವುದಿಲ್ಲ. ಆದರೆ ಮೇಷ ರಾಶಿಯ ಒಡಹುಟ್ಟಿದವರು ಪರಸ್ಪರರನ್ನು ಮೆಚ್ಚುತ್ತಾರೆ ಮತ್ತು ಅಗತ್ಯವಿದ್ದಾಗ ಪರಸ್ಪರ ಅಭಿನಂದನೆಗಳನ್ನು ನೀಡುತ್ತಾರೆ. ಮೇಷ ರಾಶಿಯವರು ಅನೇಕ ವರ್ಷಗಳವರೆಗೂ ತಮ್ಮ ಸಹೋದರಿ ಅಥವಾ ಸಹೋದರನಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮೇಷ ರಾಶಿಯ ಸಹೋದರ ಯಾವಾಗಲೂ ತನ್ನ ಕಿರಿಯ ಸಹೋದರಿಯ ಕಾಳಜಿ ವಹಿಸುತ್ತಾರೆ. ಇವರು ರಹಸ್ಯವನ್ನು ಕಾಪಾಡುವಲ್ಲಿ ಅತ್ಯುತ್ತಮರು. ಇವರನ್ನು ನೀವು ನಂಬಬಹುದು. ಇವರು ನಿಮ್ಮ ತಂದೆ ತಾಯಿಯ ಮುಂದೆಯೂ ನಿಮ್ಮ ರಹಸ್ಯಗಳನ್ನು ಬಿಚ್ಚಿಡರು.
ವೃಷಭ ರಾಶಿ
ವೃಷಭ ರಾಶಿಯ ಒಡಹುಟ್ಟಿದವರನ್ನು ಹೊಂದಿರುವುದು ಎಂದರೆ ನಿಮಗೆ ಅಗತ್ಯವಿರುವಾಗ ನೀವು ಯಾವಾಗಲೂ ಸ್ವಲ್ಪ ಹಣವನ್ನು ನಿಮಗಾಗಿ ಮೀಸಲಿಟ್ಟಿರುವಿರಿ ಎನ್ನಬಹುದು. ಏಕೆಂದರೆ ಅವರು ಹಣವನ್ನು ಉಳಿಸಲು ಇಷ್ಟಪಡುತ್ತಾರೆ ಮತ್ತು ಅವರು ಕುಟುಂಬಕ್ಕೆ ಸಂತೋಷಕ್ಕಾಗಿ ತಮ್ಮನ್ನು ಮೀಸಲಿಡುತ್ತಾರೆ. ಇದಲ್ಲದೆ, ಈ ರಾಶಿಯ ಸಹೋದರರು ಯಾವಾಗಲೂ ನಿಮ್ಮ ಪರವಾಗಿಯೇ ಇರುತ್ತಾರೆ ಎನ್ನುವುದರಲ್ಲಿ ಸಂಶಯ ಬೇಡ ಮತ್ತು ನಿಮ್ಮ ಬಾಲ್ಯ ಮತ್ತು ಹದಿಹರೆಯದ ವರ್ಷಗಳಲ್ಲಿ ನಿಮ್ಮೊಂದಿಗೆಯೇ ಇರುವ ನಿಮ್ಮ ಸಹೋದರ ನಿಮ್ಮ ಉತ್ತಮ ಸ್ನೇಹಿತನಾಗುತ್ತಾನೆ.
ಮಕರ ರಾಶಿ
ಮಕರ ರಾಶಿಯ ಸಹೋದರರು ಎಂಥಹ ಕಷ್ಟದ ಸಂದರ್ಭ ಬಂದರೂ ನಿಮ್ಮೊಡನಿದ್ದಾರೆ ಎನ್ನುವ ಭರವಸೆ ನೀಡುತ್ತಾರೆ. ನಿಮ್ಮ ಮಕ್ಕಳ ಹುಟ್ಟುಹಬ್ಬದ ಸೆಲೆಬ್ರೇಷನ್ ಜವಾಬ್ದಾರಿಯನ್ನು ಅವರೇ ವಹಿಸಿಕೊಳ್ಳುತ್ತಾರೆ ಮಾತ್ರವಲ್ಲ ನಿಮಗೆ ಹುಷಾರು ತಪ್ಪಿದಾಗ ನಿಮ್ಮನ್ನು ವೈದ್ಯರ ಬಳಿ ಕರೆದೊಯ್ಯುವವರೂ ಇವರೇ, ನಿಮ್ಮ ಹುಟ್ಟುಹಬ್ಬವನ್ನಂತೂ ಇವರು ಎಂದಿಗೂ ಮಿಸ್ ಮಾಡಿಕೊಳ್ಳಲಾರರು. ನಿಮ್ಮೊಂದಿಗೆ ಕಳೆಯುವ ಪ್ರಮುಖ ದಿನಗಳನ್ನು ಮಿಸ್ ಮಾಡಿಕೊಂಡರೆ ಅವರನ್ನು ಅವರೇ ದ್ವೇಷಿಸಿಕೊಳ್ಳುತ್ತಾರೆ.
ಗಮನಿಸಿ: ಈ ಗುಣಲಕ್ಷಣಗಳು ಸಾರ್ವತ್ರಿಕವಾಗಿದ್ದರೂ, ಇವುಗಳು ಪ್ರಾಥಮಿಕವಾಗಿ ನಿಮ್ಮ ರಾಶಿಚಕ್ರದ ಗುಣಗಳ ಮೇಲೆ ಕೇಂದ್ರೀಕೃತವಾಗಿವೆ. ಮೇಲಿನ ಎಲ್ಲಾ ಲಕ್ಷಣಗಳು ಕೆಲವೊಮ್ಮೆ ಇರದೆಯೂ ಇರಬಹುದು.