ಮನೆ ಸುದ್ದಿ ಜಾಲ ಬೇಸಿಕ್ ಕಾಮನ್‌ಸೆನ್ಸ್ ಇಟ್ಕೊಂಡು ನನ್ನ ಹತ್ರ ಡೀಲ್ ಮಾಡ್ಬೇಕು – ಡಿಕೆಶಿ ಗರಂ

ಬೇಸಿಕ್ ಕಾಮನ್‌ಸೆನ್ಸ್ ಇಟ್ಕೊಂಡು ನನ್ನ ಹತ್ರ ಡೀಲ್ ಮಾಡ್ಬೇಕು – ಡಿಕೆಶಿ ಗರಂ

0

ಬೆಂಗಳೂರು : ವಿಧಾನಸೌಧದಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲಿಕತ್ವ ಮತ್ತು ನಿರ್ವಹಣಾ ವಿಧೇಯಕ-2025ರ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಿರಣ್ ಹೆಬ್ಬಾರ್ ಎಂಬವರು ಬರೆದ ಪತ್ರದ ವಿಚಾರಕ್ಕೆ ವೇದಿಕೆಯಲ್ಲೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಪತ್ರದ ವಿಚಾರವಾಗಿ, ಕಿರಣ್ ಹೆಬ್ಬಾರ್ ಅನ್ನೋನು ಕಾಂಗ್ರೆಸ್ ಸರ್ಕಾರ ಕೆಲ್ಸ ಮಾಡಿಲ್ಲ ಎಂದು ವಾರ್ನ್ ಮಾಡಿ ಪತ್ರ ಬರೆದಿದ್ದಾನೆ. ನಾವು ಪ್ರಮುಖ ವೋಟ್ ಬ್ಯಾಂಕ್ ಆಗಿದ್ದೇವೆ ಅಂತ ಹೇಳ್ತಾನೆ. ಕೆಲವ್ರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ. ಬೇಸಿಕ್ ಕಾಮನ್‌ಸೆನ್ಸ್ ಇಟ್ಕೊಂಡು ನನ್ನ ಹತ್ರ ಡೀಲ್ ಮಾಡ್ಬೇಕು. ನಂಗೆ ವಾರ್ನ್ ಮಾಡೋದು ಎಚ್ಚರಿಕೆ ಕೊಡೋದು ನಡೆಯಲ್ಲ. ಪ್ರಧಾನಿ, ಕೇಂದ್ರ, ಹೋಂ ಮಿನಿಸ್ಟರ್‌ಗೆ ಹೆದರದೇ ಜೈಲಿಗೆ ಹೋದವನು ನಾನು. ಇವನು ಯಾರು ಹೆಬ್ಬಾರ್‌ಗೆ ಹೆದರರ್ತಿನಾ ಎಂದಿದ್ದಾರೆ.

ಎಲ್ಲರನ್ನೂ ಹೆದರಿಸಿದ ಹಾಗೆ ನನ್ನ ಜೊತೆ ಡೀಲ್ ಮಾಡೋಕೆ ಆಗಲ್ಲ. ಏನ್ ಆಸೆ ಇದೆ ನಮ್ಗೆ? ವೋಟು ಹಾಕ್ತೀರಾ ಅಂತಾ ಅಷ್ಟೇ. ಬಿಜೆಪಿಗೆ ಬೆಂಗಳೂರಿನಲ್ಲಿ ಹೆಚ್ಚು ವೋಟ್‌ ಕೊಟ್ಟಿದ್ದು ತಾನೆ? ಭ್ರಮೆ ಬೇಡ, ಬೆದರಿಕೆ ಹಾಕೋದು ನಮ್ ಸರ್ಕಾರದ ವಿರುದ್ಧ ನಡೆಯಲ್ಲ. ನಾನು ನೇರ ದಿಟ್ಟವಾಗಿ ಮಾತಾನಾಡ್ತೀನಿ. ಬೇಜಾರ್ ಮಾಡ್ಕೋಬೇಡಿ ಎಂದಿದ್ದಾರೆ.

ನಿಮ್ಮನ್ನು ಕರೆಯಬೇಕು ಅಂತ ಯಾವ ನಿಯಮವೂ ಇಲ್ಲ. ಆದರೂ ನಿಮ್ಮನ್ನೆಲ್ಲಾ ಕರೆದು ಈಗ ಮಾತನಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ನಿಮಗೆ ತಲುಪಿಲ್ಲವೇ? ನಮ್ಮ ಗ್ಯಾರಂಟಿ ಯೋಜನೆ ಬಿಜೆಪಿ ತನ್ನ ರಾಜ್ಯಗಳಲ್ಲಿ ಜಾರಿ ಮಾಡುತ್ತಿದೆ. ಇದನ್ನೆಲ್ಲಾ ನೀವು ಮೊದಲು ತಿಳಿದುಕೊಳ್ಳಿ. ನಾನು ಎಲ್ಲರನ್ನೂ ನಾವು ದೂಷಣೆ ಮಾಡ್ತಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟು ನೀವೆಲ್ಲಾ ಬಂದಿದ್ದೀರಿ. ನಾನು ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ, ಜಾಗ ಕೊಟ್ಟಿದ್ದೇನೆ.‌ ನಮ್ಮ ಅಧಿಕಾರಿಗಳು ನಿಮಗೆ ಸಹಕರಿಸಲ್ಲ ಅಂದರೆ ಏನು ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.